MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಜೂನ್ 16, 2010

"ಓ ಮನಸ್ಸೇ ! ! ನೀನು ನನ್ನಸೇವಕ.ನಾನು ಹೇಳಿದಂತೆ ನೀನು ಕೇಳಲೇ ಬೇಕು"

ಏಕಾಗ್ರತೆಯನ್ನು ತಂದುಕೊಳ್ಳುವುದು ಹೇಗೆ?

ಪ್ರಶ್ನೆಯನ್ನು ವಿದ್ಯಾರ್ಥಿಗಳು ಕೇಳುತ್ತಿರುತ್ತಾರೆ. ಆಧ್ಯಾತ್ಮಿಕ ಸಾಧಕರು ಕೇಳುತ್ತಿರುತ್ತಾರೆ. ಏಕ ಎಂದರೆ ಒಂದು; ಅಗ್ರ ಎಂದರೆತುದಿ ಅಥವಾ ಮೊನೆ. ಆದ್ದರಿಂದ ಏಕಾಗ್ರತೆಯಿಂದರೆ ಒಮ್ಮುಖವಾಗಿರುವುದು ಅಥವಾ ಕೆಂದ್ರಿಕೃತವಾಗಿರುವುದು.ಮನಸ್ಸಿನಏಕಾಗ್ರತೆಯೆಂದರೆ ಮನಸ್ಸನ್ನು ಕೇಂದ್ರಿಕೃತಗೊಳಿಸುವುದು ಅಥವಾ ಒಮ್ಮುಖವಾಗಿಸುವುದು.ಹಾಗಾದರೆ ನಮ್ಮ ಮನಸ್ಸು ಈಗಕೆಂದ್ರಿಕೃತವಾಗಿಲ್ಲವೇ? ಎಂದು ಕೇಳಿದರೆ "ಇಲ್ಲ" ಎಂದೇ ಹೇಳಬೇಕಾಗುತ್ತದೆ. ಏಕೆಂದರೆ,ಸ್ವಭಾವತ; ಮನಸ್ಸುಚಂಚಲ.ಜೊತೆಗೆ ನಮ್ಮ ಕಣ್ಣು, ಕಿವಿ,ಮೂಗೂ ,ನಾಲಗೆ,ಚರ್ಮಗಳೆಂಬ ಪಂಚೇಂದ್ರಿಯಗಳು ಮನಸ್ಸನ್ನು ತಮ್ಮೆಡೆಗೆ ಸದಾಸೆಳೆಯುತ್ತಲೇ ಇರುತ್ತವೆ.ನಮ್ಮ ಐದು ಇಂದ್ರಿಯಗಳು ಬಹಳ ಪ್ರಬಲವಾದವುಗಳಾದ್ದರಿಂದ ನಮ್ಮ ಮನಸ್ಸು ಐದು ಕಡೆಗೂಹರಿದಾಡುತ್ತಲೇ ಇರುತ್ತದೆ. ಅಲ್ಲದೆ , ಮನಸ್ಸಿಗೆ ತನ್ನದೇ ಆದ ಬಗೆಬಗೆಯ ಆಸೆಗಳಿರುತ್ತವೆ. ಆಸೆಗಳಿಗೆ ಸೆಳೆಯುವ ಶಕ್ತಿಯಿದೆಹೀಗೆ ಆಸೆಗಳ ಸೆಳೆತಗಳಿಗೆ ಇಂದ್ರಿಯಗಳ ಸಹಕಾರವು ಸಿಕ್ಕಿ ಬಡಪಾಯಿ ಮನಸ್ಸು ಕೋತಿಯಂತೆ ಕುಣಿದಾಡುತ್ತಿರುತ್ತದೆ. ಹೀಗೆಕುಣಿದಾಡುವ ಮನಸ್ಸಿನಲ್ಲಿ ಏಕಾಗ್ರತೆಯನ್ನು ನಿರೀಕ್ಷಿಲು ಉಂಟೆ ?
ಹಾಗಾದರೆ ಮನಸ್ಸನ್ನು ಸಮಸ್ಥಿತಿಯಲ್ಲಿಡುವುದು ಹೇಗೆ?. ಹತ್ತಾರು ದಿಕ್ಕುಗಳಲ್ಲಿ ಹರಿದಾಡುವ ಮನಸ್ಸನ್ನು ಒಂದೇದಿಕ್ಕಿನತ್ತ ಹರಿಯಿಸುವುದು ಹೇಗೆ ?.ಮನಸ್ಸನ್ನು ಸುಶಿಕ್ಷಿತ ಗೊಳಿಸಿ ಶಿಸ್ತುಬದ್ದವಾಗಿಸುವುದೇ ಅದಕ್ಕೆ ತಕ್ಕ ಉಪಾಯ.ಮನಸ್ಸಿಗೆಶಿಕ್ಷಣ ಕೊಡುವುದು ಹೇಗೆ?-ಇದು ಎರಡನೆಯ ಪ್ರಶ್ನೆ.ಒಂದು ಸಲಕ್ಕೆ ಒಂದೇ ವಿಷಯದಲ್ಲಿ ತೊಡಗಿರುವಂತೆ ಮನಸ್ಸಿಗೆ ತಿಳಿಯಹೇಳಬೇಕು. " ಮನಸ್ಸೇ ಈಗ ನಾನು ಪಾಠವನ್ನು ಓದಿ ತಿಳಿದುಕೊಳ್ಳಬೇಕಾಗಿದೆ.ಆದ್ದರಿಂದ ನೀನು ಇತರ ವಿಷಯಗಳನ್ನುಯೋಚಿಸದೆ ಪಾಠದಲ್ಲೇ ನೆಲೆಗೊಂಡು ಅದನ್ನು ಹ್ರುದ್ಗತಮಾಡಿಕೊಳ್ಳಲು ನನಗೆ ನೆರವಾಗು"ಎಂದು. ಹೀಗೆ ಮೃದುವಾಗಿ ಹೇಳಿದಮಾತನ್ನು ಮನಸ್ಸು ಕೇಳದೆ ಹೋದರೆ ಸ್ವಲ್ಪ ಕಟುವಾಗಿಯೇ ಹೇಳಿಬಿಡಬೇಕಾಗುತ್ತದೆ.; " ಮನಸ್ಸೇ ! ! ನೀನು ನನ್ನಸೇವಕ.ನಾನು ಹೇಳಿದಂತೆ ನೀನು ಕೇಳಲೇ ಬೇಕು" ಎಂದು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486















.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ