ನಮ್ಮ ಓದುಗರಿಗೆ ಅನ್ನಿಸಿರಬಹುದು . ಕಳ್ಳನನ್ನು ನೋಡಿ ಕಲಿ. ಏನಿದರರ್ಥ ! ಒಬ್ಬ ಕಳ್ಳ ಮೊದಲಿಗೆ ತನ್ನ ಮನೆಯ ತಾಯಿಯ ಅಥವಾ ತಂದೆಯ ಅಥವಾ ಅಕ್ಕ ಅಣ್ಣನ ಹಣವನ್ನು ಕಡಿಯಲು ಶುರು ಮಾಡುತ್ತಾನೆ. ಹಾಗೆಯೇ ಮನೆಯವರಿಗೆ ಮೊದಲಿಗೆ ಗೊತ್ತಾಗುವುದಿಲ್ಲ , ದಿನ ಹೋದಂತೆ ಅವರ ಮನೆಯಲ್ಲಿ ಯಾರೂ ಕಳ್ಳರು ಎನ್ನುವುದನ್ನು ಪತ್ತೆ ಮಾಡುತ್ತಾರೆ. ಆತನಿಗೆ ಹಣ ಸಿಗದ ಹಾಗೆ ಜಾಗ್ರತೆ ವಹಿಸುತ್ತಾರೆ. ನಂತರ ಆತ ಮನೆಯಲ್ಲಿ ಹಣ ಸಿಗದಿದ್ದಾಗ ಮನೆಯ ಹೊರಗಿನವರ ಹಣವನ್ನು ಕದ್ದು ನಂತರ ಪ್ರಸಿದ್ಧ ಕಳ್ಳನಾಗಿ ಸಾರ್ವಜನಿಕರಿಂದ , ಪೋಲಿಸರಿಂದ ಒದೆ ತಿಂದು ಕಂಬಿ ಎಣಿಸುತ್ತಾನೆ.
ಆದರೆ ಇಲ್ಲಿ ನೀವು ಮಾಡುವುದು ಕಳ್ಳನ ಕೆಲಸ ! ಕಳ್ಳ ಕಳ್ಳ ತನವನ್ನು ಮನೆಯಲ್ಲಿ ಪ್ರಾರಂಭಿಸಿದ . ತನ್ನ ತಂದೆ -ತಾಯಿ , ಅಕ್ಕ ಅಣ್ಣ ರ ಹಣ ಕದ್ದ. ಹಾಗೆ ನೀವು ಮೊದಲಿಗೆ ನಿಮ್ಮ ತಂದೆ -ತಾಯಿ ಅಥವಾ ಅಕ್ಕ ಅಣ್ಣ ರನ್ನು ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಆಗಲಿ ಸ್ವಂತ ವ್ಯವಹಾರಕ್ಕೆ ತಂದರೆ ನಿಮಗೆ ಬೇಗ ಯಶಸ್ಸು ದೊರೆಯುತ್ತದೆ. ನಿಧಾನ ಮನೆಯಿಂದ ನಿಮ್ಮ ವ್ಯವಹಾರ ಪ್ರಾರಂಭವಾಗಿ ಹೊರಗಡೆ ಸಾರ್ವಜನಿಕ ರೆದುರಲ್ಲಿ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ.
ನಿಮ್ಮ ಯಾವುದೇ ಉದಯೋನ್ಮುಖ ಕಾರ್ಯ ಚಟುವಟಿಕೆಗಳಿಗೆ ಮೊದಲ ಪ್ರೇಕ್ಷಕರು ನಿಮ್ಮ ಮನೆಯ ಸದಸ್ಯರು . ಅವರ ಪ್ರೋತ್ಸಾಹದಿಂದ ನೀವು ಮುಂದೆ ಎತ್ತರ ಎತ್ತರಕ್ಕೆ ಬೆಳೆದು ಹೋಗಬಹುದು. ನಿಮ್ಮ ಯಾವುದೇ ಹಾವ -ಭಾವಗಳನ್ನು ತಿದ್ದಲು ಇರುವುದೊಂದೇ ಮಾರ್ಗ ಇದು. ಅವರ ಟೀಕೆ -ಟಿಪ್ಪಣಿ ನಿಮ್ಮನ್ನು ಬೆಳೆಸಲು ಸಹಕರಿಸುತ್ತದೆ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ