MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಜೂನ್ 17, 2010

"ಜೀವನದಲ್ಲಿ ಸುಖ ಪಡಬೇಕಾದದ್ದುಯುವಕನಾಗಿರುವಾಗಲಲ್ಲದೆ ಮುದುಕನಾದ ಮೇಲೆಯೇ?"

ಶಿಸ್ತುಬದ್ಧವಾದ ಜೇವನ ನಡೆಸಬೇಕಾದದ್ದು ಬಹಳ ಮುಖ್ಯ. ಶಿಸ್ತಿನ ಜೀವನವೆಂದರೇನು ? ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗಿನ ಸಮಯದಲ್ಲಿ, ಮಾಡಬೇಕೆಂದುಕೊಂಡಿರುವ ಸಕಲ ಕಾರ್ಯಕಲಾಪಗಳನ್ನು ನಿಯತ್ತಾಗಿ ಮಾಡುತ್ತಾ ಬರುವುದು. ಜೊತೆಗೆ ಕೆಟ್ಟ ಆಲೋಚನೆಗಳು ಹುಟ್ಟದಂತೆ, ಹರಟೆಯ ಮಾತುಗಳು ಹೊರಡದಂತೆ,ವ್ಯರ್ಥಕಾರ್ಯಗಳು ನಡೆಯದಂತೆಎಚ್ಚರದಿಂದಿರಬೇಕು.ಆದರೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ನಡುನಡುವೆ ತಪ್ಪು ಸಂಭವಿಸಬಹುದು.ಆಗ ಪುನಹ ಮತ್ತೊಮ್ಮೆ ಪಾಠಹೇಳಬೇಕು. ಹೀಗೆ ಸ್ವಲ್ಪ ಕಾಲ ಹೋರಾಡಿ ಹೋರಾಡಿ ನಮ್ಮ ನಡವಳಿಕೆಯನ್ನು ಒಂದು ಹದಕ್ಕೆ ತಂದುಕೊಳ್ಳಬೇಕಾಗುತ್ತದೆ. ರೀತಿಯಾಗಿ ನಮ್ಮ ದೈನಂದಿನ ನಡವಳಿಕೆಗಳು ಒಂದು ನಿಶ್ಹಿತ ಗತಿಯಲ್ಲಿ ಸಾಗತೊದಗಿದಾಗ ಮನಸ್ಸು ಬಹಳಮಟ್ಟಿಗೆಸಮಸ್ಥಿತಿಯನ್ನು ಮುಟ್ಟುತ್ತದೆ. ಇಂತಹ ಮನಸ್ಸು ಅತ್ಯಂತ ವಿಧೇಯ ಸೇವಕನಂತೆ ಸದಾ ಸಹಾಯಕಾರಿ ಯಾಗುತ್ತದೆ.

ನಾವು ಆಗಲೇ ನೋಡಿದಂತೆ ನಮ್ಮ ಐದು ಇಂದ್ರಿಯಗಳು ಮನಸ್ಸನ್ನು ಎಳೆದಾಡುವಂಥವುಗಳಾದ್ದರಿಂದ ಅವುಗಳ ಮೇಲೂಕಾವಲಿನ ಕಣ್ಣಿಟ್ಟಿರಬೇಕಾಗುತ್ತದೆ. ಅವುಗಳು ಹೊತ್ತುಗೊತ್ತುಗಳಿಲ್ಲದೆ ಏನೇನನ್ನೋ ಕೇಳುತ್ತಿರುತ್ತವೆ. ಅವು ಎಷ್ಟಾದರೂ ನಮ್ಮಇಂದ್ರಿಯಗಳಲ್ಲವೆ ಎಂಬ ಮೋಹದಿಂದ ಅವು ಕೇಳಿದ್ದನ್ನು ಕೊಡುತ್ತ ಬಂದರೆ ಅವುಗಳ ಜೊತೆಯಲ್ಲೇ ಇರುವ ಮನಸ್ಸು ಮತ್ತೆಮಂಗನಂತಾಗುವುದು ಖಂಡಿತ.ಆದ್ದರಿಂದ ಮನಸ್ಸಿನ ಏಕಾಗ್ರತೆಯನ್ನು ಬಯಸುವವರು ಇಂದ್ರಿಯಗಳು ಕೇಳಿದ್ದನ್ನೆಲ್ಲ ಕೊಟ್ಟು ಅತಿಮುದ್ದು ಮಾಡುವ ಅವಿವೇಕಕ್ಕೆ ಹೋಗಬಾರದು.

ಇಂದಿನ ವಿದ್ಯಾರ್ಥಿಗಳು ಪಾಶ್ಚಾತ್ಯ ನಾಗರಿಕತೆಗೆ ಮರುಳಾಗಿಯೋ ಅಥವಾ ಕಲಿಗಾಲದ ಪ್ರಭಾವದಿಂದಲೋ ತಮ್ಮಇಂದ್ರಿಯಗಳನ್ನು ಸ್ವೇಚ್ಚೆಯಾಗಿ ಹರಿಯಗೊಟ್ಟಂತೆ ಕಂಡುಬರುತ್ತದೆ. "ಜೀವನದಲ್ಲಿ ಸುಖ ಪಡಬೇಕಾದದ್ದು ಯುವಕನಾಗಿರುವಾಗಲಲ್ಲದೆ ಮುದುಕನಾದ ಮೇಲೆಯೇ?"ಎಂಬ ತರ್ಕಬದ್ದ ವಾದಸರಣಿಯನ್ನು ಮುಂದಿಟ್ಟು ಮಂದಹಾಸ ಬೀರುತ್ತನಿಂತಿರುವ ಯುವಕರಿಗೆ ಯಾವ ಗುರುಹಿರಿಯರು ವಿವೇಕ ಹೇಳಲು ಮುಂದಾಗುತ್ತಿಲ್ಲ.ಅಸಂಖ್ಯಾತ ಯುವಕರು ಒಕ್ಕೊರಳಿನಿಂದ ಹೇಳುವ ಮಾತಿನಲ್ಲಿ ಸತ್ಯಾಂಶ ವಿರಬಹುದೆಂಬ ಭ್ರಾಂತಿ ಮೂಡಿದಂತಿದೆ ಗುರುಹಿರಿಯರಲ್ಲಿ !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486
















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ