MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಜೂನ್ 8, 2010

ಅಧ್ಯಾಪಕರ ಎದುರು ನಾಟಕೀಯ ಪ್ರವೃತ್ತಿ ಸಲ್ಲದು!

ನಿನ್ನೆ ನಾವು ಸಾಮೊಹಿಕ ಅಧ್ಯಯನ , ಚರ್ಚೆ,ವಿಚಾರ ವಿನಿಮಯ ಮುಂತಾದ ವಿಷಯಗಳ ಬಗ್ಗೆ ತಿಳಿದೆವು. ಈಗ ಸ್ವಲ್ಪ ಮುಂದೆಹೋಗೋಣ.
ಬಹಳ ಮುಖ್ಯವಾದ ಇನ್ನೊಂದು ವಿಚಾರ ಹೇಳುತ್ತೇನೆ ಕೇಳು.ನೀನು ನಿನ್ನ ತರಗತಿಯಲ್ಲಿ ಮುಂದಿನ ಬೆಂಚಿನಲ್ಲಿ ಕುಳಿತುಕೊಮತ್ತು ನಿನ್ನ ಕಣ್ಣು-ಕಿವಿಗಳೆರಡನ್ನು ಅಧ್ಯಾಪಕರಲ್ಲೇ ನೆಟ್ಟು, ಅವರು ಹೇಳುವುದನ್ನು ಗಮನವಿಟ್ಟು ಆಲಿಸು.ಆಗ ಅಧ್ಯಾಪಕರಿಗೂ ನಿನ್ನಶ್ರದ್ದೆಯನ್ನು ಕಂಡು ನಿನ್ನ ಮೇಲೆ ಪ್ರೀತಿ-ವಿಶ್ವಾಸ ಹುಟ್ಟುತ್ತದೆ. ತಮ್ಮ ಪ್ರೀತಿ-ವಿಶ್ವಾಸಕ್ಕೆ ಪಾತ್ರನಾದ ನಿನ್ನ ಮೇಲೆ ಅವರು ವಿಶೇಷಗಮನ ಹರಿಸುತ್ತಾರೆ. ಹಾಗೆಯೇ ಅಧ್ಯಾಪಕರ ಎದುರು ನಾಟಕೀಯ ಪ್ರವೃತ್ತಿ ಸಲ್ಲದು. ನಿನ್ನ ಪ್ರಾಮಾಣಿಕತನದ ಮೇಲೆ ಅವರ ಪ್ರೀತಿಅವಲಂಬಿಸಿರುತ್ತದೆ. ಹಾಗೆಯೇ ಇತರ ಅಧ್ಯಾಪಕರ ವಿಷಯದಲ್ಲಿ ತುಂಬಾ-ವಿಶ್ವಾಸದಿಂದ ನಡೆದುಕೊ.ಅಧ್ಯಾಪಕರ ಬಗ್ಗೆ ಇತರಹುಡುಗರು ಏನೇ ಟೀಕೆ ಮಾಡಿದರೂ ನೀನು ಅದರಿಂದ ಪ್ರಭಾವಿತನಾಗಿ ನಿನ್ನ ಮನಸ್ಸನ್ನು ಕೆಡಿಸಿಕೊಳ್ಳಬೇಡ. ನೀನು ಭಕ್ತಿಗೌರವಗಳಿಂದ ನಡೆದು ಕೊಂಡುದೆ ಆದರೆ ಎಂಥ ಬಿರುಸಿನ ಅಧ್ಯಾಪಕರೂ ನಿನ್ನ ವಿಷಯದಲ್ಲಿ ಮೃದುವಾಗುತ್ತಾರೆ.
ಕೆಲವು ವಿದ್ಯಾರ್ಥಿಗಳು ಕೇಳುವುದುಂಟು ."ಕೆಲಕೆಲವು ಅಧ್ಯಾಪಕರ ವೈಯಕ್ತಕ ಜೀವನವನ್ನು ಕಂಡರೆ ಅವರನ್ನು ಗೌರವದಿಂದಕಾಣಬೇಕೆಂದೆನಿಸುವುದೇ ಇಲ್ಲವಲ್ಲ?" ಎಂದು. ಆದರೆ ನಾನು ನಿನಗಾಗಿ ಒಂದು ಮಾತನ್ನು ಹೇಳುತ್ತೇನೆ ಕೇಳು.-ನೀನು ಅಂಥಅಧ್ಯಾಪಕರ ವೈಯಕ್ತಕ ಜೀವನವನ್ನು ನೋಡುವ ಗೊಡವೆಗೆ ಹೋಗಲೇ ಬೇಡ. ಅಲ್ಲದೆ ಇತರ ಹುಡುಗರು ಸಂಬಂಧವಾಗಿಹೇಳುವುದನು ಕೇಳಲೂ ಬೇಡ/ ನೀನು ಮಾತ್ರ ಪ್ರತಿಯೊಬ್ಬ ಅಧ್ಯಾಪಕರ ಹೃದಯದಲ್ಲೂ ಸಚ್ಚಿದಾನಂದ ಗುರುವೇ ಇದ್ದಾನೆಎಂಬ ಭಾವದಿಂದ ಅವರನ್ನು ಗೌರವದಿಂದ ಕಾಣು. ನಿನಗೆ ಇದು ಕಷ್ಟವೆನಿಸಿದರೂ ವಿವೇಕಿಗಳ ಮಾತಿನ ಮೇಲೆ ವಿಶ್ವಾಸವಿಟ್ಟು ಹಾಗೆಮಾಡು. ಇದರಿಂದ ನಿನಗೆ ದೊರೆಯುವ ಪ್ರಯೋಜನ ಅದೆಷ್ಟು ಅಪಾರ ಎಂಬುದನ್ನು ಮುಂದೆ ನೀನೆ ನೋಡುವೆ.
ಇನ್ನು ಕೆಲವು ವಿದ್ಯಾರ್ಥಿಗಳು ಸುಮಾರು ಫೆಬ್ರುವರಿ -ಮಾರ್ಚ್ ತಿಂಗಳಲ್ಲಿ ನಮ್ಮ ಬಳಿ ಬಂದು "ಏಕಾಗ್ರತೆ ಸಂಪಾದಿಸಲು ಏನುಮಾಡಬೇಕು"ಎಂದು ಕೇಳುವುದುಂಟು . ಹಾಗೆಯೇ "ಧ್ಯಾನ ಮಾಡುವುದು ಹೇಗೆ?"ಎಂದು ಕೇಳುವವರು ಉಂಟು. ಇನ್ನು ಕೆಲವರು ಮನಸ್ಸನ್ನು ಹಿಡಿದಿಡುವುದು ಹೇಗೆ?" ಎಂದು ಕೇಳುತ್ತಾರೆ; ಇವರೆಲ್ಲರ ಪ್ರಶ್ನೆಯ ಹಿಂದುರುವ ಭಾವವೆಂದರೆ ವರ್ಷವಿಡಿ ಓದದೆಒತ್ತಟ್ಟಿಗಿಟ್ಟ ಪಟ್ಯಪುಸ್ತಕಗಳ ವಿಷಯಗಳನ್ನು ದಿಡೀರನೆ ತಲೆಗೆ ತುಂಬಿಕೊಳ್ಳಲು ಏನಾದರೊಂದು ತಂತ್ರೋಪಾಯವಿದ್ದರೆ ತಿಳಿಸಿಎಂದು. ಎಂತಹ ಯಾವ ತಂತ್ರೋಪಾಯವು ಜಗತ್ತಿನಲ್ಲೇ ಇಲ್ಲ. ಮತ್ತೆ ಮತ್ತೆ ಓದುವುದು. ಓದಿದ್ದನ್ನೇ ಓದುವುದು. ಅರ್ಥಮಾಡಿಕೊಂಡು ಓದುವುದು .ಓದಿದ್ದನ್ನು ನೆನಪು ಮಾಡಿಕೊಳ್ಳುವುದು. ಮರೆತಿದ್ದರೆ ಮತ್ತೆ ಓದುವುದು- ಇದೇ ಜ್ಞಾಪಕ ಶಕ್ತಿಯಮರ್ಮ. ಮನಸ್ಸನ್ನು ಏಕಾಗ್ರಗೊಳಿಸಲು ಅಭ್ಯಾಸವೇ ಪ್ರಧಾನ ಸಾಧನ ಎನ್ನುತ್ತದೆ ಭಗವದ್ಗೀತೆ . ಅಭ್ಯಾಸವೆಂದರೇನು ?ಪುನಹ
ಪುನಹ ಪ್ರತಿದಿನ ಮಾಡುವ ಪ್ರಯತ್ನ . ನಿನ್ನ ಅಧ್ಯಯನವನ್ನು ಕ್ರಮಪ್ರಕಾರ ಪ್ರತಿದಿನ ಮಾಡುತ್ತಾ ಬಂದರೆ ಮನಸ್ಸು ಸಹಜವಾಗಿಯೇಏಕಾಗ್ರವಾಗುತ್ತದೆ.
-.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486





















"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ