MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಜುಲೈ 8, 2010

ನನ್ನ ಮಗ ಸುಳ್ಳು ಹೇಳುತ್ತಿರುವುದು ನನಗೆ ತುಂಬಾ ನೋವನ್ನು ಉಂಟುಮಾಡುತ್ತಿದೆ. ಹೀಗಾಗಲು ತಂದೆಯಾದ ನನ್ನದೇ ತಪ್ಪಿರಬೇಕು. ನನಗೆ ಶಿಕ್ಷೆಯಾಗಬೇಕು. ಆದ್ದರಿಂದ ತೋಟದ ಮನೆಗೆ ಹಿಂತಿರ

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

೧೯೫೦ ರಲ್ಲಿ ಮಹಾತ್ಮಾಜೀಯವರ ಮಗ ಮಣಿಲಾಲ್ ಗಾಂಧೀ ಮತ್ತು ಅವರ ಕುಟುಂಬ ದಕ್ಷಿಣ ಆಪ್ರಿಕಾದ ಡರ್ಬನ್ನಗರದಿಂದ ಹದಿನೆಂಟು ಮೈಲಿಗಳ ದೂರದಲ್ಲಿನ ಕಬ್ಬಿಣ ತೋಟಗಳ ಮಧ್ಯೆಯಿದ್ದ ಮನೆಯೊಂದರಲ್ಲಿ ವಾಸವಾಗಿದ್ದರು. ಅವರಮಗ ಅರುಣ್ ಗಾಂಧಿಗೆ ಆಗ ಹದಿನಾರರ ವಯಸ್ಸು . ಒಮ್ಮೆ ಮಣಿಲಾಲ್ ರು ಡರ್ಬನ್ ನಲ್ಲಿ ಒಂದು ಸಭೆಯಲ್ಲಿಭಾಗವಹಿಸಬೇಕಿತ್ತು. ಅವರು ಮಗ ಅರುಣ್ ರನ್ನು ಕಾರು ಚಾಲಕನಾಗಿ ಬರಲು ಆಹ್ವಾನಿಸಿದರು. ನಗರದಲ್ಲಿ ಸುತ್ತುವಅವಕಾಶವನ್ನು ಅರುಣ್ ಸಂತೋಷದಿಂದ ಒಪ್ಪಿಕೊಂಡರು. ಡರ್ಬನ್ ನಲ್ಲಿ ಸಭೆಯಿದ್ದ ಸ್ಥಳದಲ್ಲಿ ಮಣಿಲಾಲ್ ರು ಇಳಿದುಕೊಂಡರು. ಮಗನಿಗೆ ಕಾರನ್ನು ಸರ್ವೀಸ್ ಮಾಡಿಸಿಕೊಂಡು ಸಂಜೆ ಐದು ಗಂಟೆಗೆ ಅಲ್ಲಿಗೆ ಬರಲು ಹೇಳಿದರು. ಅರುಣ್ ಕಾರನ್ನು ಮೆಕ್ಯಾನಿಕ್ಬಳಿ ಬಿಟ್ಟು ನಗರದಲ್ಲಿ ಆರಾಮವಾಗಿ ಸುತ್ತಾಡಿದರು. ಚಿತ್ರಮಂದಿರವೊಂದರಲ್ಲಿ ಅವರಿಗಿಷ್ಟವಾದ ಚಿತ್ರಪ್ರದರ್ಶನ ವಾಗುತ್ತಿದ್ದುದನ್ನು ಕಂಡು ಸಂತೋಷದಿಂದ ಅದನ್ನು ನೋಡಲು ಹೋದರು. ಅವರಿಗೆ ಚಲನಚಿತ್ರ ನೋಡುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ.ಚಿತ್ರದ ನಂತರ ದಡಬಡಿಸಿ ಹೋಗಿ ಗ್ಯಾರೇಜಿನಿಂದ ಕಾರನ್ನು ತೆಗೆದುಕೊಂಡು ತಂದೆಯವರ ಬಳಿ ಹೋದಾಗ ಸಮಯ ಆರುಗಂಟೆ ಯಾಗಿಬಿಟ್ತಿತ್ತು. ಮಣಿಲಾಲ ರು ತಡವಾದುದಕ್ಕೆ ಕಾರಣ ಕೇಳಿದಾಗ ಅರುಣ್ ರವರು "ಕಾರು ಸಿದ್ಧವಾಗಿರಲಿಲ್ಲ. ಅದರಿಂದತಡವಾಯಿತು " ಎಂದು ಬಿಟ್ಟರು. ಆದರೆ ಅಷ್ಟು ಹೊತ್ತಿಗಾಗಲೇ ಗ್ಯಾರೆಜಿನವರೊಂದಿಗೆ ಮಾತನಾಡಿದ್ದ ತಂದೆಯವರಿಗೆ ಮಗಹೇಳುತ್ತಿರುವುದು ಸುಳ್ಳೆಂದು ಅರ್ಥವಾಯಿತು. ನೀರವಾಗಿ ಮತ್ತೊಮ್ಮೆ ಪ್ರಶ್ನಿಸಿದಾಗ ಅರುಣ್ ಮತ್ತದೇ ಉತ್ತರವಿತ್ತರು. ಅವರು ಮಗನನ್ನು ಕುರಿತು " ನನ್ನ ಮಗ ಸುಳ್ಳು ಹೇಳುತ್ತಿರುವುದು ನನಗೆ ತುಂಬಾ ನೋವನ್ನು ಉಂಟುಮಾಡುತ್ತಿದೆ. ಹೀಗಾಗಲು ತಂದೆಯಾದ ನನ್ನದೇ ತಪ್ಪಿರಬೇಕು. ನನಗೆ ಶಿಕ್ಷೆಯಾಗಬೇಕು. ಆದ್ದರಿಂದ ತೋಟದ ಮನೆಗೆ ಹಿಂತಿರುಗಲು ಕಾರನ್ನುಬಳಸುವುದಿಲ್ಲ. ನಡೆದೇ ಹೋಗುತ್ತೇನೆ. ಅದೇ ನನಗೆ ಶಿಕ್ಷೆ !" ಎಂದು ಹೇಳಿ ಸೂಟು, ಬೂಟು ಧರಿಸಿದ್ದ ಅವರು ನಡೆದುಕೊಂಡೇಹೊರಟರು. ಕತ್ತಲೆಯಲ್ಲಿ, ಕಲ್ಲು -ಮಣ್ಣು ತುಂಬಿದ ದಾರಿಯಲ್ಲಿ ಕಬ್ಬಿನ ತೋಟಗಳ ಮಧ್ಯೆ ಅವರು ಒಬ್ಬರೇ ನಡೆದುಹೋಗುವುದನ್ನು ಅರುಣ್ ಗೆ ಸಹಿಸಲಾಗಲಿಲ್ಲ. ಅವರ ಹಿಂದೆಯೇ ಅವರ ಕಾಲ್ನಡಿಗೆಯ ವೇಗದಲ್ಲೇ ಕಾರನ್ನು ಚಲಾಯಿಸಿಕೊಂಡು ಹಿಂಬಾಲಿಸಿದರು. ಇಡೀ ಪ್ರಯಾಣಕ್ಕೆ ಐದೂವರೆ ಗಂಟೆಗಳ ಕಾಲ ಹಿಡಿಯಿತು. ಐದೂವರೆ ಗಂಟೆಗಳ ಕಾಲವು ಅರುಣ್ಗಾಂಧಿಯವರು ಕಣ್ಣೇರು ಸುರಿಸುತ್ತಲೇ ಕಾರು ಚಲಾಯಿಸಿದರು.

ಎಲ್ಲ ತಂದೆಯರು ಮಾಡುವಂತೆ , ಅವರ ತಂದೆ ಅವರಿಗೆ ಬೈದಿದ್ದರೆ,ಹೊಡೆದಿದ್ದರೆ, ಅವರು ಮುಂದಿನ ಬಾರಿ ಸುಳ್ಳುಹೇಳುವಾಗ ಎಚ್ಚರಿಕೆ ಇಂದಯಿರಬೇಕೆಂಬ ತೀರ್ಮಾನ ಮಾಡುತ್ತಿದ್ದರೇನೋ ! ಆದರೆ ಅವರ ತಪ್ಪಿಗೆ ಅವರ ತಂದೆಯವರೇ ಶಿಕ್ಷೆ ವಿಧಿಸಿಕೊಂಡ ಸತ್ಯಾಗ್ರಹದ ವರ್ತನೆ ಅವರನ್ನು ಜೀವನದಲ್ಲಿ ಮುಂದೆಂದೂ ಸುಳ್ಳು ಹೇಳಬಾರದೆಂದು ತೀರ್ಮಾನಿಸಿದರಂತೆ. ಇಂತಹ ತೀರ್ಮಾನ ತೆಗೆದುಕೊಂಡು ಅದರಂತೆಯೇ ಬದುಕಿದ ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿಯವರು ಈಗ ಅಮೇರಿಕಾದ ಮೆಂಘಿಸ್ ನಗರದಲ್ಲಿ ನೆಲೆಸಿದ್ದಾರೆ. "ಎಂ,ಕೆ, ಗಾಂಧೀ ಇನ್ ಸ್ಟಿಟ್ಯೂಟ್ ಫಾರ್ ನಾನ್ ವಯಲೆನ್ಸ್ "ಎಂಬಸಂಸ್ಥೆಯನ್ನು ಸ್ಥಾಪಿಸಿದ್ದಾರೆ . ಲೇಖನಗಳು,ಉಪನ್ಯಾಸಗಳು,ಅಂತರ ರಾಷ್ಟ್ರೀಯ ಸಮಾವೇಶಗಳ ಮೂಲಕ ಗಾಂಧಿತತ್ವಗಳಪ್ರಚಾರದಲ್ಲಿ ಸಾರ್ಥಕ ಸೇವೆಸಲ್ಲಿಸುತ್ತಿದ್ದಾರೆ.


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧-೯೬೩೨೧೭೨೪೮೬

ನನ್ನ ಜನಾಂಗ ಬಾಂಧವರೇ, ಅಲ್ಲಾ ಆರಾಧನೆ ಮಾಡಿರಿ, ಅವನ ಹೊರತು ಇನ್ಯಾರು ನಿಮ್ಮ ಆರಾಧ್ಯನಿಲ್ಲ. ನೀವು ಅಳತೆಮತ್ತು ತೂಕದಲ್ಲಿ ಕಡಿಮೆ ಕೊಡಬೇಡಿರಿ . ಇಂದು ನಾನು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿ ಕಾಣುತ್ತಿದ್ದೇನೆ. ಆದರೆ ನಾಳೆ ನಿಮ್ಮಮೇಲೆ ಎಲ್ಲರನ್ನು ಆವರಿಸಿಕೊಳ್ಳುವ ಯಾತನೆಯ ದಿನವೊಂದು ಬರಲಿರುವ ವಿಷಯದಲ್ಲಿ ನಾನು ಭಯಪದುತ್ತೇನೆ.
-ಪವಿತ್ರ ಕುರ್ ಆನ್
























ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ