MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಫೆಬ್ರವರಿ 11, 2011

ಬಡವರ ಮನೆಯ ಹೆಣ್ಣು ಮಧ್ಯಮ ವರ್ಗದ ಮನೆಯಲ್ಲಿ ಬಾಳುತ್ತಾರೆಯೇ ?

ನಾನು ಓದಿದ್ದು ಹೆಬ್ಬೋಡಿ ಶಾಲೆಯಲ್ಲಿ ಕೇವಲ ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತ್ರ. ಶಾಲೆಯಲ್ಲಿ ನಮಗೆ ಪಾಠ ಮಾಡುತ್ತಿದ್ದವರು ಹನುಮಪ್ಪ ಮಾಷ್ಟರ್ . ನನ್ನ ಗುರುಗಳು ಒಂದು ಕಥೆ ಹೇಳುತ್ತಿದ್ದರು. ಅದು ಮಾರಿ ದೇವತೆಗೆ ಸಂಬಂಧ ಪಟ್ಟಿದ್ದು.

ಮಾರಿಯಮ್ಮ ಬ್ರಾಹ್ಮಣ ಜಾತಿಯ ಹುಡಿಗಿ . ಆಕೆ ಒಬ್ಬ ಸಮಗಾರ ನನ್ನು ಪ್ರೀತಿಸಿ ಮದುವೆ ಆದಳು. ಸ್ವಲ್ಪ ತಿಂಗಳುಗಳಲ್ಲಿ ಮಗುವು ಹುಟ್ಟಿತು. ಅದು ಗಂಡು ಮಗು. ತಂದೆ ಬೆಳಿಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಮನೆಗೆ ಬರುತ್ತಿದ್ದ. ಹಾಗೆಯೇ ಹೆಂಡತಿಗೆ ಗಂಡ ಏನೂ ಕೆಲಸ ಮಾಡುತ್ತಿದ್ದಾನೆ ಎಂಬುದು ಗೊತ್ತಿರಲಿಲ್ಲ. ಮಗ ದೊಡ್ಡವನಾಗಿ ಬೆಳೆದ. ಒಂದು ದಿನ ಮಗನನ್ನು ತಂದೆಯ ಜತೆಗೆ ಕಳಿಸಿದಳು. ತಂದೆ ಚರ್ಮದ ಚಪ್ಪಲಿ ತಯಾರಿಸಿದರೆ ಮಗ ಕವಲು ಎಲೆ ತಂದು ಅದೇ ರೀತಿಯ ಕೆಲಸ ಸುರುಮಾಡಿದ. ಸಂಜೆ ಆಯಿತು. ತಂದೆ ಮಗ ಮನೆಗೆ ಬಂದರು. ಮಾರನೆಯ ದಿನ ತಂದೆ ಎಂದಿನಂತೆ ಕೆಲಸಕ್ಕೆ ಹೋದ. ಮಗ ಮನೆಯಲ್ಲಿ ತಂದೆ ಮಾಡುತ್ತಿದ್ದ ಕೆಲಸ ಮಾಡತೊಡಗಿದ. ಇದನ್ನು ನೋಡಿದ ತಾಯಿ ಏನೂ ಬ್ರಾಹ್ಮಣರು ನಾವು ಚಪ್ಪಲಿ ಹೊಲಿಯುವುದ ಎಂದು ಕೇಳಿದಳು. ಮಗ ತಂದೆ ಇದೆ ಕೆಲಸ ಮಾಡುತ್ತಾರೆ ಎಂದು ತಿಳಿಸಿದ ........ಹೀಗೆ ಕಥೆ ಮುಂದುವರಿಯುವುದು.

ಮಧ್ಯಮ ವರ್ಗದವರ ಮನೆಯಲ್ಲಿ ಹಿರಿಯರು ತಮಗೆ ಗೊತ್ತಿರುವ ಬಡವರ ಹೆಣ್ಣು ಮಕ್ಕಳನ್ನು ಸೊಸೆಯನ್ನಾಗಿ ಮಾಡಿಕೊಂಡರೆ . ಬಡವರ ಮನೆಯಿಂದ ಬಂದ ಹೆಣ್ಣು ಮಕ್ಕಳು ಕೂಲಿ ಕೆಲಸಕ್ಕೆ ಹೋಗಲು ಹಾತೊರೆಯುತ್ತಾರೆ ಹೊರತು ಮನೆಯಲ್ಲಿರುವ ಆಸ್ತಿ ಮನೆ ಅಭಿವೃದ್ಧಿ ಪಡಿಸಲು ಇಷ್ಟಪಡುವುದಿಲ್ಲ. ಕೆಲಸ ಮಾಡಲು ಇಷ್ಟ ಪಡುವುದಿಲ್ಲ. ಯಜಮಾನಿಕೆ ಮಾಡಲು ಹಾತೊರೆಯುತ್ತಾರೆ. ಯಾಕೆ ? ಕಾರಣ ಗೊತ್ತಿದ್ದರೆ ನನಗೆ ತಿಳಿಸಿ.

ಒಬ್ಬ ಓದುಗ ನನಗೆ ಬರೆದ ಪತ್ರ ನಿಮ್ಮ ಮುಂದೆ ಇಟ್ಟಿದ್ದೇನೆ . ನಿಮಗೆ ಕಾರಣ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

ವಂದನೆಗಳೊಂದಿಗೆ


.ಟಿ.ನಾಗರಾಜ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ