MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಫೆಬ್ರವರಿ 1, 2011

ಬಾಸ್ ಎನ್ನುವ ಮೂರ್ಖ ಆಡುತ್ತಾನೆ ನಾಟ್ಕ !

ನನಗೆ ಹಲವಾರು ಕಂಪನಿಗಳಲ್ಲಿ , ಹಲವಾರು ಕೆಲಸಗಳನ್ನು ಮಾಡಿ ,ಹಲವಾರು ಬಾಸ್ ಮುಖವಾಡ, ಮ್ಯಾನೇಜರ್ ಮುಖವಾಡ ಗಳನ್ನೂ ನೋಡಿದ ಅನುಭವ ವಿದೆ. ಆದರೆ ಇದುವರೆವಿಗೂ ಯಾವುದೇ ಯಜಮಾನನ ಚೇಂಬರ್ ಕದ ತಟ್ಟಿ ರಜೆ ಕೊಡಿ, ನನಗೆ ವೇತನ ಜಾಸ್ತಿ ಮಾಡಿ ಎಂದು ಅಂಗಲಾಚಿಸಿದವನಲ್ಲ. ನನಗೆ ಧೈರ್ಯವಿಲ್ಲ ಅಂತ ಅಲ್ಲ. ಅದು ನನಗೆ ವಿರೂಧವಾದದ್ದು. ಯಾವುದೇ ಕಂಪನಿಯಲ್ಲಿ ಯಜಮಾನ ಅಥವಾ ಮುಖ್ಯಸ್ಥ ಕೆಲಸ ಗಾರರನ್ನು ,ಕೆಲಸ ಮಾಡುವುದನ್ನು ಗಮನಿಸುತ್ತಿರುತ್ತಾರೆ. ಕೆಲವರು ಹಣಕ್ಕಾಗಿ, ಕೆಲವರು ತಮ್ಮ ಸಮಯವನ್ನು ಕಳೆಯುವುದಸ್ಕೊರ , ಕೆಲವರು ಅನುಭವಕ್ಕಾಗಿ ಹೀಗೆ ಹಲವಾರು ರೀತಿಯ ಜನ ಕೆಲಸ ಮಾಡುತ್ತಿರುತ್ತಾರೆ. ಯಾವುದೇ ಕಂಪನಿಯಲ್ಲಿ ಯಜಮಾನ ಅಥವಾ ಒಬ್ಬ ನಿಷ್ಟಾವಂತ ಮುಖ್ಯಸ್ಥ ಕೆಲಸ ಮಾಡುವವರನ್ನು ,ಕೆಲಸ ಮಾಡುವುದನ್ನು ಗುರುತಿಸಿ ಸರಿಯಾದ ವೇತನ ನೀಡದಿದ್ದರೆ ಆತನಿಗೆ ಒಂದು ಹುದ್ದೆಯ ಯೋಗ್ಯತೆ ಇಲ್ಲ ಎಂದೇ ಅರ್ಥ.!

ಹಲವು ಕಂಪನಿಗಳಲ್ಲಿ ಅನುಭವಸ್ಥ ಅಥವಾ ಸ್ವಲ್ಪ ಓದಿದ ಕೆಲಸ ಗಾರರನ್ನೇ ಮುಖ್ಯಸ್ಥ ನನ್ನಾಗಿ ಮಾಡಿಕೊಳ್ಳುವುದು ರೂಡಿ, ಆದರೆ ಇದರಿಂದ ಆತ ಒಳ್ಳೆಯ ಮುಖ್ಯಸ್ಥ ನಾದರೆ ಪರವಾಗಿಲ್ಲ. ಆತ ಯಜಮಾನನ ಹೇಳಿಕೆಗೆ ಕುಣಿಯುತ್ತಾ ಯಜಮಾನ ಹಾಗೂ ಮುಖ್ಯಸ್ಥ ಇಬ್ಬರೂ ಸೇರಿ ಕೆಲಸಗಾರರಿಗೆ ಅಥವಾ ಕಾರ್ಮಿಕರಿಗೆ ಸೇರಬೇಕಾದ ಭತ್ಯೆಗಳನ್ನು ಕಾರ್ಮಿಕರ ಹೆಸರಿನಲ್ಲಿ ತಾವೇ ತಿನ್ನಲು ಸುರುಮಾಡುತ್ತಾರೆ. ಜತೆಗೆ ಯಾರು ಕೆಲಸಗಾರರ ನಡುವೆಯಿಂದ ಮೇಲೆ ಹೋದನೋ ಆತನೇ ತನ್ನ ಸ್ನೇಹಿತರನ್ನು , ತನ್ನ ಕೈಕೆಳಗಿನವರನ್ನು ಕೀಳಾಗಿ ನೋಡಲು ಶುರುಮಾಡುತ್ತಾನೆ. ಯಾವಾಗ ಹಂತಕ್ಕೆ ಶುರುವಾಯಿತೋ ಕೆಲಸಗಾರರೂ ಕೂಡ ತಮ್ಮ ಪ್ರಾಮಾಣಿಕ ಕೆಲಸವನ್ನು ಮಾಡುವುದನ್ನು ನಿಲ್ಲಿಸುತ್ತಾರೆ. ಹೀಗೆ ಕೆಲಸಗಾರರಿಗೆ ಹಾಗೂ ಯಜಮಾನ ,ಮುಖ್ಯಸ್ಥರಿಗೆ ಜಟ ಪಟ ಶುರುವಾಗಿ ಒಂದು ಕಂಪನಿ ಅವನತಿಯ ಹಾದಿ ಹಿಡಿಯುತ್ತದೆ.

ಎಷ್ಟೋ ಕಂಪನಿಯಲ್ಲಿ ನಮ್ಮ ರಾಜಕಾರಣಿಗಳು ಹಲವಾರು ಯೋಜನೆಗಳನ್ನು ಅಸ್ತಿತ್ವಕ್ಕೆ ತಂದು , ಜನರಿಗೆ ಪರಿಚಯಿಸಿ , ಜನರಿಂದ ಅಪ್ಲಿಕೇಶನ್ ಪಡೆದು , ಯಾರದೋ ಹೆಸರಿನಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿ ನಮ್ಮ ಹಳ್ಳಿಯ ಹಸು ,ಎಮ್ಮೆ ,ಕೋಣಗಳು ತಿಂದುಂಡು ಮೆಲಕು ಹಾಕುತ್ತಾ ಮಲಗುವಂತೆ . ಕಂಪನಿಗಳಲ್ಲಿ ಯಜಮಾನ ,ಆಡಳಿತ ಮಂಡಳಿ ಸೇರಿ ಕಾರ್ಮಿಕರಿಗೆ ಸಲ್ಲ ಬೇಕಾದ ಭತ್ಯೆಗಳನ್ನು ತಾವೇ ನುಂಗಿ ಸುಮ್ಮನಿರುತ್ತಾರೆ .

ಒಬ್ಬ ಯಜಮಾನ ತನ್ನ ಆಪ್ತ ಕಾರ್ಯದರ್ಶಿ ಗೆ ನನ್ನನು ನೋಡಲು ಯಾರಿಗೂ ಬಿಡಬೇಡ ,ಅವರು ಬಿಜಿಯಾಗಿ ಇದ್ದಾರೆ ಎಂದು ಹೇಳು ಎಂದು ಹೇಳಿದ ಯಜಮಾನನೆ ಕೆಲವರೆದುರಿಗೆ ನಾನು ನಿನ್ನೆ ನನ್ನ ಆಫಿಸಿನಲ್ಲಿ ಏನೂ ಕೆಲಸವಿಲ್ಲದೇ ಸುಮ್ಮನೆ ಕುಳಿತಿದ್ದೆ. ನೀವು ಬಂದಿದ್ದರೆ ಚೆನ್ನಾಗಿ ಮಾತನಾಡಬಹುದಿತ್ತು ಎನ್ನುತ್ತಾನೆ. ನಿನ್ನೆ ಬಂದಿದ್ದೆ . ಆದರೆ ನಿಮ್ಮ ಕಾರ್ಯದರ್ಶಿ ನೀವೂ ಬಿಜಿ ಯಾಗಿ ಇದ್ದಿರೆಂದು ಹೇಳಿದರು ಹಾಗಾಗಿ ನಾನು ವಾಪಸು ಹೋದೆ ಎಂದಾಗ. ಸೆಕ್ರೆಟರಿಯಮೇಲೆ ಗೂಬೆ ಕೂರಿಸುವ ಬಾಸುಗಳು. ನಿಜಕ್ಕೂ ಮೂರ್ಖರಲ್ಲದೇ ಮತ್ತೇನೂ !

ಶುಭದಿನದ ವಂದನೆಗಳೊಂದಿಗೆ

.ಟಿ,ನಾಗರಾಜ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ