MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜುಲೈ 2, 2010

ಅಂಗಡಿ ಸುಟ್ಟು ಹೋಗಿದೆ ! ಮನೆಯೂ ಸುಟ್ಟು ಹೋಗಿದೆ ! ಸಾಮಾನು ಸರಂಜಾಮು ಸುಟ್ಟು ಹೋಗಿದೆ ! ಆದರೆ ಶ್ರದ್ಧೆ, ನಂಬಿಕೆಸುಟ್ಟು ಹೋಗಿಲ್ಲ ! ನಾಳೆಯಿಂದಲೇ ಅಂಗಡಿ ಪ್ರಾರಂಭವಾಗುತ್ತದೆ !

ವಿಶ್ವದ ಪ್ರಾಮಾಣಿಕ ದುಡಿಮೆಗಾರರೆ ನಿಮಗೆ ಶುಭ ದಿನದ ವಂದನೆಗಳೊಂದಿಗೆ .

'ಒಬ್ಬ ಶ್ರದ್ದಾಳು ವ್ಯಾಪಾರಿ ಇದ್ದರು. ದೊಡ್ಡ ಅಂಗಡಿ ಇತ್ತು., ಅದಕ್ಕೆ ಹೊಂದಿಕೊಂಡಂತೆ ಅವರ ಮನೆಯೂ ಇತ್ತು. ಚೆನ್ನಾಗಿವ್ಯಾಪಾರವೂ ನಡೆಯುತ್ತಿತ್ತು. ಒಮ್ಮೆ ಅವರು ವ್ಯವಹಾರ ನಿಮಿತ್ತ ಪರಸ್ಥಳಕ್ಕೆ ಹೋಗಿದ್ದರು. ಒಂದು ದಿನ ರಾತ್ರಿಯ ಸಮಯದಲ್ಲಿ ಅವರ ಅಂಗಡಿ ಮತ್ತು ಮನೆಗೆ ಅಕಸ್ಮಕವಾಗಿ ಬೆಂಕಿ ತಗುಲಿತು. ಕೆಲವೇ ಗಂಟೆಗಳಲ್ಲಿ ಅವರ ಅಂಗಡಿಯಲ್ಲಿದ್ದ ಸಾಮಾನುಸರಂಜಾಮು ಮತ್ತು ಮನೆ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಸ್ತಿ ಬೂದಿಯಾಗಿ ಹೋಗಿತ್ತು. ಸುದ್ದಿ ತಿಳಿದು ಚಾವಿಸಿ ಬಂದಅವರು ಆಗಿಹೋಗಿದ್ದ ಅನಾಹುತವನ್ನು ನೋಡಿ ಗೊಳೋ ಎಂದು ಅಳುತ್ತಾ ಕೂರಲಿಲ್ಲ. ' ದೇವರೇ ನಿನ್ನಿಷ್ಟವೇನಿದೆಯೋ ನನಗೇನುಗೊತ್ತು "ಎಂದು ಹೇಳಿಕೊಳ್ಳುತ್ತ ದೇವರಿಗೊಮ್ಮೆ ನಮಸ್ಕರಿಸಿದರು. ಜಾಗದಲ್ಲಿ ಒಂದು ದೊಡ್ಡ ಫಲಕ ಹಾಕಿಸಿದರು. ಫಲಕದಲ್ಲಿ ಘೋಷಣೆ ಬರೆದಿತ್ತು.

'ಅಂಗಡಿ ಸುಟ್ಟು ಹೋಗಿದೆ ! ಮನೆಯೂ ಸುಟ್ಟು ಹೋಗಿದೆ ! ಸಾಮಾನು ಸರಂಜಾಮು ಸುಟ್ಟು ಹೋಗಿದೆ ! ಆದರೆ ಶ್ರದ್ಧೆ, ನಂಬಿಕೆಸುಟ್ಟು ಹೋಗಿಲ್ಲ ! ನಾಳೆಯಿಂದಲೇ ಅಂಗಡಿ ಪ್ರಾರಂಭವಾಗುತ್ತದೆ ! ಅನಾನುಕೂಲಕ್ಕೆ ಕ್ಷಮೆಯಿರಲಿ !' ತಕ್ಷಣದಿಂದಲೇ ಕಾರ್ಯೋನ್ಮುಖರಾದರು . ಎಲ್ಲವನ್ನು ಚೊಕ್ಕಟಗೊಳಿಸಿ, ಪಕ್ಕದಲ್ಲಿಯೇ ಒಂದು ತಾತ್ಕಾಲಿಕ ಶೆಡ್ ಅನ್ನು ಒಂದೇ ದಿನದಲ್ಲಿನಿರ್ಮಿಸಿದರು. ಶೆಡ್ ನಲ್ಲಿ ಅಂಗಡಿ ಪ್ರಾರಂಭಿಸಿದರು. ಮಾರನೆಯ ದಿನವೇ ವ್ಯಾಪಾರ ನಡೆಯಹತ್ತಿತ್ತು. ಜತೆ ಜತೆಯಲ್ಲಿ ಹೊಸದೊಡ್ಡ ಅಂಗಡಿ ಕಟ್ಟಡ ಕಟ್ಟಲು ಪ್ರಾರಂಭಿಸಿದರು. ಒಂದು ವರ್ಷ ಮುಗಿಯುವುದರೊಳಗೆ ಮೊದಲಿದ್ದ ಅಂಗಡಿಯ ಎರಡರಷ್ಟು ದೊಡ್ಡಅಂಗಡಿ ನಿರ್ಮಾಣವಾಯಿತು . ವ್ಯಾಪಾರ ಹೆಚ್ಚುತ್ತಲೇ ಹೋಯಿತು.'

ಕತೆಯ ಸಂದೇಶ ಏನೆಂದರೆ " ಬದುಕಿನಲ್ಲಿ ತೊಂದರೆಗಳು ಎಲ್ಲರಿಗೂ ಬರುತ್ತವೆ. ಅದನ್ನು ಎದುರಿಸಲು ಮೂರು (೩)ದಾರಿಗಳಿವೆ.
ಮೊದಲನೆಯದು ; ತೊಂದರೆಗೆ ಹೆದರಿ ಓಡಿಹೋಗುವುದು , ಊರು ಬಿಟ್ಟು ಹೋಗುವುದು , ಆತ್ಮಹತ್ಯೆಯ ಬಗ್ಗೆ ಚಿಂತಿಸುವುದು , ಮುಂತಾದವು ಇವು ಮೂರ್ಖತನದ ದಾರಿಗಳು.

ಎರಡನೆಯದು ; ತೊಂದರೆಯನ್ನು ದೂಷಿಸುತ್ತ ಹಣೆಬರಹವನ್ನು ಹಳಿಯುತ್ತ , ಎಲ್ಲರೊಂದಿಗೆ ಜಗಳವಾಡುತ್ತ ಕೂರುವುದು , ಇವುಬುದ್ದಿವಂತಿಕೆಯ ದಾರಿಯಲ್ಲ.

ಮೂರನೆಯದು; ತೊಂದರೆ ಬಂದ ಕಾರಣವನ್ನು ಹುಡುಕಿ, ಅದು ಮತ್ತೆ ಬಾರದಂತೆ ಬಂದೋಬಸ್ತ್ ಮಾಡಿ , ಪರಿಹಾರದ ದಾರಿಗಳನ್ನು ಹುಡುಕಿ ಕಾರ್ಯೋನ್ಮುಖರಾಗುವುದು. ಇದು ಬುದ್ಧಿವಂತರ , ಶ್ರದ್ಧಾಳುಗಳ ದಾರಿ, ಸಾಮಾನ್ಯವಾಗಿ ಇವರು ಮತ್ತೆ ಯಸಸ್ವಿಗಳಾಗುತ್ತಾರೆ.'

ಕೆಲವು ದಶಕಗಳ ಹಿಂದೆ ಥಾಮಸ್ ಆಲ್ವ ಎಡಿಸನ್ ಎಂಬ ಸಂಶೋಧಕ ವಿಜ್ಞಾನಿಯಿದ್ದರು. ವಿದ್ಯುತ್ ದೀಪ, ಗ್ರಾಮೊಪೋನ್ಮುಂತಾದವುಗಳನ್ನು ಸಂಶೋಧಿಸಿದ ಮಹಾಪುರುಷ, ಒಮ್ಮೆ ಅವರ ಸಂಶೋಧನಾ ಕೇಂದ್ರವೂ ಬೆಂಕಿಗೆ ತುತ್ತಾಯಿತು. ಮಾರನೆಯ ದಿನ ಬೆಳಿಗ್ಗೆ ಸುಟ್ಟು ಹೋಗಿದ್ದ ಸಂಶೋಧನಾಲಯದ ಮುಂದೆ ನಿರ್ವಿಕಾರ ಭಾವದಿಂದ ನಿಂತಿದ್ದ ಎಡಿಸನ್ನರು ತಮ್ಮಸಂಗಾತಿಗಳನ್ನುದ್ದೇಶಿಸಿ "ನಮ್ಮ ತಪ್ಪುಗಳೆಲ್ಲ ಸುಟ್ಟು ಬೂದಿಯಾಗಿವೆ, ಮತ್ತೆ ಹೊಸದಾಗಿ ನಮ್ಮ ಕಾರ್ಯವನ್ನು ಉತ್ಸಾಹದಿಂದಪ್ರಾರಂಭಿಸುವ ದಿನ ಬಂದಿದೆ. ಬನ್ನಿ ! ಕೆಲಸಕ್ಕೆ ತೊಡಗೋಣ !" ಎಂದು ನಗುನಗುತ್ತಲೇ ಹೇಳಿ ನಿರ್ಮಾಣ ಕಾರ್ಯ ಆರಂಭಿಸಿದರು.

ಶುಭದಿನದ ಶುಭಾಶಯಗಳೊಂದಿಗೆ.

ನಿಮ್ಮ ಆತ್ಮೀಯ ನೆಟ್ ನಾಗ


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್ .ಕಂ/
+೯೧-9632172486

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ