MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜೂನ್ 28, 2010

ಅದೃಷ್ಟವಶಾತ್ ಇಂದಿಗೂ ನಮ್ಮ ಮಕ್ಕಳಲ್ಲಿ ತರುಣ-ತರುಣಿಯರಲ್ಲಿ , ಪೂರ್ವಜ ಋಷಿಗಳ ರಕ್ತ ಇನ್ನೂ ಹಸಿಯಾಗಿ ಹರಿಯುತ್ತಿದೆ. ಸದವಕಾಶಗಳನ್ನು ಒದಗಿಸಿದಾಗಲೆಲ್ಲ ಅದು ಅಭಿವ್ಯಕ್ತವಾಗಿ ಅದ್ಬುತ

ಇನ್ನು ಕೆಲವು ವಿದ್ಯಾರ್ಥಿಗಳಿದ್ದಾರೆ . ಅವರಿಗೆ ದೇವರಲ್ಲಿ ನಂಬಿಕೆಯಿಲ್ಲ , ನಂಬುವುದಕ್ಕೆ ಇಷ್ಟವೂ ಇಲ್ಲ. ಅಂಥವರು ಏನುಮಾಡಬೇಕು? ಪ್ರಶ್ನೆಗೂ ಉತ್ತರವಿದೆ. ಅಂಥವರು ತಮಗೆ ತಾವೇ ಹೀಗೆ ದೃಢವಾಗಿ ಹೇಳಿಕೊಳ್ಳಲಿ ;

"ನಾನು ಹೆಚ್ಹೆಚ್ಚು ಓದುತ್ತೇನೆ , ಹೆಚ್ಹೆಚ್ಚು ಅಧ್ಯಯನ ಮಾಡುತ್ತೇನೆ ,
ಅಧ್ಯಯನ ಮಾಡಿದ್ದನ್ನು ಅರ್ಥಮಾಡಿಕೊಳ್ಳುತ್ತೇನೆ, ಮತ್ತು
ಚೆನ್ನಾಗಿ ನೆನಪಿಟ್ಟು ಕೊಳ್ಳುತ್ತೇನೆ, ಹೀಗೆ ಮಾಡುತ್ತ ನಾನು ಸಕಾಲದಲ್ಲಿ
ಶ್ರೇಷ್ಠ ವಿದ್ಯಾವಂತನಾಗಿಯೇ ತೀರುತ್ತೇನೆ "

ಇದು ಪ್ರಾರ್ಥನೆಯಲ್ಲ. ಇದೊಂದು ಭಾವನೆ. ರೀತಿ ಭಾವಿಸುತ್ತ ಭಾವಿಸುತ್ತಲೇ ವಿದ್ಯಾರ್ಥಿಯು ಸಕಾಲದಲ್ಲಿ ಶ್ರೇಷ್ಠವಿದ್ಯಾವಂತನಾಗುವುದು ಖಂಡಿತ. ಏಕೆಂದರೆ "ಯದ್ಭಾವಂ ತದ್ಭವತಿ " ಎಂಬಂತೆ . ನಾವು ಹೇಗೆ ಭಾವಿಸುತ್ತೆವೇಯೋಹಾಗೆಯೇ ಆಗುತ್ತೇವೆ. ಇದೊಂದು ಅನಿವಾರ್ಯ ನಿಯಮ. ಆದರೆ ಭಾವಿಸುವುದನ್ನು ಹೃತ್ಪೂರ್ವಕವಾಗಿ ಭಾವಿಸಬೇಕು. ಶ್ರದ್ಧೆಯಿಂದ ಭಾವಿಸಬೇಕು. ಇದು ಬಹಳ ಮುಖ್ಯ . ಏಕೆಂದರೆ ಪ್ರಾರ್ಥನೆಯೇ ಆಗೆಲಿ ಭಾವನೆಯೇ ಆಗಲಿ , ಶಕ್ತಿಯುತವಾಗುವುದುಹಾಗೂ ಫಲಕಾರಿಯಾಗುವುದು ಶ್ರದ್ಧೆಯಿಂದ. ರಹಸ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತಿರಬೇಕು.

ಪ್ರಾರ್ಥನೆಯನ್ನು ಅಥವಾ ಭಾವನೆಯನ್ನು ರಾತ್ರಿ ಮಲಗುವ ಹೊತ್ತಿಗೆ ಮಾಡಬೇಕೆಂಬುದರಲ್ಲಿ ಇನ್ನೊದು ರಹಸ್ಯವಿದೆ . ಮಲಗುವ ವೇಳೆಯಲ್ಲಿ ಮಾಡಿದ ಆಲೋಚನೆಗಳು , ಭಾವನೆಗಳು ಮನಸ್ಸಿನ ಆಳಕ್ಕೆ ಇಳಿಯುತ್ತವೆ . ಬೆಳಗ್ಗೆ ಏಳುವಾಗ ಅದೇಭಾವನೆಗಳೇ ಇನ್ನಷ್ಟು ಪುಷ್ಟಿಗೊಂಡು ವ್ಯಕ್ತವಾಗುತ್ತವೆ. ಒಂದೇ ಭಾವನೆಯನ್ನು ಕೆಲವಾರು ತಿಂಗಳ ಕಾಲ ಭಾವಿಸುತ್ತ ಬಂದಾಗಅದು ಅತ್ಯಂತ ಶಕ್ತಿಶಾಲಿಯಾಗಿ ವ್ಯಕ್ತವಾಗುತ್ತದೆ. ಇಂಥ ಶಕ್ತಿಶಾಲಿಯಾದ ಭಾವನೆಯಿಂದ ನಾವು ಏನನ್ನು ಬೇಕಾದರೂ ಸಾಧಿಸಲುಸಮರ್ಥರಾಗುತ್ತೇವೆ. ಉದಾಹರಣೆಗೆ ಮಹಾಪುರುಷರನ್ನು ತೆಗೆದುಕೊಳ್ಳಿ , ನಮ್ಮಂತೆಯೇ ಮಾನವರಾದ ಅವರುಮಹಾಪುರುಷರಾದದ್ದು ಹೇಗೆ? ಪ್ರಬಲ ಭಾವನಾಶಕ್ತಿಯಿಂದ , ಪ್ರಬಲ ಸಂಕಲ್ಪ ಶಕ್ತಿಯಿಂದ ! ಅವರು ಉನ್ನತ, ಉದಾತ್ತಯೋಜನೆಗಳನ್ನು ಹಾಕಿಕೊಂಡು ಸದಾ ಭಾವಿಸುತ್ತ ಬಂದರು;" ನಾನು ಇಂತಿಂಥದನ್ನು ಮಾಡುತ್ತೇನೆ. ಮಾಡಿಯೇತೀರುತ್ತೇನೆ " ಎಂದು ಕೊನೆಗೊಂದು ದಿನ ಅದನ್ನು ಮಾಡಿಯೇ ತೀರಿದರು. ಮಾಹಾ- ಪುರುಷರೆನಿಸಿದರು . ಆದ್ದರಿಂದ ವಿದ್ಯಾರ್ಥಿಯೂಭಾವಿಸುತ್ತಿರಲಿ;

"ನಾನು ಹೆಚ್ಹೆಚ್ಚು ಓದುತ್ತೇನೆ , ಹೆಚ್ಹೆಚ್ಚು ಅಧ್ಯಯನ ಮಾಡುತ್ತೇನೆ ,
ಅಧ್ಯಯನ ಮಾಡಿದ್ದನ್ನು ಅರ್ಥಮಾಡಿಕೊಳ್ಳುತ್ತೇನೆ, ಮತ್ತು
ಚೆನ್ನಾಗಿ ನೆನಪಿಟ್ಟು ಕೊಳ್ಳುತ್ತೇನೆ, ಹೀಗೆ ಮಾಡುತ್ತ ನಾನು ಸಕಾಲದಲ್ಲಿ
ಶ್ರೇಷ್ಠ ವಿದ್ಯಾವಂತನಾಗಿಯೇ ತೀರುತ್ತೇನೆ "

ಭಾವನೆಯ ಶಕ್ತಿ ಅದೆಷ್ತೆಂದರೆ ಅದರ ಪ್ರಭಾವದಿಂದ ವಿದ್ಯಾರ್ಥಿಯೂ ಕಾರ್ಯೋನ್ಮುಖನಾಗುತ್ತಾನೆಕಾರ್ಯತತ್ಪರನಾಗುತ್ತಾನೆ ........ಕೃತ ಕೃತ್ಯನಾಗುತ್ತಾನೆ . -ಎಂದರೆ ಒಂದು ದಿನ ಶ್ರೇಷ್ಠ ವಿದ್ಯವಂತನೆಂದು ಸನ್ಮಾನಿತನಾಗುತ್ತಾನೆ.

ಪ್ರಾರ್ಥನೆಯ ಮಹತ್ವವನ್ನು ಸಮರ್ಥಿಸಲು ಬೇರೆ ಮಾತು ಬೇಕಿಲ್ಲ . ಏಕೆಂದರೆ ಸ್ವತ: ಪ್ರಾರ್ಥನೆ ಮಾಡುವವನಿಗೆಕ್ರುತಾರ್ಥತೆಯ ಅನುಭವವಾಗುವುದಲ್ಲ !

ಕೊನೆಯ ಮಾತು
' ಇಂದಿನ ಮಕ್ಕಳು ಮುಂದಿನ ಪ್ರಜೆಗಳು ! ' ' ಇಂದಿನ ಯುವಜನರೆ ನಾಳಿನ ನೇತಾರರು !' ' ನೀವೇ ದೇಶವನ್ನು ಮುಂದೆನಡೆಸಿ ನಮ್ಮನ್ನು ರಕ್ಷಿಸುವವರು !' ಎಂದೆಲ್ಲ ನಾವು ನಮ್ಮ ಮಕ್ಕಳಿಗೆ, ಯುವಜನರಿಗೆ, ಉದುದ್ದನೆ ಉಪದೇಶಗಳನ್ನು ನೀಡುತ್ತಿದ್ದೇವೆ. ಆದರೆ ಅವರು ರೀತಿ ಬೆಳೆದು ಜವಾಬುದಾರಿಯುತ ಸ್ಥಾನಗಳನ್ನು ತುಂಬಲು ಬೇಕಾದ ವಿದ್ಯೆಯನ್ನಾಗಲೀ ಶೀಕ್ಷಣವನ್ನಾಗಲೀ ಕೊಡುತ್ತಿಲ್ಲ. ತದ್ವಿಪರೀತವಾಗಿ ಅವರು ಸಾಕಷ್ಟು ಕೆಟ್ಟು ಇತರರನ್ನು ಕೆಡಿಸಲು ಅನುಕೂಲವಾದಂತಹ ವಾತಾವರಣವನ್ನು ನಮ್ಮಅವಿವೇಕದಿಂದ ದುರಾಶೆಯಿಂದ ಇಂದ್ರಿಯ ಲೋಲುಪತೆಯಿಂದ ನಿರ್ಮಿಸುತ್ತಿದ್ದೇವೆ.

ಆದರೆ ಅದೃಷ್ಟವಶಾತ್ ಇಂದಿಗೂ ನಮ್ಮ ಮಕ್ಕಳಲ್ಲಿ ತರುಣ-ತರುಣಿ ಯರಲ್ಲಿ , ಪೂರ್ವಜ ಋಷಿಗಳ ರಕ್ತ ಇನ್ನೂ ಹಸಿಯಾಗಿಹರಿಯುತ್ತಿದೆ. ಸದವಕಾಶಗಳನ್ನು ಒದಗಿಸಿದಾಗಲೆಲ್ಲ ಅದು ಅಭಿವ್ಯಕ್ತವಾಗಿ ಅದ್ಬುತ ಕಾರ್ಯವನ್ನೆಸಗುತ್ತಿದೆ . ಇಂತಹಸದವಕಾಶವನ್ನು ನಿರ್ಮಿಸಿಕೊಡುವುದು ಹಿರಿಯರಾದ ನಮ್ಮ ಕರ್ತವ್ಯ . ಹಿಂದೆ ಪ್ರಕಟಿಸಿದ ಸಂಪುಟವು ಅಂತಹಸದವಕಾಶವನ್ನು ಸರಳ ಭಾಷೆಯಲ್ಲಿ , ಎಲ್ಲರ ತಲೆಗೂ ಹತ್ತುವಂತಹ ಭಾಷೆಯಲ್ಲಿ ಒದಗಿಸುತ್ತಿದೆ.

ಇಂದಿನ ವಿದ್ಯಾರ್ಥಿ ಯುವಜನರ ಅತ್ಯಂತ ಕಾತರದ ಸಮಸ್ಯೆಯೆಂದರೆ ತಮ್ಮ ಅಧ್ಯಯನದಲ್ಲಿ ಹೇಗೆ ಏಕಾಗ್ರತೆಯನ್ನುಸಂಪಾದಿಸಿ ಓದಿದ್ದನ್ನೆಲ್ಲ ನೆನಪಿನಲ್ಲಿಟ್ಟುಕೊಳ್ಳುವುದು ಎಂಬುದು. ಅದಕ್ಕೆಲ್ಲ ಮಾರ್ಗೋಪಾಯ ಲೇಖನಗಳಲ್ಲಿವೆ.

ನಾವು ಲೇಖನಗಳಿಗಾಗಿ ಆಯ್ದುಕೊಂಡ ಪುಸ್ತಕವು ಡಿಸೆಂಬರ್ ೧೯೯೫ ರಿಂದ ಮೇ ೨೦೦೯ ವರೆಗೆ ಹದಿನೆಂಟು ಭಾರಿಮುದ್ರಣಗಳನ್ನು ಕಂಡು ಐದು ಲಕ್ಷ ಪುಸ್ತಕಗಳು ಮಾರಾಟ ವಾಗಿವೆ. ಇದರ ಬೆಲೆ ಕೇವಲ ಹತ್ತು ರೂಪಾಯಿಗಳು. ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಡಬಹುದು .ವಿದ್ಯಾರ್ಥಿಯೂ ಸಂಗ್ರಹ ಯೋಗ್ಯ ಪುಸ್ತಕ ಇದು. ಒಬ್ಬ ವಿದ್ಯಾರ್ಥಿಯವಿದ್ಯಾಭ್ಯಾಸದ ಪ್ರಾರಂಭದಿಂದ ಆತನ ವಿದ್ಯಾಭ್ಯಾಸದ ಕೊನೆಯ ಹಂತದವರೆಗೂ ಇದು ಸಹಾಯಕನಾಗಿ ಕೆಲಸ ಮಾಡುತ್ತದೆ.
......
ಪುಸ್ತಕದ ಹೆಸರು ; ವಿದ್ಯಾರ್ಥಿಗಾಗಿ
ಲೇಖಕರು ; ಸ್ವಾಮಿ ಪುರುಷೋತ್ತಮಾನಂದ

ಬೆಲೆ; ೧೦ ರೂಪಾಯಿಗಳು

ನಿಮ್ಮ ಅನಿಸಿಕೆ ,ಅಭಿಪ್ರಾಯ ,ಸಲಹೆ,ಟೀಕೆ ,ಟಿಪ್ಪಣಿಗಳನ್ನು ದಯವಿಟ್ಟು ನಮಗೆ ಬರೆದು ಕಳುಹಿಸಿ.

ನೆಟ್ ನಾಗ @ ಜೀ ಮೇಲ್. ಕಂ


ಶುಭದಿನದ ಶುಭಾಶಯಗಳೊಂದಿಗೆ

.ಟಿ.ನಾಗರಾಜ

ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
.............................................................................................................

ನಾಳೆಯಿಂದ ಬದುಕು ಬದಲಾಗಲು ಕ್ಷಣ ಹೊತ್ತು ಸಾಕು. ಇದು ಸನ್ ನ್ಯಾಚುರಲ್ ಫ್ಲಾಶ್ ನ ಹೆಮ್ಮೆಯ ಕೊಡುಗೆ.









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ