MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಫೆಬ್ರವರಿ 24, 2011

ಬಡತನದಲ್ಲಿ ಹುಟ್ಟಿ , ಬಡತನದಲ್ಲಿ ಬೆಳೆದು, ಪ್ರಾಮಾಣಿಕತೆಯಿಂದ ಓದಿ, ಪ್ರಾಮಾಣಿಕತೆಯಿಂದ ವೃತ್ತಿ ಗಳಿಸಿಕೊಂಡ ವ್ಯಕ್ತಿಗಳು ಕೊನೆಗೆ ಬ್ರಷ್ಟಚಾರಿ ಗಳಾಗುವುದು ಏಕೆ ?

ಒಬ್ಬ ಪತ್ರಕರ್ತ ತನಗೆ ಬರುವ ಎಲ್ಲ ಪತ್ರಗಳಿಗೆ ಉತ್ತರಿಸಲು ಬಹುದು ಇಲ್ಲದಿರಲೂ ಬಹುದು. ಆದರೆ ಆನ್ ಲೈನ್ ನಲ್ಲಿ ಬರೆಯುವ , ಪ್ರಕಟಿಸುವ ಪ್ರತಿಯೊಬ್ಬನು ಉತ್ತರಿಸಲೇ ಬೇಕಾದ ಅನ್ನಿವಾರ್ಯತೆ ಇದೆ. ಇಲ್ಲಿ ಓದುಗ ಒಬ್ಬ ಸ್ವಾತಂತ್ರ ವ್ಯಕ್ತಿ, ಉತ್ತರ ಬರೆದಿಲ್ಲವೆಂದರೆ ಕಾಮೆಂಟ್ಸ್ ನಲ್ಲಿ ಬರಹಗಾರನ ಮೇಲೆ ತನ್ನ ಆಕ್ರೋಶವನ್ನು ತೀರಿಸಿಕೊಳ್ಳಬಹುದು. ನಾನು ನೆಟ್ ನಾಗ ಪ್ರಾರಂಭ ವಾದ ದಿನದಿಂದ ಅಂತ ಕೆಲವು ಬರಹಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದೇನೆ. ಹೆಚ್ಚು ಜನ ನನ್ನ ಓದುಗರು ವಿದ್ಯಾರ್ಥಿಗಳು ಹಾಗೂ ಯುವಜನರು ಆಗಿರುವುದರಿಂದ , ವಿಧ್ಯವಂತ ರಾಗಿರುವುದರಿಂದ ನನಗೆ ತುಂಬಾ ಸಹಾಯವಾಗಿದೆ.

ಮೊನ್ನೆ ತಾನೇ ಒಬ್ಬ ಯುವಕ ಒಂದು -ಮೇಲ್ ಕಳುಹಿಸಿದ್ದರು. ತುಂಬಾ ಚಿಂತನೆಗೆ ಅರ್ಹ್ಯ ವಾಗಿತ್ತು. ಅವರ ಪ್ರಕಾರ ನಾವು ಎಷ್ಟೋ ಜನ ರಾಜಕೀಯ ವ್ಯಕ್ತಿಗಳ ಹಾಗೂ ಅಧಿಕಾರಿಗಳ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿದ್ದೇವೆ. ಅವರು ಬಂದಿರುವುದು ಕಡು ಬಡತನದಿಂದ , ಅಥವಾ ಮಧ್ಯಮ ವರ್ಗದ ರೈತ ಕುಟುಂಬದಿಂದ . ಹೇಗೋ ಕಷ್ಟಪಟ್ಟು. ಓದಿ ,ಅಂಕ ಗಳಿಸಿ , ದೊಡ್ಡ ಹುದ್ದೆ ಗಿಟ್ಟಿಸಿ ಕೆಲವು ವ್ಯಕ್ತಿಗಳು ತಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನೇ ಶೋಷಣೆ ಮಾಡುತ್ತಿದ್ದಾರೆ . ಕೆಲವರು ತಾವು ಬೆಳೆದು ಬಂದ , ತಮ್ಮನ್ನು ಬೆಳೆಸಿದ ಸಮಾಜಕ್ಕೆ ವಂಚಿಸುತ್ತಿದ್ದಾರೆ . ಇದನ್ನು ಕಂಡು ಕಂಡು ವಿದ್ಯಾರ್ಥಿಗಳಿಗೆ , ಬಡವರಿಗೆ , ಹಿಂದುಳಿದವರಿಗೆ ಸಹಾಯ ಮಾಡಬೇಕೆ? . ದಯವಿಟ್ಟು ಉತ್ತರಿಸಿ.

ಬತ್ತದಿಂದ ಸಂಪೂರ್ಣವಾಗಿ ಹೊಟ್ಟನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಒಂದೆರಡು ಹೊಟ್ಟು ಜೆಳ್ಳು ಗಳು ಭತ್ತದ ಜತೆಗೆ ಸೇರಿರುತ್ತವೆ. ಬಿತ್ತುವಾಗ ಭತ್ತದ ಜತೆಯಲ್ಲಿಯೇ ಹೊಟ್ಟನ್ನು ಬಿತ್ತುತ್ತೇವೆ. ಕೆಲವು ವೇಳೆ ಅವು ನಾರಿ ಎಂಬ ಹೆಸರಿನಿಂದ ಪಸಲು ಬಂದ ಮೇಲೆ ಕಾಣಿಸಿಕೊಳ್ಳುತ್ತವೆ. ಹಾಗೆಯೇ ಸಮಾಜದಲ್ಲಿ ಅಂತ ಬ್ರಷ್ಟ ವ್ಯಕ್ತಿಗಳಿಗೆ ಪಾಠ ಕಲಿಸಲು ದೊಡ್ಡ ವ್ಯಕ್ತಿಗಳು ಇದ್ದಾರೆ. ಹಾಗಾಗಿ ಸಹಾಯ ಮಾಡುವುದರಲ್ಲಿ ತಪ್ಪೇನಿಲ್ಲ.

ಕೆಲವೊಮ್ಮೆ ಬೇರೆಯವರ ಒತ್ತಡಕ್ಕಾಗಿ ಮಾಡಬಾರದ ಕೆಲಸವನ್ನು ಮಾಡಿ ಕೇಳಬಾರದ ಅಪಪ್ರಚಾರ ಹೊರಬೇಕು. ಏನೂ ಮಾಡುವುದು ಭಾರತ ಸ್ವಾತಂತ್ರ ರಾಷ್ಟ್ರ.

ವಂದನೆಗಳೊಂದಿಗೆ

.ಟಿ.ನಾಗರಾಜ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ