MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜೂನ್ 7, 2010

ಪಟ್ಯವಿಷಯವನ್ನು ನಿನ್ನ ಸಹವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಪರಿಪಾಟವನ್ನು ಬೆಳಸಿಕೊ

ನಿನ್ನೆ ನಾವು ಅನಾಸಕ್ತ ವಿಷಯಗಳನ್ನು ಹೇಗೆ ಆಸಕ್ತ ವಿಷಯಗಳನ್ನಾಗಿ ಪರಿವರ್ಥಿಸಿಕೊಳ್ಳಬೇಕು ಎಂಬ ಬಗ್ಗೆ ತಿಳಿದೆವು. ಇವತ್ತು ನಾವು ಬಾಯಿಪಾಠ ಮಾಡುವುದರ ಬಗ್ಗೆ ತಿಳಿಯೋಣ. ಕೆಲಕೆಲವು ಅಂಶಗಳನ್ನು ಬಾಯಿ ಪಾಠ ಮಾಡಿಟ್ಟುಕೊಂಡಿರಬೇಕಾಗುತ್ತದೆ ನಿಜ. ಆದರೆ ಪಾಠ ಕ್ಕೆ ಪಾಠ ವನ್ನೇ ಉರು ಹೊಡೆಯುವ ಕೆಲಸವನ್ನು ಮಾಡಲೇ ಬೇಡ. ಕೆಲವು "ಧೀರ"ರು ನೋಟ್ಸ್ ಗಳನ್ನೂ-ಅದೂ ಅವರ ಸ್ವಂತದ್ದಲ್ಲ.ಯಾರಿಂದಲೋ ಗಿಟ್ಟಿಸಿಕೊಂಡದ್ದು -ಉರು ಹೊಡೆದು ಪಾಸಾಗಲೆತ್ನಿಸುತ್ತಾರೆ . ನೀನು ಮಾತ್ರ ಹಾಗೆ ಮಾಡಲು ಹೋಗಬೇಡ. ಪಾಠ ಗಳ ಒಂದೊಂದು ವಾಕ್ಯವನ್ನು , ಒಂದೊಂದು ಶಬ್ದವನ್ನೂ ಅರ್ಥಮಾಡಿಕೊಂಡೆಯಾದರೆ ಉರು ಹೊಡೆದದ್ದಕ್ಕಿಂತಲೂ ಹೆಚ್ಚು ಸ್ವಷ್ಟವಾಗಿ ವಿಷಯಗಳು ನಿನ್ನ ಮನಸ್ಸಿನಲ್ಲಿ ಉಳಿದಿರುತ್ತವೆ.
ಪಾಠ ಗಳು ಮನಸ್ಸಿನಲ್ಲಿ ನಿಲ್ಲುವಂತೆ ಮಾಡಲು ಇನ್ನೊಂದು ಉಪಾಯ ಇದೆ. ಭಾನುವಾರವೇ ಮೊದಲಾದ ರಜಾ ದಿನಗಳಲ್ಲಿ ನೀನು ಮುರ್ನಾಲ್ಕು ಬುದ್ದಿವಂತ ಸಹಪಾಟಿಗಳನ್ನು ಸೇರಿಸಿಕೊಂಡು ಸಾಮೂಹಿಕ ಅಧ್ಯಯನ , ಚರ್ಚೆ , ವಿಚಾರವಿನಿಮಯ ಮಾಡುತ್ತಾ ಬರಬೇಕು. ಇದರಿಂದ ನಿಮನಿಮಗೆ ಗೊತ್ತಿರುವ ಹೆಚ್ಚಿನ ವಿಚಾರಗಳು ಪರಸ್ಪರರಿಗೆ ತಿಳಿಯುವಂತಾಗುವುದಲ್ಲದೆ
ಪಾಠ ವಿಷಯಗಳನ್ನು ಚರ್ಚಿಸುವಾಗ ಅವುಗಳನ್ನು ಕಿವಿಗಳಿಂದ ಕೇಳುವುದರ ಮೂಲಕವೇ ಅವುಗಳನ್ನು ಕಿವಿಗಳಿಂದ ಕೇಳುವುದರ ಮೂಲಕವೇ ಅವು ಎಷ್ಟೋ ಮಟ್ಟಿಗೆ ಮನದಟ್ಟಾಗುತ್ತವೆ.ಕಿವಿಯಿಂದ ಕೇಳುವುದಕ್ಕೆ "ಶ್ರವಣ"ಎಂದು ಹೆಸರು. ಶ್ರವಣ ಎನ್ನುವುದು ಅತ್ಯಂತ ಪರಿಣಾಮ ಕಾರಿಯಾದುದು. ಎಷ್ಟೋ ಜನ ಸ್ತ್ರೀಪುರುಷರು ಹರಿಕಥೆ-ಪುರಾಣ ಪ್ರವಚನಾದಿಗಳನ್ನು ಕೇಳುತ್ತ ಕೇಳುತ್ತಲೇ ಹಲವಾರು ವಿಚಾರಗಳನ್ನು ತಿಳಿದುಕೊಂಡು ಬುದ್ದಿವಂತರಾಗಿರುವುದನ್ನು ನೀನು ಕಾಣಬಹುದು.ಆದ್ದರಿಂದ ಪ್ರತಿಯೊಂದು ಪಟ್ಯವಿಷಯವನ್ನು ನಿನ್ನ ಸಹವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಪರಿಪಾಟವನ್ನು ಬೆಳಸಿಕೊ . ಇದರಿಂದ ಪರಸ್ಪರರಲ್ಲಿ ಉತ್ಸಾಹ ಹೆಚ್ಚಿ ಮನಸು ಉಲ್ಲಾಸ ಭರಿತವಾಗಿ ಅಧ್ಯಯನ ಹೆಚ್ಚು ಫಲಪ್ರದವಾಗುವುದು ಖಂಡಿತ . ಆದರೆ ನಿಮ್ಮೊಳಗೆ ಹರಟೆ ಶುರುವಾಗದಂತೆ ನೋಡಿಕೊಳ್ಳಬೇಕು.

ವಂದನೆ ಹಾಗು ಪ್ರೀತಿ ವಿಶ್ವಾಸಗಳೊಂದಿಗೆ ನೆಟ್ನಾಗ

-ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನಯ್ಚುರಲ್ ಫ್ಲಾಶ್ .ಕಂ/
+೯೧-9632172486







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ