MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಜೂನ್ 5, 2010

ವಿವೇಚನೆಯಿಂದ ಓದುವುದು ಎಷ್ಟು ಪ್ರಾಮುಖ್ಯವೋ ಸಮರ್ಪಕವಾಗಿ ಬರೆಯುವುದೂ ಅಷ್ಟೇ ಪ್ರಾಮುಖ್ಯ

ಅಧ್ಯಯನದಲ್ಲಿ ಕೇವಲ ಓದುವಿಕೆಯೊಂದೆ ಅಲ್ಲ . ಬರೆಯುವಿಕೆಯು ಸೇರಿಕೊಂಡಿದೆ ಎಂಬುದು ನಿನಗೆ ತಿಳಿದಿರಲಿ. ವಿವೇಚನೆಯಿಂದ ಓದುವುದು ಎಷ್ಟು ಪ್ರಾಮುಖ್ಯವೋ ಸಮರ್ಪಕವಾಗಿ ಬರೆಯುವುದೂ ಅಷ್ಟೇ ಪ್ರಾಮುಖ್ಯ . ನೀನು ಪರೀಕ್ಷೆಯಲ್ಲಿಪ್ರಶ್ನಪತ್ರಿಕೆಯಲ್ಲಿರುವ ಎಲ್ಲ ಪ್ರಶ್ನೆಗಳನ್ನುಉತ್ತರಿಸಲೇ ಬೇಕು. ಆದರೆ ನಿಗದಿತ ವೇಳೆಯಲ್ಲಿ ಅವನ್ನೆಲ್ಲ ಬರೆದು ಮುಗಿಸಬೇಕಾಗುತ್ತದೆಅಲ್ಲವೆ? ಅಂದಮೇಲೆ ವೇಗವಾಗಿ ಬರೆಯುವ ಅಭ್ಯಾಸ ಮಾಡಿಕೊಳ್ಳುವುದು ಬೇಡವೆ? ಆದ್ದರಿಂದ ಪ್ರತಿದಿನ ನೀನು ಒಂದಿಷ್ಟುಬರವಣಿಗೆಯ ಕಾರ್ಯವನ್ನು ಮಾಡಲೇಬೇಕು .
ಬರವಣಿಗೆಯ ಅಭ್ಯಾಸವನ್ನು ಹೇಗೆ ಮಾಡಬೇಕು ಎಂಬ ವಿಷಯವಾಗಿ ಒಂದೆರಡು ಮಾತನ್ನು ಹೇಳಿಬಿಡುತ್ತೇನೆ. ಮೊದಲನೆಯದಾಗಿ ಕಾಪಿ ಬರೆಯುವ ಅಭ್ಯಾಸ ಇಟ್ಟುಕೋ. ನಾನು ವಿದ್ಯಯರ್ಥಿಯಾಗಿದ್ದಾಗ ನಮ್ಮ ಅಧ್ಯಾಪಕರು ನಮ್ಮಿಂದ ಕಪಿಬರೆಯಿಸಿದ್ದು ಇಂದಿಗೂ ಚೆನ್ನಾಗಿ ನೆನಪಿದೆ. ಏಕೆಂದರೆ ಚೆನ್ನಾಗಿ ಏಟು ಕೊಟ್ಟು ಬರೆಸುತ್ತಿದ್ದರು . ಅಕ್ಷರ ಚೆನ್ನಾಗಿಲ್ಲದಿದ್ದರೆಏಟು.ತಪ್ಪಾಗಿ ಬರೆದಿದ್ದರೆ ಏಟು. ಸಾಲುಗಳು ಸೊಟ್ಟಗಿದ್ದರೆ ಏಟು.ಬರವಣಿಗೆಯಲ್ಲಿ ಒಂದೊಂದು ಅಕ್ಷರ ಒಂದೊಂದು ಗಾತ್ರದ್ದಾಗಿದ್ದರೆಏಟು. ಒಂದು ಶಬ್ದಕ್ಕೂ ಇನ್ನೊಂದು ಶಬ್ದಕ್ಕೂ ಸರಿಯಾದ ಅಂತರವಿರದಿದ್ದರೆ ಏಟು.ಅಕ್ಷರದ ಮೇಲೆ ಅಕ್ಷರ ಬಿದ್ದುಕೊಂಡನ್ತಿದ್ದರೆ ಏಟು. ಇವೆಲ್ಲದರ ಜೊತೆಗೆ ದಿನಾಲು ಬಳಸುವ ಕಾಪಿ ಪುಸ್ತಕ ಚೊಕ್ಕಟವಾಗಿಲ್ಲದಿದ್ದರೆ ಏಟು. ಇನ್ನು ಕಾಪಿ ಬರೆಯಲು ತಪ್ಪಿದ ದಿನವಂತೂಏಟೋ ಏಟು ! ಹೀಗೆ ಏಟಿನ ಮೇಲೆ ಏಟು ತಿಂದೇ ನಾವು ಪಾಠ ಕಲಿತದ್ದು.ಏಟು ಕೊಟ್ಟ ಅಧ್ಯಾಪಕರ ಮೇಲೆ ಅಂದು ಕೋಪಬಂದದ್ದೂ ಉಂಟು. ಆದರೆ ಎಂದು ಅವರನ್ನು ನೆನೆದಾಗಲೆಲ್ಲ ಹೃದಯ ಅವರಿಗೆ ಕೃತಜ್ಞತೆಯನ್ನರ್ಪಿಸುತ್ತದೆ.
ಯಾವುದೇ ಒಂದು ಒಳ್ಳೆಯ ಪುಸ್ತಕ ಓದುವುದರಿಂದ ಪ್ರಯೋಜನ ಪಡೆಯಬೇಕಾದರೆ ದಯವಿಟ್ಟುಕಾರ್ಯರೂಪಕ್ಕೆ ತನ್ನಿ .ಇಲ್ಲದಿದ್ದರೆ ಅದು ಬರೀ ಪುಸ್ತಕದ ಅಕ್ಷರವಾಗಿಯೇ ಉಳಿಯುತ್ತದೆ. ಲೇಖಕರ ಜೇಬಿಗೆ ಹಣ ಪಾವತಿ ಯಂತುಮೊದಲೇ ಮಾಡಿರುತ್ತೀರಿ. ದಯವಿಟ್ಟು ಇದುವರೆವಿಗೂ ಶಾಲೆಯ ಹಿಂದಿನ ಬೆಂಚಿನಲ್ಲಿ ಕುಳಿತು ಸಮಯ ವ್ಯರ್ಥ ಮಾಡಿದ್ದಾಯ್ತುಗುರುಗಳು ಅರ್ಥವಾಯ್ತ ಎಂದು ಕೇಳಿದರೆ ಆಯ್ತು ಸಾರ್ ಅಂದಿದಾಯ್ತು.ಗುರುಗಳ ಜೇಬಿಗೆ ಸಂಬಳ ಹೋಗಿದ್ದಾಯ್ತು.ನೀವುನಪ್ಪಾಸಾಗಿ ಹಾಗೆಯೇ ಉಳಿದಿದ್ದಾಯ್ತು. ದಯವಿಟ್ಟು ನೀವು ನನ್ನ ಬರವಣಿಗೆಯನ್ನು ನಿಮ್ಮ ಸ್ನೇಹಿತರಿಗೆ ಇಮೇಲ್ ಮುಖಾಂತ ಕಳುಹಿಸಿ. ಹಾಗೆಯೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನನಗೆ ಕಳುಹಿಸುತ್ತಿರಿ.ದಯವಿಟ್ಟು ನನ್ನ ಒಂದು ಮಾತನ್ನು ನಿಮ್ಮಬಳಿಯಲ್ಲಿ ಬರೆದಿಟ್ಟು ಕೊಂಡಿರಿ.
ನಾನು ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೋಕಿನ ಎಲ್ .ಬಿ .& ಎಸ್.ಬಿ. ಎಸ್ . ಕಾಲೇಜಿನಲ್ಲಿ ಕನ್ನಡವಿಭಾಗದ ವಿದ್ಯಾರ್ಥಿ ಆಗಿದ್ದೆ. ಆಗ ಕನ್ನಡ ವಿಭಾಗಕ್ಕೆ ಮಾನ್ಯ ಶ್ರೀ ರೇಣುಕಪ್ಪ ಗೌಡ ರು ಮುಖ್ಯಸ್ತರಾಗಿದ್ದರು . ಅವರು ಪಾಠಮಾಡುವಾಗ ಒಂದು ರತ್ನದಂತ ಮಾತನ್ನು ಹೇಳುತ್ತಿದ್ದರು . "ಹುಡುಗರ ,ಹುಡುಗಿಯರ ನೀವು ದಡ್ಡರಲ್ಲ . ಸೋಮಾರಿಗಳು !.ಬೆಳಿಗ್ಗೆಎದ್ದು ಓದಿ .ಚೆನ್ನಾಗಿ ಅಂಕ ಪಡಿಯಿರಿ. ".ಆದರೆ ರೇಣುಕಪ್ಪ ಗೌಡ ರು ನಮ್ಮೊಂದಿಗೆ ಇಲ್ಲ .ಆದರೆ ಗುರು ನಮಗೆ ಬಳುವಳಿ ಯಾಗಿಉಡುಗೊರೆಯಾಗಿ ಕೊಟ್ಟ ಮಾತು ನನ್ನ ಜೀವನ ವನ್ನು ಬದಲಾಯಿಸಿದೆ. ಕಾಲೇಜಿನಲ್ಲಿ ಓದಿದವರು ,ಅವರ ಮಾತನ್ನುಕೇಳಿದವರು ಎಷ್ಟೋ ಜನ ಇರಬಹುದು. ಆದರೆ ಅದನ್ನು ಕಾರ್ಯರೂಪಕ್ಕೆ ತಂದವರು ಬೆರಳೆಣಿಕೆಯ ಜನ ಮಾತ್ರ.
ಒಂದು ದಿನದಲ್ಲಿ ಮಾನ್ಯ ಜಿ .ಎಸ್ ,ಬಟ್ಟರ ವಿಮರ್ಶೆ,ಪ್ರಭು ಸ್ವಾಮಿ ಮಟ ನೋಟ್ಸ್ .ಗೌಡರ ಪಾಠ ತುಂಬಾ ಪ್ರಭಾವಬಿರಿದವು.
ಹಾಗೆಯೇ ಟಿ.ಪಿ, ಅಶೋಕ್ ಇಂಗ್ಲಿಷ್ ಪ್ರಾಧ್ಯಾಪಕರು ಒಂದು ಮಾತನ್ನು ಹೇಳುತ್ತಿದ್ದರು.ನಿಮಗೆ ಇಂಗ್ಲಿಷ್ ಏನು ಗೊತ್ತಿಲ್ಲಅಂದರು ಕನಿಷ್ಠ ಪಕ್ಷ ಶೇಕಡವಾರು 75 (ಎಪ್ಪತ್ತೈದು )ಗೊತ್ತು. ಇನ್ನು ಉಳಿದಇಪ್ಪತ್ತ ಐದು ಭಾಗ ನೀವು ಕಲಿಯಬೇಕು. ಅದುವ್ಯಾಕರಣ , ವಾಕ್ಯಾರಚನೆ ಮುಂತಾದವು.
ನಾನು ಅವರ ಹತ್ತಿರ ಪಾಠ ಕಲಿಯದೇ ಹೋಗದಿದ್ದರೆ ನಾನು ನಿಮ್ಮೊಂದಿಗೆ ಇಷ್ಟು ಪ್ರಾಮಾಣಿಕವಾಗಿ ಕುಳಿತು ಹೇಳಲುಆಗುತ್ತಿರಲಿಲ್ಲ. ನನಗೆ ಇವತ್ತಿಗೂ ರೇಣುಕಪ್ಪ ಗೌಡರ ಮಾತು ನೆನಪಾದಾಗ ರೇಣುಕಪ್ಪ ಗೌಡರೆ ಎದುರಿಗೆ ಬಂದು ಹೇಳುತಿದ್ದಂತೆಭಾಸವಾಗುತ್ತದೆ.
ನೀವು ಮೊದಲು ಯೋಚಿಸಿ ನಂತರ ಕಾರ್ಯ ರೂಪಕ್ಕೆ ತನ್ನಿ.
ವಂದನೆ ಹಾಗೂ ಶುಭಾದಿನದೊಂದಿಗೆ ನೆಟ್ ನಾಗ
-.ಟಿ.ನಾಗರಾಜ
ಡಬ್ಲ್ಯು.ಡಬ್ಲ್ಯು .ಡಬ್ಲ್ಯು .ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486




























. ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ