MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜುಲೈ 23, 2010

ನಮ್ಮ ವೃತ್ತಿಯಲ್ಲಿ ಶ್ರಮವಹಿಸಿ ದುಡಿದರೆ , ಹೊಸ ಹೊಸ ನೈಪುಣ್ಯತೆಗಳನ್ನು ರೂಢಿಸಿಕೊಂಡರೆ , ಆಧುನಿಕ ತಂತ್ರಜ್ಞಾನ ಅಳವಡಿಸಿ ಕೊಳ್ಳುವುದರ ಜತೆಗೆ

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು

ಇದು ನನ್ನ ಜೀವನದಲ್ಲಿ ಹತ್ತಾರು ಬಿರುಗಾಳಿ ಬೀಸಿದಾಗ, ಅಲಸ್ಯ,ಬೇಸರ ,ಬಡತನ ಕಾಡುತ್ತಿದ್ದ ಕಾಲದಲ್ಲಿ ನನ್ನನ್ನು ಕೈಹಿಡಿದು ನಡೆಸಿದ ಕಥೆ . ನಿಮ್ಮ ಜೀವನದಲ್ಲಿ ಇದು ಅದರಲ್ಲೂ ಒಬ್ಬ ಎಂಟರ್ ಪ್ರಿನರ್ (ಸಹಾಸಗಾರ- ಉದ್ದಿಮೆ ಗಾರ )ಎನ್ನಿಸಿಕೊಳ್ಳಲು ಹೇಗೆ ಕಷ್ಟಪಡಬೇಕು. ಏನೆಲ್ಲಾ ಕಷ್ಟಗಳು ಬಂದು ನಮ್ಮನ್ನು ಅಲುಗಾಡಿಸುತ್ತವೆ, ಎಂಬುದನ್ನು ಅನುಭವಿಸಿ ನೋಡಬೇಕಾದರೆ ನಿಮ್ಮ ಜೀವನದಲ್ಲಿ ಅವಕಾಶಗಳ ಜತೆಗೆ ಮುನ್ನುಗ್ಗಬೇಕು. ಆದರೆ ನನ್ನ ಪ್ರಾರಂಭದ ದಿನಗಳಲ್ಲಿ ನನ್ನಲ್ಲಿ ಅವಕಾಶಗಳು ಇರಲಿಲ್ಲ. ಮಾರ್ಗದರ್ಶಕರು ಇರಲಿಲ್ಲ. ಕೈಯಲ್ಲಿ ಹಣ ಇರಲಿಲ್ಲ. ಕೆಲಸವೂ ಸರಿಯಾಗಿ ಗೊತ್ತಿರಲಿಲ್ಲ. ಆದರೂ ನನಗೆ ನಾನು ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎಂದು ಅನಿಸಿತು. ಹಲವಾರು ವರ್ಷಗಳ ನನ್ನ ಬಿಡುವಿಲ್ಲದ ಪ್ರಯತ್ನವೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಮೊಟ್ಟ ಮೊದಲ ಕನ್ನಡದ ವ್ಯಕ್ತಿ ವಿಕಾಸನ ಹಾಗೂ ವಿದ್ಯಾರ್ಥಿಗಾಗಿ ವಿಶೇಷ ಲೇಖನಗಳು (ನೆಟ್ ನಾಗ ) . ಇದು ಜೀವನದಲ್ಲಿ ಯಸಸ್ಸನ್ನು ಸಾಧಿಸುತ್ತೆನೆನ್ನುವವರಿಗೆ ತುಂಬಾ ಉಪಯುಕ್ತ. ಆದರೆ ಅದನ್ನು ಅಳವಡಿಸಿಕೊಳ್ಳುವುದು ನಿಮ್ಮ ಮುಂದೆ ಇದೆ.


ಬಹಳ ಹಿಂದೆ ಮಕ್ಕಾಎಂಬ ಮರ ಕಡಿಯುವವನು ಕಾಡಿನಂಚಿನ ಗುಡಿಸಿಲಲ್ಲಿ ವಾಸಿಸುತ್ತಿದ್ದ. ಕಷ್ಟಪಟ್ಟು ದುಡಿಯುತ್ತಿದ್ದರೂ, ಎರಡು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತು. ಏಕೆಂದರೆ ಕಾಡಿನಂಚಿನಲ್ಲಿ ಹೆಚ್ಚು ಮರಗಳಿರಲಿಲ್ಲ. ಒಂದು ಸಂಜೆ ಒಬ್ಬ ಸಾಧು ಬಂದರು . ಮಕ್ಕಾ ಅವರಿಗೆ ಊಟವಿಟ್ಟು ಗುಡಿಸಲಲ್ಲೇ ಇರಿಸಿಕೊಂಡು ಸತ್ಕರಿಸಿದ.

ಬೆಳಗ್ಗೆ ಸಾಧು ಹೊರಡುವ ಮುಂಚೆ ಅವನ ಮುರುಕಲು ಗುಡಿಸಲು , ಹರಕು ಬಟ್ಟೆಯ ಮನೆಯವರನ್ನು ನೋಡಿ "ನೀನು ಇನ್ನೂ ಮುಂದಕ್ಕೆ ಹೋದರೆ ಒಳ್ಳೆಯದಾಗುತ್ತೆ "ಎಂದು ಆಶೀವ್ರದಿಸಿ ಹೊರಟು ಹೋದರು. ಮಕ್ಕಾಗೆ ಅವರ ಮಾತು ಅರ್ಥವಾಗಲಿಲ್ಲ. ಅವನ ಹೆಂಡತಿ "ಬಹುಶ: ನೀವು
ಕಾಡಿನೊಳಕ್ಕೆ ಇನ್ನೂ ಮುಂದೆ ಹೋಗಿ ದುಡಿದರೆ ಒಳ್ಳೆಯದಾಗಬಹುದು. ಎಂಬರ್ಥವಿರಬಹುದು "ಎಂದಳು. ಆತ ಧೈರ್ಯದಿಂದ ಕೊಡಲಿ ಹಿಡಿದು ಒಂದೆರಡು ಮೈಲಿ ಕಾಡಿನೊಳಕ್ಕೆ ಹೋದ. ಅಲ್ಲಿ ಒಳ್ಳೆ ಜಾತಿಯ ಮರಗಳಿದ್ದವು . ಅದರ ಕೊಂಬೆಗಳನ್ನು ಕಡಿದು ಊರಿಗೆ ತಂದು ಮಾರಿದ.

ಕೈತುಂಬಾ ಹಣ ಸಿಕ್ಕಿತು. ಮನೆಗೆ ಬೇಕಾದ ದವಸ ಧಾನ್ಯಗಳನ್ನು ತಂದ, ಒಂದು ವಾರ ಕುಟುಂಬದವರಿಗೆಲ್ಲ ಹೊಟ್ಟೆ ತುಂಬಾ ಊಟ , ಅವನ ಹೆಂಡತಿ "ಸಾಧುಗಳ ಮಾತನ್ನು ಪಾಲಿಸಿದ್ದರಿಂದ ಒಂದು ವಾರ ಹೊಟ್ಟೆ ತುಂಬಾ ಉಂಡೆವು "ಎಂದಳು .ಮಕ್ಕಾ ಎದ್ದು ಒಂದಿಬ್ಬರು ಕೂಲಿಯವರನ್ನು , ಒಂದು ಬಾಡಿಗೆ ಎತ್ತಿನ ಗಾಡಿಯನ್ನು ತೆಗೆದುಕೊಂಡು ಮತ್ತೆ ಕಾಡಿನೊಳಕ್ಕೆ ಹೋದ. ಕೆಲಸಗಾರರು ಜೋತೆಗಿದ್ದರಿಂದ ಹೆಚ್ಚು ಮರ ಕಡಿದು ಗಾಡಿಯನು ತುಂಬಿಸಿಕೊಂಡು ಊರಿಗೆ ಬಂದು ಮಾರಿದ. ಅವನ ನಿರೀಕ್ಷೆಗೆ ಮೀರಿದಷ್ಟು ಹಣ ಸಿಕ್ಕಿತು. ತನ್ನ ಮುರುಕಲು ಗುಡಿಸಿಲನ್ನುರಿಪೇರಿ ಮಾಡಿಕೊಂಡ . ಮನೆಯವರಿಗೆಲ್ಲ ಒಳ್ಳೆ ಬಟ್ಟೆಗಳನ್ನು ತೆಗೆದುಕೊಂಡ . ಮತ್ತೆ ಕಾಡಿಗೆ ಹೊರಟಾಗ ನಾಲ್ಕು ಬಾಡಿಗೆ ಗಾಡಿಗಳನ್ನು , ಏಳೆಂಟು ಜನ ಕೆಲಸಗಾರರನ್ನು ಕರೆದೊಯ್ದು ಹೆಚ್ಚು ಮರಗಳನ್ನು ಪೇಟೆಗೆ ತಂದು ಮಾರಿದ. ಸಾಕಷ್ಟು ಹಣ ಸೇರಿತು. ಊರವರೆಲ್ಲ ಮಕ್ಕಾನನ್ನು "ಮಕ್ಕಪ್ಪ "ಎಂದು ಕರೆಯಲು ಪ್ರಾರಂಭಿಸಿದರು . ಮಕ್ಕಪ್ಪ ಸಾಧುವಿನ ಮಾತು ಮರೆಯಲಿಲ್ಲ.

ಕಾಡಿನಲ್ಲಿ ಇನ್ನೂ ಮುಂದಕೆ ಹೋದ, ವ್ಯವಹಾರ ಅಭಿವೃದ್ಧಿ ಯಾಯಿತು. ಮನೆ ದೊಡ್ಡದಾಯಿತು. ಬಾಡಿಗೆ ಎತ್ತಿನ ಗಾಡಿಯ ಬದಲು ಸ್ವಂತ ಲಾರಿಗಳನ್ನು ಕೊಂಡುಕೊಂಡ. " ಈಗ ಊರವರು ಮಕ್ಕಪ್ಪನನ್ನು "ಮಕ್ಕಪ್ಪ ನಾಯಕ "ಎಂದು ಕರೆಯಹತ್ತಿದರು. ಸಾಧುವಿನ ಮಾತನ್ನು ಮರೆಯದೆ ಮಕ್ಕಪ್ಪ ನಾಯಕರು ಕಾಡಿನಲ್ಲಿ ಇನ್ನೂ ಮುಂದೆ ಹೋದ. ಅವರಿಗೆ ಒಂದು ದೊಡ್ಡ ಶ್ರೀಗಂಧದ ಮರಗಳಿದ್ದ ತಾಣವೇ ಸಿಕ್ಕಿತು. ವ್ಯಾಪಾರ ಇನ್ನೂ ಬೆಳೆಯಿತು. ಮಕ್ಕಪ್ಪ ನಾಯಾ ಸಾಹುಕಾರ್ ಮಕ್ಕಪ್ಪ ನಾಯಕರಾದರು. ಅವರು ಕಾಡಿನಲ್ಲಿ ಇನ್ನೂ ಮುಂದಕ್ಕೆ ಹೋದರು. ಬೆಳ್ಳಿಯ ನಿಕ್ಷೇಪವೇ ಸಿಕ್ಕಿತು . ನಂತರ ಚಿನ್ನದ ಗಣಿ ಸಿಕ್ಕಿತು . ......................

ಆದರೆ "ಮರ ಕದಿಯುತ್ತಿದ್ದ ವ್ಯಕ್ತಿ ಯಾರು ? ಕಾಡು ಯಾವುದು ? ಎಂದು ಪ್ರಶ್ನಿಸುವುದಾದರೆ ಉತ್ತರ ಸರಳ !. ಆ ವ್ಯಕ್ತಿ ನಾವೇ ! ಆ ಕಾಡು ನಮ್ಮ ವೃತ್ತಿ ! ನಮ್ಮ ವೃತ್ತಿಯಲ್ಲೂ ಶ್ರಮವಹಿಸಿ ದುಡಿದರೆ, ಹೊಸ ಹೊಸ ನೈಪುಣ್ಯತೆಗಳನ್ನು ರೂಢಿಸಿಕೊಂಡರೆ , ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ , ಜ್ಞಾನ ಹೆಚ್ಚಿಸಿಕೊಂಡರೆ ನಾವು ಇನ್ನೂ ಮುಂದಕ್ಕೆ ಹೋಗಬಹುದು !. ಒಳ್ಳೆಯದಾಗಬಹುದು !. ನಮಗೂ ಗಂಧದ ಗುಡಿ ಸಿಗಬಹುದು. ಚಿನ್ನದ ಗಣಿ ಸಿಗಬಹುದು.

ಕೂತು ಕೂತು ,ಕೊರಗಿ ಕೊರಗಿ, ನರಳಿ ನರಳಿ ಸಾಯುವುದಕ್ಕಿಂತಲೂ ದುಡಿದು ದುಡಿದು ನಗುತ್ತಾ ನಗುತ್ತಾ ಸಂತೋಷದಿಂದ ಜೀವಿಸುವುದು ಮೇಲಲ್ಲವೇ ?

ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ