MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಜುಲೈ 10, 2010

ನೀವು ಯಾವುದೊ ಜನ್ಮದಲ್ಲಿ ಯಾರಿಂದಲೋ ಲಕ್ಷಾಂತರ ರೂಪಾಯಿ ಸಾಲ ಮಾಡಿರಬಹುದು. ತೀರಿಸದೆ ಇರಬಹುದು. ಅವರು ನಿಮ್ಮ ಮನೆಯಲ್ಲಿ ಮಗುವಾಗಿ ಹುಟ್ಟಿ ಲಕ್ಷಾಂತರ ರೂಪಾಯಿಗಳು ನಿಮ್ಮಿಂದ ಖರ್ಚು

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗೆಳು. ಎರಡು ಜನ ದಂಪತಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಮದುವೆ ಆಗಿ ಹತ್ತು ವರ್ಷವಾದರೂ ಮಕ್ಕಳಾಗಿರಲಿಲ್ಲ.. ಆದರೆ ಸುಖಿ ಸಂಸಾರ. ಅವರಿವರೂ ಸೂಚಿಸುವ ಪೂಜೆ- ಪುನಸ್ಕಾರಗಳುಹರಕೆ- ತೀರ್ಥಯಾತ್ರೆಗಳು ,ಜತೆ ಜತೆ ಯಲ್ಲಿ ವಿಶೇಷ ವೈದ್ಯರುಗಳ ಸಲಹೆ , ಚಿಕಿತ್ಸೆ ಎಲ್ಲವು ನಡೆದವು. ಯಾವುದರ ಫಲವೋಕೊನೆಗೊಂದು ಅವರಿಗೊಂದು ಗಂಡು ಮಗು ವಾಯಿತು. ದಂಪತಿಗಳಿಗೆ ಸಂತೋಷ ವೋ ಸಂತೋಷ. ದಂಪತಿಗಳು ಹತ್ತುಸಾವಿರ ರೂಪಾಯಿ ಸಾಲ ಮಾಡಿ ಮಗುವಿಗೆ ನಾಮಕರಣ ಸಮಾರಂಭ ಮಾಡಿದರು. ಇದಾದ ಎರಡು ತಿಂಗಳಿಗೆ ಮಗುವಿಗೆ ತೀವ್ರಅನಾರೋಗ್ಯಉಂಟಾಯಿತು. ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಇದರ ಚಿಕೆತ್ಸೆಗೆ ನಮ್ಮಲ್ಲಿ ಅನುಕೂಲಗಳಿಲ್ಲ. ಯಾವುದಾದರು ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿ ಎಂದರು. ದಂಪತಿಗಳ ಕೈಯಲ್ಲಿ ಹಣವಿಲ್ಲದಿದ್ದರಿಂದ ಹತ್ತು ಸಾವಿರರೂಪಾಯಿಗಳ ಸಾಲ ಮಾಡಿ ಹೈಟೆಕ್ ಆಸ್ಪತ್ರೆಗೆ ಮಗುವನ್ನು ಸೇರಿಸಿದರು. ಅಲ್ಲಿ ಟೆಸ್ಟ್ ಗಳಿಗೆ ಹತ್ತು ಸಾವಿರ ರೂಪಾಯಿ ಖರ್ಚ್ಆಯಿತು. ವೈದ್ಯರು ಮಗುವಿನ ಹೃದಯದಲ್ಲಿ ಒಂದು ಸಣ್ಣ ತೂತಿಯಿದೆ. ಶಸ್ತ್ರ ಚಿಕಿತ್ಸೆ ಆಗಬೇಕು. ಒಂದು ಲಕ್ಷ ರೂಪಾಯಿಗಳನ್ನು ಕಟ್ಟಿ ಎಂದರು. ಮತ್ತೆ ಸಾಲ ಮಾಡಿದರು. ಮಗುವಿಗೆ ಶಸ್ತ್ರ ಚಿಕೆತ್ಸೆ ಆಯಿತು. ಆದರೆ ಮಗು ಬದುಕಲಿಲ್ಲ . ಮಗುವಿನ ಶವವನ್ನುಆಸ್ಪತ್ರೆಯಿಂದ ಪಡೆಯಲು ಸಾಲ ಮಾಡಬೇಕಾಯಿತು. ಮೂರು ತಿಂಗಳ ಮಗುವಿನ ಶವದ ಅಂತ್ಯ ಕ್ರಿಯೆ ಮಾಡಿ ಮನೆಗೆ ಬಂದರು. ಮೊದಲು ಮಕ್ಕಳಾಗಲಿಲ್ಲ ವೆಂಬ ಚಿಂತೆಯಿತ್ತು. ಈಗ ಮಗುವಾಗಿತ್ತು. ಆದರೆ ಮಗು ಉಳಿದಿರಲಿಲ್ಲ. ಎರಡು ಲಕ್ಷರೂಪಾಯಿಗಳಷ್ಟು ಸಾಲ ಉಳಿದಿತ್ತು. ಸಾಲ ತೀರಿಸುವುದಕ್ಕಾಗಿ ಗಂಡ ತನ್ನ ನೌಕರಿಯ ಜತೆಗೆ ಸಂಜೆ ಜವಳಿ ಅಂಗಡಿಯಲ್ಲಿ ಲೆಕ್ಕಬರೆಯುವ ಕೆಲಸ ಹಿಡಿದರು. ಒಂದೆರಡು ಸಾವಿರ ರೂಪಾಯಿಗಳು ಹೆಚ್ಚಾದರು ಸಾಲ ತೀರಿಸಲು ಸಾಕಾಗಲಿಲ್ಲ. ಹೆಂಡತಿ ಕೂಡಅದೇ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳ ಬೇಕಾಗಿತ್ತು. ಸಂಪಾದನೆಯೆಲ್ಲ ಸಾಲ ತೀರಿಸಲು ಬಳಕೆಯಾಗುತ್ತಿತ್ತು. ದಂಪತಿಗಳಿಬ್ಬರುಬಿಡುವಿಲ್ಲದೆ ದುಡಿದು ಮೂರು ವರೆ ವರ್ಷಗಳಲ್ಲಿ ಸಾಲ ತೀರಿಸಿದರು. ಉಸ್ಸಪ್ಪಾ ಅಂದುಕೊಳ್ಳುವಷ್ಟರಲ್ಲಿ ಗಂಡನ ಆರೋಗ್ಯಹದಗೆಟ್ಟಿತು . ಆಗ ಯಾರೋ ದೇವರ ಹರಕೆ ಬಾಕಿ ಯಿರಬೇಕು. ಅದನ್ನು ತೀರಿಸಿಬಿಡಿ ಎಂದರು. ಮಗುವಿಗಾಗಿ ಹರಕೆ ಹೊತ್ತದ್ದುನಿಜ . ಹರಕೆ ತೀರಿಸುವುದು ಕರ್ತವ್ಯ ಎಂದುಕೊಂಡು ಮತ್ತೆ ಸಾಲ ಮಾಡಿ ಎಲ್ಲ ಹರಕೆಗಳನ್ನು ತೀರಿಸಿದರು. ಮತ್ತೊಂದು ವರ್ಷದುಡಿದು ಹೊಸ ಸಾಲಗಳನ್ನು ತೀರಿಸಿದರು. ದಂಪತಿಗಳು ಕಂಡವರನ್ನೆಲ್ಲ ನಮಗೆ ಮಕ್ಕಳಿರಲಿಲ್ಲವೆಂಬ ಚಿಂತೆ ಯಿತ್ತು. ಆದರೆಮಗುವು ಆಗಿದ್ದೇಕೆ ? ಮಗು ಅನಾರೋಗ್ಯದಿಂದ ನರಳಿದ್ದೇಕೆ? ಮಗುವನ್ನು ಉಳಿಸಿಕೊಳ್ಳುವುದಕ್ಕಾಗಿ ಲಕ್ಷಾಂತರ ರೂಪಾಯಿ ಸಾಲವಾಗಿದ್ದೇಕೆ ? ಸಾಲವಷ್ಟನ್ನೇ ಉಳಿಸಿ ಮಗುವು ಸತ್ತಿದ್ದೇಕೆ ? ಎಂದು ಪ್ರಶ್ನಿಸುತ್ತಿದ್ದರು. ಯಾರಿಂದಲೂ ಸಮಾಧಾನಕರ ಉತ್ತರಸಿಗುತ್ತಿರಲಿಲ್ಲ. ಒಬ್ಬರು ನೀವು ಯಾವುದೊ ಜನ್ಮದಲ್ಲಿ ಯಾರಿಂದಲೋ ಲಕ್ಷಾಂತರ ರೂಪಾಯಿ ಸಾಲ ಮಾಡಿರಬಹುದು. ತೀರಿಸದೆಇರಬಹುದು. ಅವರು ನಿಮ್ಮ ಮನೆಯಲ್ಲಿ ಮಗುವಾಗಿ ಹುಟ್ಟಿ ಲಕ್ಷಾಂತರ ರೂಪಾಯಿಗಳು ನಿಮ್ಮಿಂದ ಖರ್ಚು ಮಾಡಿಸಿ ತಮ್ಮ ಸಾಲತೀರಿಸಿಕೊಂಡು ಹೋಗಿರಬಹುದು ಎಂದರು. ಒಬ್ಬ ಬುದ್ದಿವಂತರು ಬದುಕಿನಲ್ಲಿ ಬಂದಿದ್ದನ್ನೆಲ್ಲ ನಗುನಗುತ್ತ ಸ್ವೀಕರಿಸಬೇಕು. ಏಕೆಂದರೆ ಇಂತಹ ಪ್ರಶ್ನೆಗಳಿಗೆ ಯಾರೂ ಉತ್ತರ ಕೊಡಲಾರರು ಎಂದರು.


ಪ್ರೀತಿ ಹಾಗೂ ವಿಶ್ವಾಸಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್ .ಕಂ /
+೯೧-9632172486









,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ