MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಫೆಬ್ರವರಿ 5, 2011

ಲೈಪು ಅಂದ್ರೆ ಇಷ್ಟೇನೆ !

ಹೋದವಾರ ನನ್ನ ಓದುಗ ಮಿತ್ರರೊಬ್ಬರು ಒಂದು ಮೇಲ್ ಕಳುಹಿಸಿದ್ದರು ನನಗೆ. ನಾನು ಎರಡು ಮೂರು ಬಾರಿ ಓದಿದೆ . ಹಾಗೆಯೇ ನನಗೆ ಏನೋ ಒಂದು ರೀತಿ ಮಾನಸಿಕ ನೋವು ಶುರುವಾಯ್ತು. ನನ್ನ ಅಕ್ಕನಿಗೆ ಕಳುಹಿಸಿದ ಈ ಮೇಲ್ ಬಗ್ಗೆ ಹೇಳಿದೆ. ಆ ಮೇಲ್ ಕಳುಹಿಸಿದವರು ಶೋಭಾ ಅಂತ . ಅವರಿಗೆ ಜೀವನ ಎಂದರೆ ತುಂಬಾ ಬೋರ್ ಆಗಿದೆ. ಅವರು ಯಾವುದೊ ಕಷ್ಟದಲ್ಲಿ ಇರಬಹುದು. ಸಾಧ್ಯವಾದರೆ ನಾವು ಸಹಾಯ ಮಾಡೋಣ ಎಂದೇ. ಆದರೆ ಆ ವೇಳೆಗೆ ರಾತ್ರಿ ಹನ್ನೋದು ಗಂಟೆ ಆಗಿತ್ತು. ನಮಗೆ ಆ ವೇಳೆಯಲ್ಲಿ ಶೋಭಾ ರವರಿಗೆ ಫೋನ್ ಮಾಡಲು ಇಷ್ಟವಾಗಲಿಲ್ಲ. ಹಾಗಾಗಿ ನಾನು ನನ್ನ ಸೆಲ್ ನಂಬರ್ ರನ್ನು ಕೊಟ್ಟು , ಈ ನಂಬರಿಗೆ ನೀವು ಇಂಥ ವೇಳೆ ಕಾಲ್ ಮಾಡಿ. ಲೈಪ್ಹ್ ಯಾಕೆ ಬೋರ್ ನೋಡೋಣ ಎಂಬರ್ಥದಲ್ಲಿ ಈ ಮೇಲ್ ಕಳುಹಿಸಿದೆ.
ಅವರು ಕಳುಹಿಸಿದ ಈ ಮೇಲ್ ಈ ರೀತಿ ಇತ್ತು.
"ಲೈಪು ಇಷ್ಟೇನೇ.....
ರಾತ್ರಿ ಮಲಗುವಾಗ ,
ಬೆಳಗ್ಗೆ ಎದ್ದೆಳ್ತೇವೆ ಅನ್ನೋ ಯಾವುದೇ ನಂಬಿಕೆ ಇರಲ್ಲ ,
ಆದ್ರೂ ಅಕ್ಕಿ ಉದ್ದಿನ ಬೇಳೇನ ನೀರಲ್ಲಿ ನೆನೆಸಿ ಇಡ್ತೇವೆ,
ಬದುಕಿದ್ರೆ ಇಡ್ಲಿ , ಇಲ್ಲದಿದ್ದರೆ ವಡೆ !

ಮಾರನೆ ದಿನ ಶೋಭಾ ನನಗೆ ಫೋನ್ ಮಾಡಿದರು. ನಾನು ನೀವು ಯಾಕೆ ಜೀವನವನ್ನು ಇಷ್ಟೊಂದು ಬೋರ್ ಮಾಡಿಕೊಂಡಿದ್ದೀರಿ , ಕಾರಣ ಕೇಳಿದೆ. ಅವರು ಹೇಳಿದ ಕಾರಣ ಅದು ಒಂದು ಸಾಮಾನ್ಯ ಕಾರಣ. ಎಲ್ಲರೂ ಅನುಭವಿಸಿದ್ದೆ!. ಆದರೆ ಅದು ಇವರ ಜೀವನಕ್ಕೆ ಆಗಮಿಸಿದ್ದು ಅದೇ ಮೊದಲ ಬಾರಿ ಅಷ್ಟೇ !.

ಕೆಲಸ ಇಲ್ಲದೆ ಕೆಲಸಕ್ಕಾಗಿ ಸುತ್ತಿ ಸುತ್ತಿ ಇವತ್ತು ಬನ್ನಿ , ನಾಳೆ ಬನ್ನಿ ಎಂದು ಓಡಾಡಿ ಓಡಾಡಿ ಸುಸ್ತಾಗಿದ್ದರಷ್ಟೇ !
ನಾನು ಪ್ರಯತ್ನ ಮಾಡುವುದಾಗಿ ಹೇಳಿದೆ. ನನ್ನ ಆಪ್ತ ಮಿತ್ರ ರು ಕೆಲವರಿಗೆ ವಿಷಯ ತಿಳಿಸಿದೆ. ಅವರು ಪ್ರಯತ್ನ ಪಟ್ಟರು. ನಾವು ಶೋಭಾರಿಗೆ ಕೆಲಸಕ್ಕಾಗಿ ಶೋಧನೆ ಮಾಡುತ್ತಿರುವಾಗಲೇ ಶೋಭಾರಿಗೆ ಕೆಲಸ ಎಲ್ಲೋ ಸಿಕ್ಕಿ ಆಗಿತ್ತು.
ವಂದನೆ ಗಳೊಂದಿಗೆ

ನಾಗರಾಜ ಎ.ಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ