MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಜುಲೈ 3, 2010

ಒಬ್ಬ ಮಾನವನಾಗಿ ಮಾಡಬೇಕಾದ ಕೆಲಸ ನಾನು ಮಾಡಿದ್ದೇನೆ. ಇದಕ್ಕಾಗಿ ನಾನು ಹಣ ಪಡೆಯಲಾರೆ "

ವಿಶ್ವದ ಎಲ್ಲ ಪ್ರಾಮಾಣಿಕ ಧೈರ್ಯವಂತ ದುಡಿಮೆಗಾರರೆಲ್ಲರಿಗೂ ನೆಟ್ ನಾಗ ಬೆಳಗ್ಗಿನ ವಂದನೆಗಳು.

ಒಮ್ಮೆ ಒಬ್ಬ ಬಡ ರೈತ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ. 'ಕಾಪಾಡೀ ಕಾಪಾಡೀ ' ಎಂಬ ಕೂಗು ಕೇಳಿಸಿತು. ತನ್ನೆಲ್ಲ ಕೆಲಸವನ್ನು ಬಿಟ್ಟು ರೈತ ಸದ್ದು ಬಂದಲ್ಲಿಗೆ ಓಡಿದ. ಒಬ್ಬ ಬಾಲಕ ಕೆಸರಿನ ಹೊಂಡವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ. ಹೊರಬರಲುಸಾಧ್ಯವಾಗದೆ ನಿಧಾನವಾಗಿ ಮುಳುಗುತ್ತಿದ್ದ. ರೈತ ಧೈರ್ಯದಿಂದ ಮುನ್ನುಗ್ಗಿ ಬಾಲಕನನ್ನು ಕಾಪಾಡಿದ. ಮೈಕೈಯೆಲ್ಲಾ ಕೆಸರುಮಾಡಿಕೊಂಡಿದ್ದ ಬಾಲಕ ಧನ್ಯವಾದಗಳನ್ನು ತಿಳಿಸಿ, ರೈತ ಯಾರು? ಅವನ ಮನೆ ಎಲ್ಲಿ ? ಮುಂತಾದವನ್ನು ತಿಳಿದುಕೊಂಡುಹೊರಟು ಹೋದ.

ಮರುದಿನ ನಸುಕಿನಲ್ಲೇ ಗುಡಿಸಿಲಿನ ಮುಂದೆ ಒಂದು ಕುದುರೆ- ಸಾರೋಟು ಬಂದಿತು. ಅದರಿಂದ ಬಾಲಕ ಮತ್ತುರಾಜಪೋಷಾಕು ಧರಿಸಿದ್ದ ಬಾಲಕನ ಶ್ರೀಮಂತ ತಂದೆ ಇಳಿದರು . ಅವರು ರೈತನ ಕೈ ಕುಲುಕಿ ' ನಿನ್ನೆ ನೀವು ನನ್ನ ಮಗನ ಪ್ರಾಣಕಾಪಾಡಿದಿರಿ. ನಿಮಗೆ ಧನ್ಯವಾದಗಳು . ನಿಮಗೆಷ್ಟು ಹಣ ಬೇಕು ಕೇಳಿ ' ಎಂದರು.

ಸಂಕೋಚದಿಂದ ಮುದುಡಿ ಹೋಗಿದ್ದ ರೈತ " ಒಬ್ಬ ಮಾನವನಾಗಿ ಮಾಡಬೇಕಾದ ಕೆಲಸ ನಾನು ಮಾಡಿದ್ದೇನೆ. ಇದಕ್ಕಾಗಿನಾನು ಹಣ ಪಡೆಯಲಾರೆ "ಎಂದು ಕೈಮುಗಿದ. ಮಾತುಕತೆಯ ಶಬ್ದ ಕೇಳಿದ ರೈತನ ಮಗ ಗುಡಿಸಿಲಿನಿಂದ ಹೊರಗೆ ಬಂದುನಿಂತ . ಹುಡುಗನನ್ನು ನೋಡಿದ ಶ್ರೀಮಂತ " ಈತ ನಿಮ್ಮ ಮಗನೇ" ಎಂದು ಕೇಳಿದರು. ರೈತ ಹೆಮ್ಮೆಯಿಂದ ಹೌದೆಂದುತಲೆಯಾಡಿಸಿದ. ಆಗ ಶ್ರೀಮಂತ " ನೀವು ಹಣ ಬೇಡವೆನ್ನುತ್ತೀರಿ ಸಂತೋಷ! .ಆದರೆ ನಿಮ್ಮ ಉಪಕಾರ ತೀರಿಸುವ ಅವಕಾಶನನಗೂ ಕೊಡಿ. ನಿಮ್ಮ ಹುಡುಗ ಬುದ್ಧಿವಂತನಂತೆ ಕಾಣುತ್ತಾನೆ. ನೀವು ಅವನನ್ನು ಚೆನ್ನಾಗಿ ಓದಿಸಿ. ಅದಕ್ಕೆ ಬೇಕಾದ ಸಹಾಯನಾನು ಮಾಡುತ್ತೇನೆ" ಎಂದು ಮಾತು ಕೊಟ್ಟು ಮತ್ತೊಮ್ಮೆ ರೈತನಿಗೆ ಧನ್ಯವಾದ ಹೇಳಿ ಹೊರಟು ಹೋದರು. ತಮ್ಮ ಮಾತಿನಂತೆಮುಂದಿನ ವರ್ಷಗಳಲ್ಲಿ ಬಾಲಕನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ಧಾರಿಯನ್ನು ವಹಿಸಿಕೊಂಡು ನರ್ವಹಿಸಿದರು. ಮುಂದೆ ಬಾಲಕ ಲಂಡನ್ನಿನ ಸಂತ ಮೇರಿ ಆಸ್ಪತ್ರೆಯ ವೈದ್ಯಕೀಯ ಕಾಲೇಜಿನಿಂದ ಪಧವೀಧರನಾದ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕಸಂಶೋಧನೆಗಳನ್ನು ಮಾಡಿದ. ಪ್ರಾಣ ಉಳಿಸುವ ಷಧಿಯಾದ "ಪೆನ್ಸಿಲಿನ್ " ಅನ್ನು ಸಂಶೋಧಿಸಿ ವಿಶ್ವದಾದ್ಯಂತಹೆಸರುವಾಸಿಯಾದ. ಆತನೇ ಸರ್ ಅಲೆಕ್ಸಾಂಡರ್ ಪ್ಲೆಮಿಂಗ್ !

ಕೆಲವು ದಶಕಗಳ ನಂತರ ಇವನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಶ್ರೀಮಂತನ ಪುತ್ರ ನ್ಯುಮೋನಿಯಾ ಕಾಯಿಲೆಗೆತುತ್ತಾದ . ಆಗ ಅವನನ್ನು ಮತ್ತೊಮ್ಮೆ ಪ್ರಾಣಾಪಾಯದಿಂದ ಕಾಪಾಡಿದ್ದು ಇದೇ 'ಪೆನ್ಸಿಲಿನ್ ' ಅಷ್ಟು ಹೊತ್ತಿಗೆ ಇಂಗ್ಲೆಂಡ್ ನ ರಾಜಕಾರಣದಲ್ಲಿ ಹೆಸರು ಮಾಡಿದ್ದ . ಶ್ರೀಮಂತನ ಮಗ ಮುಂದೆ ಇಂಗ್ಲೆಂಡಿನ ಪ್ರಧಾನ ಮಂತ್ರಿಯೂ ಆದ. ಆತನೇ ಸರ್ . ವಿನ್ಸ್ ಟನ್ ಚರ್ಚಿಲ್ !.

ಘಟನೆಗಳ ಸಂದೇಶ ಸರಳವಾದರೂ ಮಹತ್ವಪೂರ್ಣ !

ಯಾರಿಗಾದರೂ ಸಹಾಯ ಮಾಡುವ ಅವಕಾಶ ಬಂದರೆ , ಹಿಂದೆಮುಂದೆ ನೋಡದೆ ಸಹಾಯ ಮಾಡಬೇಕು.

ಎಲ್ಲ ಸಹಾಯಗಳಿಗೂ ಬೆಲೆ ಕಟ್ಟಿ ಹಣದಿಂದ ತೀರಿಸಲಾಗುವುದಿಲ್ಲ.

ಸಹಾಯ ಪಡೆದ ವ್ಯಕ್ತಿ ಮುಂದೆ ಎಷ್ಟು ಎತ್ತರಕ್ಕೆರುತ್ತಾನೆ . ಹೇಗೆ ಪ್ರತಿ ಸಹಾಯ ಮಾಡುತ್ತಾನೆ ಎಂಬುದನ್ನು ಹೇಳಲು ಯಾರಿಗೆಸಾಧ್ಯ ?

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ

.ಟಿ.ನಾಗರಾಜ
+೯೧-9632172486

























ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ