MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಜುಲೈ 11, 2010

ಅಯ್ಯೋ ಪಾಪ !ದೇವರು ಎಲ್ಲ ಕೊಟ್ಟಿದ್ದಾನೆ , ಆದರೆ ಸಿಹಿ ತಿನ್ನುವ ಸಂತೋಷವನ್ನೇ ಕಿತ್ತುಕೊಂಡಿದ್ದಾನೆ, !

ಈ ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾಗರೇ ನಿಮಿಗಿದೋ ನೆಟ್ ನಾಗ ನ ಬೆಳಗಿನ ವಂದನೆ
ಒಂದು
ಊರಿನಲ್ಲಿ ಒಬ್ಬ ಸ್ವಾಮೀಜಿ ಇದ್ದರು. ಅವರಿಗೆ ಒಬ್ಬ ಭಕ್ತರಿದ್ದರು. ಭಕ್ತರಿಗೆ ಸಕ್ಕರೆ ಖಾಯಿಲೆ ಇತ್ತು. ಸಕ್ಕರೆ ಪ್ರಿಯರಾದಅವರು ಖಿನ್ನತೆಗೊಳಗಾಗಿದ್ದರು , ಸಿಹಿ ತಿನ್ನಬಾರದೆನ್ನುವ ನಿಯಮ , ತಿನ್ನಲೆಬೇಕಾದ ಮಾತ್ರೆಗಳು. ದೈಹಿಕ ವ್ಯಾಯಾಮ ಮುಂತಾದವು ಅವರನ್ನು ಚಿಂತೆಗೀಡು ಮಾಡಿದ್ದವು. ಅವರು ನಗುವುದನ್ನೇ ನಿಲ್ಲಿಸಿದ್ದರು. ಯಾವುದೇ ಮಾಡುವೆ ಸಮಾರಂಭಗಳಿಗೆಹೋಗಿ ಊಟಕೆ ಕುಳಿತಾಗ ಸಿಹಿ ಬಡಿಸಲು ಬಂದರೆ ಅವರು ಸಿಟ್ಟು ಗೊಳ್ಳುತಿದ್ದರು. ನನಗೆ ಸಿಹಿ ಬಡಿಸಬೇಡಿ ಎಂದು ಗಟ್ಟಿಯಾಗಿ ಹೇಳುತ್ತಿದ್ದರು .ಯಾರಾದರು ಪರಿಚಯದವರು ಇದನ್ನು ಗಮನಿಸಿ " ಅಯ್ಯೋ ಪಾಪ !ದೇವರು ಎಲ್ಲ ಕೊಟ್ಟಿದ್ದಾನೆ , ಆದರೆ ಸಿಹಿತಿನ್ನುವ ಸಂತೋಷವನ್ನೇ ಕಿತ್ತುಕೊಂಡಿದ್ದಾನೆ, !"ಎಂದು ಸಹಾನುಭೂತಿ ತೋರಿಸುತ್ತಿದ್ದರು . ಇದನ್ನೆಲ್ಲಾ ಕಂಡು ಜತೆಗಿರುತ್ತಿದ್ದಅವರ ಶ್ರೀಮತಿಯವರಿಗೆ ತುಂಬಾ ಮುಜುಗರ ಉಂಟಾಗುತ್ತಿತ್ತು.ಎಲ್ಲರ ಸಹಾನುಭೂತಿಗೆ ಗುರಿಯಾಗುತ್ತಿದ್ದೇವೆಲ್ಲಎಂದು ಬೇಸರವಾಗುತ್ತಿತ್ತು

ಕೆಲವು ದಿನಗಳ ನಂತರ ದಂಪತಿಗಳಿಗೆ ಸ್ವಾಮೀಜಿ ಯವರನ್ನು ಭೇಟಿಯಾಗುವ ಸಂದರ್ಭ ಒದಗಿತು . ದಂಪತಿಗಳನಗೆಹೀನ ಚಿಂತಾಭರಿತ ಮುಖವನ್ನು ಗಮನಿಸಿದ ಸ್ವಾಮಿಜಿಯವರು ಕಾರಣ ಕೇಳಿದರು. "ಸ್ವಾಮೀಜಿ ಸಕ್ಕರೆ ಖಾಯಿಲೆಬಂದುಬಿಟ್ಟಿದೆ , ಇದೆಕ್ಕೆ ಕಾರಣ " ಎಂದಾಗ . ಸ್ವಾಮಿಜಿಯವರು " ನಿಮಗೆ ಸಕ್ಕರೆ ಖಾಯಿಲೆ ಯಾವಾಗಿನಿಂದ ಇದೆ " ಎಂದರು . ಅವರು ಮೂರು ತಿಂಗಳಿನಿಂದ ಎಂದರು . ಸ್ವಾಮಿಜಿಯವರು ಜೋರಾಗಿ ನಕ್ಕು " ನನಗೆ ಮೂವತ್ತು ವರ್ಷಗಳಿಂದ ಸಕ್ಕರೆ ಖಾಯಿಲೆಇದೆ , ನಾನು ನಗುವುದನ್ನು ನಿಲ್ಲಿಸಲಿಲ್ಲ . ನೀವೇಕೆ ಚಿಂತಿಸುತ್ತೀರಿ . ಎಂದರು . ಆಗ ಅವರ ಪತ್ನಿ "ಕಾಯಿಲೆ , ಚಿಕಿತ್ಸೆ , ಪಥ್ಯ ಮುಂತಾದವುಕ್ಕಿಂತ ಹೆಚ್ಚಾಗಿ ಇವರು ಸಿಹಿ ತಿಂಡಿ ಬೇಡವೆನ್ನುವುದು , ಇತರರು ಸಹಾನುಭೂತಿ ತೋರಿಸುವುದು , ಇದರಿಂದ ಹೆಚ್ಚುಮುಜುಗರವಾಗುತ್ತಿದೆ. ಎಂದರು. ಸ್ವಾಮಿಜಿಯವರು ಇದು ದೊಡ್ಡ ಸಮಸ್ಯೆಯೇನಲ್ಲ. ಇದಕ್ಕೆ ಎರಡು ಸರಳ ಪರಿಹಾರಗಳುಂಟು .

ಮೊದಲನೇ ಪರಿಹಾರ ; ನಿಮ್ಮ ಸಮಸ್ಯೆಯನ್ನು ಎಲ್ಲರೆದುರಿಗೆ ಘೋಷಿಸಿ ಕೊಳ್ಳುವುದನ್ನು ನಿಲ್ಲಿಸಿ , ಸಮಾರಂಭಗಳಲ್ಲಿ ಊಟಕ್ಕೆ ಕುಳಿತಾಗ ಏನು ಬಡಿಸಿದರೂ ಬೇಡವೆನ್ನಬೇಡಿ. ನೀವು ಬೇಡವೆನ್ನುವುದು , ಇತರರು ಅದನ್ನು ಗಮನಿಸುವುದು. ಏಕೆಂದುಕೇಳುವುದು . ನೀವು ಸಿಹಿ ತಿನ್ನಬಾರದೆನ್ನುವ ಕಷ್ಟವನ್ನು ವಿವರಿಸುವುದು . ಅವರು ಸಹಾನುಭೂತಿ ತೋರಿಸುವುದು ಇವೆಲ್ಲವೂತಪ್ಪುತ್ತದೆ.

ಎರಡನೇ ಪರಿಹಾರ; ಬಡಿಸುವವರಿಂದ ಎರಡು ಹಪ್ಪಳ ನೀವೇ ಕೇಳಿ ಬಡಿಸಿಕೊಳ್ಳಿ . ಒಂದು ಹಪ್ಪಳವನ್ನು ತಿನ್ನುವುದಕ್ಕೆ ಬಳಸಿ , ನಂತರ ಎಲೆಯಲ್ಲಿ ಬಡಿಸಿರುವ ನಿಮಗೆ ಬೇಡವಾದ ಎಲ್ಲ ತಿನಿಸುಗಳನ್ನು ಒಂದು ಮೂಲೆಗೆ ತಳ್ಳಿ . ಅದರ ಮೇಲೆ ಹಪ್ಪಳವನ್ನುಮುಚ್ಚಿಡಿ . ಆಗ ನೀವು ಸಿಹಿತಿನಿಸು ತಿನ್ನದಿರುವುದನ್ನು ಯಾರೂ ಗಮನಿಸುವುದಿಲ್ಲ. ನಿಮಗೆ ಸಹಾನುಭೂತಿ ತೋರಿಸಿಮುಜುಗರವನ್ನು ಉಂಟುಮಾಡುವುದಿಲ್ಲ .ಎಂದರು.

ನಿಮಗೆ ಸಕ್ಕರೆ ಖಾಯಿಲೆ (ಡಯಾಬಿಟೀಸ್) ಇದ್ದರೆ ನೀವು ಸೂತ್ರ ಮಾಡಿ. ಯಾಕೆಂದರೆ ದಂಪತಿಗಳು ಈಗ ನಗುನಗುತ್ತಲೇಇದ್ದಾರೆ.

ಶುಭದಿನದ ಶುಭಾಶಯಗಳೊಂದಿಗೆ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
೯೧-9632172486









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ