MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಜೂನ್ 27, 2010

ದೇವರು ಸರ್ವಶಕ್ತ ನಾದುದ್ದರಿಂದ ನಮ್ಮ ಪ್ರಾರ್ಥನೆ ಯನ್ನೂ ಈಡೇರಿಸಿ ಕೊಡುತ್ತಾನೆ

ಜೂನ್ ಬಂತೆಂದರೆ ಶಾಲೆಗಳು ತೆರೆದು ಪಾಠಪ್ರವಚನಗಳು ಪ್ರಾರಂಭ. ಸುಮಾರು ಒಂದೂವರೆ ತಿಂಗಳ ರಜೆಯ ಮಜವನ್ನುಅನುಭವಿಸಿದ ವಿದ್ಯಾರ್ಥಿಗಳು ಈಗ ಒಮ್ಮನಸ್ಸಿನಿಂದ ಅಧ್ಯಯನದಲ್ಲಿ ತೊಡಗಬೇಕು. ಸಾಮಾನ್ಯ ವಿದ್ಯಾರ್ಥಿಗಳು ಇನ್ನೂರಜಾದಿನಗಳ ಗುಂಗಿನಲ್ಲೇ ಇದ್ದರೂ ಉತ್ತಮ ವಿದ್ಯಾರ್ಥಿಗಳು ಮಾತ್ರ ಶ್ರದ್ಧೆಯಿಂದಲೇ ಅಧ್ಯಯನವನ್ನು ಪ್ರಾರಂಭಿಸುತ್ತಾರೆ .ಆದರೆ ಶ್ರದ್ಧಾವಂತ ವಿದ್ಯಾರ್ಥಿಗಳಲ್ಲಿ ಹಲವರನ್ನು ಪರೀಕ್ಷಾ ಭಯವೊಂದು ಹಿಡಿದುಕೊಂಡಿರುತ್ತದೆ. ಇನ್ನು ಕೆಲವರು ತಮ್ಮ ಹತ್ತಾರುಪಟ್ಯ ವಿಷಯಗಳನ್ನು ಓದಿ ನೆನಪಿಟ್ಟುಕೊಳ್ಳಲು ಕಷ್ಟ ಪಡುತ್ತಿರುತ್ತಾರೆ.ಮತ್ತೆ ಕೆಲವರಿಗೆ ಪಾಠ ಸರಿಯಾಗಿ ಅರ್ಥವೇ ಆಗುತ್ತಿಲ್ಲವಲ್ಲಎಂಬ ಸಂಕಟ . ಇದೊಂದು ವಿಶ್ವ ವ್ಯಾಪಕ ಸಮಸ್ಯೆ . ಸಮಸ್ಯೆಗೆ ಪರಿಹಾರಗಳು ಇಲ್ಲದಿಲ್ಲ. ಆದರೆ ಪರಿಹಾರಗಳನ್ನುಕಂಡುಕೊಳ್ಳಲು ತಾಳ್ಮೆಯಿಂದ ಆಲೋಚಿಸಬೇಕು.ಕೆಲವಾರು ಪರಿಹಾರೋಪಾಯಗಳನ್ನು 'ಅಧ್ಯಯನದಲ್ಲಿ ಏಕಾಗ್ರತೆ 'ಹಾಗೂವಿದ್ಯಾರ್ಥಿಗೊಂದು ಪತ್ರ' ಎಂಬ ಲೇಖನಗಳಲ್ಲಿ ಅದಾಗಲೇ ಓದಿದ್ದೀರಿ . ಈಗ ಇನ್ನೂ ಒಂದು ಉಪಾಯ ಇಲ್ಲಿದೆ.

ಇದು ಅತ್ಯಂತ ಪರಿಣಾಮಕಾರಿ ಮತ್ತು ಒಂದು ದೃಷ್ಟಿಯಿಂದ ತುಂಬ ಸುಲಭ ಕೂಡ . ಆದರೆ ಇಲ್ಲಿ ಸೂಚಿಸಿದಂತೆ ತಪ್ಪದೆಮಾಡುತ್ತ ಬರಬೇಕು. ಅಷ್ಟೆ. ಯಾವುದು ಉಪಾಯ?- ಪ್ರಾರ್ಥನೆ . ಪ್ರಾರ್ಥನೆ ಎಂದಾಕ್ಷಣ ಅದು ಭಗವಂತನಿಗೇ ಎಂಬುದುನಿಶ್ಹಯ. ಭಗವಂತ ಯಾರು? ಯಲ್ಲಿದ್ದಾನೆ ?ಅವನು ನಮ್ಮ ಹೃದಯದೊಳಗೆ ಇದ್ದಾನೆ. ಅವನನ್ನು ರಾಮ, ಕೃಷ್ಣಾಗಣೇಶ,ಲಕ್ಷ್ಮಿ,ಸರಸ್ವತಿ, ಏಸುಕ್ರಿಸ್ತ ,ಅಲ್ಲಾ ಇವೇ ಮೊದಲಾದ ಯಾವ ನಾಮರೂಪಗಳಿಂದ ಬೇಕಾದರೂ ಭಾವಿಸಬಹುದು. ಅದುಅವರವರ ಇಷ್ಟ . ಅವನು ಸರ್ವಶಕ್ತ. ಅವನು ಸರ್ವವ್ಯಾಪಿ,ಅವನು ಸರ್ವಜ್ಞ . ಅವನು ಪರಮ ಕರುಣಾಮಯ,ಅವನುಸರ್ವಶಕ್ತನಾದುದರಿಂದ ನಮ್ಮ ಪ್ರಾರ್ಥನೆಯನ್ನು ಈಡೇರಿಸಿಕೊಡಲು ಅವನಿಗೆನೇನೂ ಕಷ್ಟವಿಲ್ಲ.ಅವನುಪರಮಕರುಣಾಮಯನಾದ್ದರಿಂದ ಪ್ರಾರ್ಥನೆಗೆ ಓಗೊಡದೆ ಇರಲಾರ.ಆದರೆ ಭಗವಂತ ನಮ್ಮ ಪ್ರಾರ್ಥನೆಗೆ ಓಗೊಟ್ಟೆಗೊಡುತ್ತಾನೆಎಂಬ ವಿಶ್ವಾಸ ಶ್ರದ್ಧೆ ಇರಬೇಕಾದ್ದು ಬಹಳ ಮುಖ್ಯ.

ಈಗ ವಿದ್ಯಾರ್ಥಿಗಳು ಏನೆಂದು ಪ್ರಾರ್ಥನೆ ಮಾಡಬೇಕು? ಯಾರಿಗೆ ಏನು ಬೇಕೋ ಅವರು ಅದಕ್ಕಾಗಿ ಪ್ರಾರ್ಥಿಸುವುದುಲೋಕರೂಡಿ . ವಿದ್ಯಾರ್ಥಿಗಳಿಗೆ ವಿದ್ಯೆ ಬೇಕು. ವಿದ್ಯೆ ತಲೆಗೆ ಹತ್ತಬೇಕು . ಪರೀಕ್ಷೆಯಲ್ಲಿ ಪಾಸಾಗಬೇಕು. ಉತ್ತಮ ಶ್ರೇಣಿದೊರಕಬೇಕು -ಅಲ್ಲವೇ? ಆದ್ದರಿಂದ ಭಗವಂತನಲ್ಲಿ ಇದನ್ನೇ ಪ್ರಾರ್ಥಿಸಬೇಕು.

ಹೇ ಭಗವಾನ್, ನಿನಗೆ ಭಕ್ತಿಪೂರ್ವಕ ಪ್ರಣಾಮಗಳು .
ನನಗೆ ಹೆಚ್ಹೆಚ್ಚು ಓದಲು ಬುದ್ದಿ ಕೊಡು;
ಓದಿದ್ದನ್ನು ಅರ್ಥ ಮಾಡಿಕೊಳ್ಳಲು ಸಾಮರ್ಥ್ಯ ಕೊಡು;
ಅರ್ಥವಾದದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ಕೊಡು;
ನನ್ನನ್ನು ಉತ್ತಮ ವಿದ್ಯಾವಂತನನ್ನಾಗಿ ಮಾಡು.
ಹೇ ದೇವಾ. ನಿನಗೆ ಶರಣಾಗಿದ್ದೇನೆ.
ದಯಮಾಡಿ ನನ್ನೀ ಪ್ರಾರ್ಥನೆಯನ್ನು ಈಡೇರಿಸಿಕೊಡು.

ಪ್ರಾರ್ಥನೆ ಮಾಡುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳುವುದು ಒಳ್ಳೆಯದು. ಏಕೆಂದರೆ ಕಣ್ಣುಗಳು ತೆರೆದಿರುವಾಗ ಹೊರಗಣ ಬೆಳಕುವಸ್ತುಗಳು ಕಾಣಿಸುವುದರಿಂದ ಮನಸ್ಸು ಹೃದಯದೊಳಕ್ಕೆ ಸರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಣ್ಣುಗಳನ್ನುಮುಚ್ಚಿಕೊಂಡು ,ಅಂತರಗದೊಳಗಿರುವ ಪರಮಾತ್ಮನನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಬೇಕು.

ವಿದ್ಯೆ ಬೇಕೆಂಬ ವಿದ್ಯಾರ್ಥಿಗಳು ರಾತ್ರಿ ಮಲಗಿಕೊಳ್ಳುವ ಮುನ್ನ ಪ್ರಾರ್ಥನೆಯನ್ನು ತಪ್ಪದೆ ಮೂರು ತಿಂಗಳ ಕಾಲಮಾಡಿನೋಡಲಿ . ಇದರ ಸತ್ಪರಿಣಾಮದ ಮಧುರ ಫಲವನ್ನು ಅವರು ಅಲ್ಪಾವಧಿಯಲ್ಲೇ ಅನುಭವಿಸುವುದು ಖಂಡಿತ. ಆದರೆಪ್ರಾರ್ಥನೆ ಹ್ರುತ್ಪೂರ್ವಕವಾಗಿರಬೇಕು . ಶ್ರದ್ದೆಯಿಂದ ಕೂಡಿರಬೇಕು . ಏಕೆಂದರೆ ಶ್ರದ್ಧೆಯೇ ಸಿದ್ಧಿಯ ಕೀಲಿಕೈ.

ಭಗವಂತನು ನಮ್ಮ ಪ್ರಾರ್ಥನೆಯನ್ನು ಹೇಗೆ ನಡೆಸಿಕೊಡುತ್ತಾನೆ ಗೊತ್ತೆ? ಅವನು ಮನಸ್ಸನ್ನು ಅಧ್ಯಯನಕ್ಕೆಆಣೆಗೊಳಿಸಿಬಿಡುತ್ತಾನೆ . ಮನಸ್ಸಿನಲ್ಲಿ ಶಕ್ತಿ ಯನ್ನೂ ತೇಜಸ್ಸನ್ನು ತುಂಬುತ್ತಾನೆ. ಆಗ ಮನಸ್ಸು ಸಮರ್ಥವಾಗುತ್ತದೆ. ಸಮರ್ಥಮನಸ್ಸು ಸಾಧಿಸಲಾರದ್ದು ಯಾವುದಿದೆ ? ಆದ್ದರಿಂದ ಪ್ರಾರ್ಥನೆ ಎಂಬ ಅದ್ಬುತ ಉಪಾಯದ ಪ್ರಯೋಜನವನ್ನು ಪ್ರತಿಯೊಬ್ಬವಿದ್ಯಾರ್ಥಿಯು ಹೆಚ್ಹೆಚ್ಚು ಪಡೆಯುವಂತಾಗಬೇಕು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
. ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-೯೬೩೨೧೭೨೪೮೬

.............................................................................................................

ನಿರೀಕ್ಷಿಸಿ
ನಿಮ್ಮ ನೆಟ್ ನಾಗದಲ್ಲಿ
ಪ್ರಥಮ ಬಾರಿಗೆ
ಬದುಕು
ಬದಲಾಗಲು
ಕ್ಷಣ ಹೊತ್ತು
ಸಾಕು!

ಅತೀ ಶೀಘ್ರಾದಲ್ಲಿ ಪ್ರಕಟ. ಇದು ಸನ್ ನ್ಯಾಚುರಲ್ ಫ್ಲಾಶ್ .ಕಂ / ನ ಕೊಡುಗೆ . ನೊಂದ ಮನಸ್ಸಿಗೆ ತಂಪನ್ನು ನೀಡುವ ಲೇಖನಗಳು .












































' , -

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ