MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಜೂನ್ 6, 2010

ಕಂಡದ್ದನ್ನು ಕಂಡಂತೆಯೇ ಬರೆಯುವುದಕ್ಕೂ ಎಷ್ಟು ಎಚ್ಚರ ಬೇಕಾಗುತ್ತದೆ ಎಂಬುದು ನಿನಗೆ ಆಗತಿಳಿಯುತ್ತದೆ.

ಹಿಂದಿನ ಅಧ್ಯಾಯಗಳಲ್ಲಿ ಕಾಪಿ ಬರವಣಿಗೆಯ ಬಗ್ಗೆ ತಿಳಿದಿದ್ದೇವೆ. ಈಗ ನಾವು ಕಾಪಿ ಹೇಗೆ ಬರೆಯಬೇಕು ಎಂಬ ಬಗ್ಗೆತಿಳಿಯೋಣ. ನೀನು ಕಾಪಿ ಬರೆಯುವುದೆಂದರೆ , ಪ್ರಾಥಮಿಕ ಶಾಲೆಯ ಮಕ್ಕಳಂತೆ ಮಾದರಿ ವಾಕ್ಯವೊಂದನ್ನು ಮತ್ತೆ ಮತ್ತೆಬರೆಯುವುದಲ್ಲ.ಯಾವುದಾದರೂ ಪಾಠವನ್ನು ಮುಂದಿಟ್ಟುಕೊಂಡು ಅದನ್ನು ಬರೆಯುತ್ತ ಹೋಗು .ಇದು ಕನ್ನಡದಂತೆಯೇಇಂಗ್ಲೀಷ್,ಹಿಂದಿ ಭಾಷೆಯಲ್ಲೂ ನಡೆಯಬೇಕು. ಎಲ್ಲಾ ಭಾಷೆಗಳ ಪುಸ್ತಕದಿಂದ ಒಂದೆರಡು ಪ್ಯಾರಾಗಳನ್ನು ದಿನಾಲೂ ಬರೆಯುತ್ತಾಬಂದರಾಯಿತು . ಆದರೆ ಅಕ್ಷರ ಚೆನ್ನಾಗಿದೆಯೇ , ಸಾಲುಗಳು ಸರಿಯಾಗಿವೆಯೇ ಎಂದು ಪುಸ್ತ ನೋಡಿಸರಿಪಡಿಸಿಕೊಳ್ಳಬೇಕು.ಕಂಡದ್ದನ್ನು ಕಂಡಂತೆಯೇ ಬರೆಯುವುದಕ್ಕೂ ಎಷ್ಟು ಎಚ್ಚರ ಬೇಕಾಗುತ್ತದೆ ಎಂಬುದು ನಿನಗೆ ಆಗತಿಳಿಯುತ್ತದೆ.
ಅದು ಕಾಪಿ ಬರೆಯುವ ವಿಚಾರವಾಯಿತು. ಇನ್ನು ನೀನು ಸ್ವತಂತ್ರವಾಗಿ ಒಂದು ವಿಷಯದ ಕುರಿತು ಬರೆಯುವ ಸಾಮರ್ಥ್ಯವನ್ನುಬೆಳೆಸಿಕೊಳ್ಳಬೇಕು , ಅದಕ್ಕೆ ಪಟ್ಯಪುಸ್ತಕದ ಸಹಾಯವನ್ನು ಪಡೆದುಕೊಳ್ಳಬಹುದು . ಒಂದು ಪಾಠ ವನ್ನು ಅಮುಲಾಗ್ರವಾಗಿ ಓದಿ . ವಿಷಯವನ್ನು ಸರಿಯಾಗಿ ಮನನಮಾಡಿಕೋ. ಬಳಿಕ ಪುಸ್ತಕವನ್ನು ಮುಚ್ಚಿಟ್ಟು , ವಿಷಯವನ್ನು ನಿನ್ನ ಸ್ವಂತವಾಕ್ಯಗಳಲ್ಲಿ ನಿನ್ನದೇಆದ ರೀತಿಯಲ್ಲಿ ಬರೆ. ಆಮೇಲೆ ಪುಸ್ತಕದಲ್ಲಿರುವ ವಿಷಯಕ್ಕೂ ನೀನು ಬರೆದಿರುವ ವಿಷಯಕ್ಕೂ ಹೊಂದಿಕೆಯಿದೆಯೇ ಎಂದುನೋಡಿಕೋ. ಹಾಗೆಯೇ ಅಕ್ಷರಗಳು ಚೆನ್ನಾಗಿವೆಯೇ, ಪಂಕ್ತಿಗಳು ನೆಟ್ಟಗಿವೆಯೇ, ಚಿತ್ತುಗಳು ಎಷ್ಟಾಗಿವೆ ಎಂಬುದನ್ನೆಲ್ಲನೋಡಿಕೋ.ಮತ್ತು ಅಷ್ಟನ್ನು ಬರೆಯಲು ಎಷ್ಟು ಸಮಯ ಹಿಡಿಯಿತು ಎಂಬುದನ್ನು ನೋಡಿಕೋ. ಮುಂದಿನ ಸಲ ಇನ್ನೊಂದುವಿಷಯವಾಗಿ ಬರೆಯುವಾಗ ಹಿಂದಿನ ಸಲದ ಎಲ್ಲಾ ಲೋಪದೋಷಗಳನ್ನು ಹೋಗಲಾಡಿಸಿಕೋ . ಬಗೆಯ ಅಭ್ಯಾಸದಿಂದ ಪರೀಕ್ಷೆಯಲ್ಲಿ ವೇಗವಾಗಿಯೂ ಸುಂದರವಾಗಿಯೂ ಚೊಕ್ಕಟವಾಗಿಯೂ ಬರೆಯಲು ಸಮರ್ಥನಾಗುವೆ.
ಜ್ನಾನಸಂಪಾದನೆಗಾಗೆ ಅಧ್ಯಯನ ಮಾಡುವುದು ಎಷ್ಟು ಮುಖ್ಯವೋ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕಾಗಿ ಅಧ್ಯಯನಮಾಡುವುದು ಅಷ್ಟೇ ಮುಖ್ಯ . ಜ್ಞಾನವಿದ್ದು ಪರೀಕ್ಷೆಯಲ್ಲಿ ನಪಾಸಾದರೆ ಏನು ಪ್ರಯೋಜನ ? ಪರೀಕ್ಷೆಯಲ್ಲಿ ತೆರ್ಗಡೆಯಾಗಬೇಕಾದರೆ ಪರೀಕ್ಷೆಗೆ ಇಟ್ಟಿರುವ ಎಲ್ಲಾ ವಿಷಯಗಳ ಕಡೆಗೂ ಸಮಾನವಾಗಿ ಗಮನ ಹರಿಸಬೇಕಾಗುತ್ತದೆ. ನಿನಗೆ ಗಣಿತ ಹಾಗು ವಿಜ್ಞಾನ ಇವುಗಳಲ್ಲಿ ಅಷ್ಟಾಗಿ ಆಸಕ್ತಿಯಿಲ್ಲ ಎಂದು ಬರೆದಿರುವೆ.ಆದರೆ ಪರೀಕ್ಷೆಗಾಗಿ ಆಸಕ್ತಿ ತಂದುಕೊಂಡು ಅವುಗಳ ಅಧ್ಯಯನ ನಡೆಸಬೇಕು. ಇನ್ನು ಕೆಲವು ವಿಷಯಗಳು ನಿನ್ನ ತಲೆಗೆ ಹತ್ತುವುದು ಸ್ವಲ್ಪ ಕಷ್ಟವಾಗಬಹುದು. ಅಂತ ವಿಷಯಗಳಲ್ಲಿ ನೀನು ಇನ್ನು ಹೆಚ್ಚಿನ ಆಸಕ್ತಿ ವಹಿಸಬೇಕು.ಮತ್ತು ಅಧ್ಯಾಪಕರ ಅಥವಾ ಬುದ್ದಿವಂತ ಹುಡುಗರ ಸಹಾಯವನ್ನು ಪಡೆದು , ಅರ್ಥವಾಗದಿದ್ದ ಅಂಶಗಳನ್ನು ಮನವರಿಕೆ ಮಾಡಿಕೊಳ್ಳಲು ಶ್ರಮಿಸಬೇಕು.-ವಿಧ್ಯಾಭ್ಯಾಸ ವೊಂದು ತಪಸ್ಸಲ್ಲವೇ?.ಕಷ್ಟಪಡಬೇಕು.

ವಂದನೆ ಹಾಗು ಪ್ರೀತಿ ವಿಶ್ವಾಸಗಳೊಂದಿಗೆ ನೆಟ್ನಾಗ

-ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನಯ್ಚುರಲ್ ಫ್ಲಾಶ್ .ಕಂ/
+೯೧-9632172486

















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ