MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜೂನ್ 18, 2010

ಗುರಿಯಿಟ್ಟು ಗುಂಡು ಹೊಡೆಯಬೇಕಾದರು ಸೈನಿಕ ಅಭ್ಯಾಸಮಾಡಿರಬೇಕಾಗುತ್ತದೆ.ರುಚಿಯಾದ ಅಡುಗೆ ಮಾಡಬೇಕಾದರೂ ಗೃಹಿಣಿ ಅಭ್ಯಾಸ ಮಾಡಿರಬೇಕಾಗುತ್ತದೆ.

ಯಾವ ಗುರುಹಿರಿಯರು ಸುಮ್ಮನಿದ್ದರೂ ದುಷ್ಟಪರಿಣಾಮಗಳು ಸುಮ್ಮನಿರುವುದಿಲ್ಲ. ಶರೀರ ಮನಸ್ಸು ಇಂದ್ರಿಯಗಳ ಸ್ವಭಾವ-ಮರ್ಮಗಳನ್ನರಿಯದೆ ಅವುಗಳನ್ನು ಯದ್ವಾತದ್ವಾ ಬಳಸಿದಾಗ ಭೀಕರ ದುಷ್ಟಪರಿಣಾಮಗಳು ಎರಗಿ ಶಾಂತಿ-ಸೌಖ್ಯಸಮಾಧಾನಗಳೆಲ್ಲ ಕೊಚ್ಚಿ ಹೋಗಿ ಹಾಹಾಕಾರಗೈಯುವ ಪರಿಸ್ಥಿತಿ ಬರುತ್ತದೆ.ಆಗ ಕಾಲ ಮಿಂಚಿ ಹೋಗಿರುತ್ತದೆ !

ಒಟ್ಟಿನಲ್ಲಿ ಹತೋಟಿಯಲ್ಲಿಡದ ಇಂದ್ರಿಯಗಳು ಮನಸ್ಸಿನ ಏಕಾಗ್ರತೆಯನ್ನು ಧ್ವಂಸಮಾಡಿಬಿಡಬಲ್ಲವು ಎಂಬ ಕಟು ಸತ್ಯ ಎಷ್ಟುಬೇಗ ತಿಳಿದರೆ ಅಷ್ಟು ಕ್ಷೇಮ.

ಅಧ್ಯಯನದಲ್ಲಿ ಏಕಾಗ್ರತೆಯನ್ನು ತಂದುಕೊಳ್ಳಲು ಇನ್ನೊಂದು ಬಹುಮುಖ್ಯ ಉಪಾಯವೆನೆಂದರೆ ಪಟ್ಯ ವಿಷಯವನ್ನು ಚೆನ್ನಾಗಿಸ್ವಷ್ಟವಾಗಿ ಅರ್ಥಮಾಡಿಕೊಂಡು ಮುಂದೆ ಸಾಗುವುದು . ಒಂದು ವಾಕ್ಯವನ್ನು ಓದುವಾಗ ಅದರಲ್ಲಿ ಒಂದೆರಡು ಕಷ್ಟದ ಶಬ್ದಗಳುಕಂಡುಬಂದರೆ ಕೂಡಲೇ ಶಬ್ದ ಕೋಶದ ಸಹಾಯದಿಂದ ಅದರ ಅರ್ಥವನ್ನು ಹುಡುಕಿ, ವಾಕ್ಯವನ್ನು ಓದಿ ಮುಗಿಸಿ ಇಡೀ ವಾಕ್ಯಏನು ಹೇಳುತ್ತಿದೆ ಎಂಬುದನ್ನು ಆಗಲೇ ಆಲೋಚಿಸಿ ತಿಳಿದುಕೊಳ್ಳಬೇಕು . ಹೀಗೆ ಒಂದು ಪ್ಯಾರಾ ಓದಿ ಮುಗಿಸಿದಾಗ ಇಡೀಪ್ಯಾರಾ ಯಾವ ಅಂಶವನ್ನು ತಿಳಿಸಿತು ಎಂಬುದನ್ನು ಆಗಾಗಲೇ ಮನಸ್ಸಿಗೆ ತಂದುಕೊಳ್ಳಬೇಕು. ವಿಧಾನದಿಂದ ಓದುತ್ತಿದ್ದರೆವಿಷಯಗಳು ಅರ್ಥವಾಗುತ್ತವೆ.ಅರ್ಥವಾಗುವುದರಿಂದ ಆನಂದ ಉಂಟಾಗುತ್ತದೆ . ಆನಂದ ಉಂಟಾಗುವುದರಿಂದ ಅಧ್ಯಯನದಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ.ಪ್ರೀತಿ ಹುಟ್ಟಿದಾಗ ತಾನೇತಾನಾಗಿ ಏಕಾಗ್ರತೆ ಬರುತ್ತದೆ.

ಎಲ್ಲಿ ನಮ್ಮ ಪ್ರೀತಿ ಇರುತ್ತದೆಯೋ ಅಲ್ಲಿಯೇ ನಮ್ಮ ಮನಸ್ಸಿರುತ್ತದೆ . ಎಲ್ಲಿ ನಮ್ಮ ಮನಸ್ಸು ಇರುತ್ತದೆಯೋ ಅಲ್ಲಿಯೇ ಏಕಾಗ್ರತೆಮೂಡಿಬರುತ್ತದೆ.-ಇದೊಂದು ಅನಿವಾರ್ಯ ನಿಯಮ. 'ನನಗೆ ನನ್ನ ಪಾಠಗಳ ವಿಷಯದಲ್ಲೇ ಪ್ರೀತಿಯಿಲ್ಲವಲ್ಲ ?ಏನು ಮಾಡಲಿಎನ್ನುವ ವಿದ್ಯಾರ್ಥಿಗಳು ಇದ್ದಾರೆ . ಅಂಥವರು ಒಂದೋ ತಮಗೆ ಇಷ್ಟವಾಗುವ ಬೇರೆ ವಿಷಯವನ್ನು ಆರಿಸಿಕೊಳ್ಳಬೇಕು; ಅಥವಾಈಗಿರುವ ಪಟ್ಯವಿಷಯದಲ್ಲೇ ಪ್ರೀತಿಯನ್ನು ತಂದುಕೊಳ್ಳಬೇಕು.

ಮನಸ್ಸಿನ ಏಕಾಗ್ರತೆಗೆ ಅಭ್ಯಾಸಬಲವೇ ಕಾರಣ ಎಂಬುದು ಇನ್ನೊಂದು ಬಹುಮುಖ್ಯ ಅಂಶ, ಅಭ್ಯಾಸ ಎಂದರೇನು ? ಪುನಹಪುನಹ ಮಾಡುವ ಪ್ರಯತ್ನ.ಬರೆದೂ ಬರೆದೂ ಅಭ್ಯಾಸ ಮಾಡಿದರೆ ಬರವಣಿಗೆ ಅಂದವಾಗುತ್ತದೆ. ಓದೀ ಓದೀ ಅಭ್ಯಾಸ ಮಾಡಿದರೆಅಧ್ಯಯನ ಮಾಡಿದರೆ ಅಧ್ಯಯನ ಯಸಸ್ವಿಯಾಗುತ್ತದೆ. ಗುರಿಯಿಟ್ಟು ಗುಂಡು ಹೊಡೆಯಬೇಕಾದರು ಸೈನಿಕ ಅಭ್ಯಾಸಮಾಡಿರಬೇಕಾಗುತ್ತದೆ.ರುಚಿಯಾದ ಅಡುಗೆ ಮಾಡಬೇಕಾದರೂ ಗೃಹಿಣಿ ಅಭ್ಯಾಸ ಮಾಡಿರಬೇಕಾಗುತ್ತದೆ. ಅಭ್ಯಾಸದಿಂದ ಸಿದ್ಧಿಎಂಬ ಮಾತು ಎಲ್ಲ ಕಾಲಕ್ಕೂ ಸತ್ಯ. ಆದರೆ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಉತ್ಸಾಹದಿಂದ ಅಭ್ಯಾಸ ಮಾಡಬೇಕು . ಬುದ್ಧಿಉಪಯೋಗಿಸಿ ಅಭ್ಯಾಸ ಮಾಡಬೇಕು . ಬಗೆಯಿಂದ ಅಭ್ಯಾಸ ಮಾಡುತ್ತಾ ಹೋದರೆ ಏಕಾಗ್ರತೆ ಏಕೆ ಬರುವುದಿಲ್ಲ ?

-ಪ್ರೀತಿ ಹಾಗೂ ವಿಶ್ವಾಸಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
-9632172486


















- ?'

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ