MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜುಲೈ 2, 2010

ಇಂದು ನಾವು ಯಾರನ್ನೂ ಬೇಡಬಾರದು! ಸಾಲ ಕೇಳಬಾರದು ! ಕದಿಯಬಾರದು! ಇಪ್ಪತ್ತು ರೂಪಾಯಿ ಹೇಗೆ ಬರುತ್ತದೋ ನೋಡೋಣ! ಹಾಗೇನಾದರೂ ಇಪ್ಪತ್ತು ರೂಪಾಯಿ ಸಿಕ್ಕರೇ ,ನಾನು ದೇವರನ್ನು ನಂಬಲು ಪ್ರ

ವಿಶ್ವದ ಪ್ರಾಮಾಣಿಕ ದುಡಿಮೆಗಾರರೆ ನಿಮಗೆ ಬೆಳಗ್ಗಿನ ಶುಭ ಮುಂಜಾನೆಯ ವಂದನೆಗಳು.

ಸುಮಾರು ಮೂವತ್ತು ವರ್ಷಗಳ ಹಿಂದಿನ ನೈಜ ಘಟನೆ. ಮೈಸೂರಿನಲ್ಲಿ ಇಬ್ಬರು ಗೆಳೆಯರಿದ್ದರು. ಒಂದು ದಿನ ಇಬ್ಬರ ಜೇಬೂಖಾಲಿಯಿತ್ತು. ಹೋಟೆಲ್ ನಲ್ಲಿ ಊಟ ಮಾಡಲು ಅವರಿಗೆ ಇಪ್ಪತ್ತು ರೂಪಾಯಿಗಳ ಅವಶ್ಯಕತೆಯಿತ್ತು. ಒಬ್ಬಾತ ' ಹುಟ್ಟಿಸಿದದೇವರು ಹುಲ್ಲು ಮೇಯಿಸುವುದಿಲ್ಲ, ನಮಗೆ ಊಟಕ್ಕೆ ಹಣ ಸಿಕ್ಕೆಸಿಗುತ್ತದೆ'ಎಂದ. ಮತ್ತೊಬ್ಬಾತ 'ಇಂದು ನಾವು ಯಾರನ್ನೂಬೇಡಬಾರದು! ಸಾಲ ಕೇಳಬಾರದು ! ಕದಿಯಬಾರದು! ಇಪ್ಪತ್ತು ರೂಪಾಯಿ ಹೇಗೆ ಬರುತ್ತದೋ ನೋಡೋಣ! ಹಾಗೇನಾದರೂ ಇಪ್ಪತ್ತು ರೂಪಾಯಿ ಸಿಕ್ಕರೇ ,ನಾನು ದೇವರನ್ನು ನಂಬಲು ಪ್ರಾರಂಭಿಸುತ್ತೇನೆ' ಎಂದು ಹೇಳಿದ, ಯಾರಾದರು ಗೆಳೆಯರು ಒಂದುಊಟ ಕೊಡಿಸಬಹುದೆಂಬ ನಿರೀಕ್ಷೆಯಿಂದ ಹೋಟೆಲ್ ಮುಂದೆಯೇ ಇದ್ದ ಪಾರ್ಕಿನಲ್ಲಿ ಕುಳಿತರು. ಮಧ್ಯಾಹ್ನವಾಯಿತು . ಯಾರೂಬರಲಿಲ್ಲ. ಹೊಟ್ಟೆ ಹಸಿವು ,ಬಳಲಿಕೆ ,ಅಲ್ಲಿಗೆ ಮುದ್ದಾದ ಪುಟ್ಟ ಮಗುವೊಂದು ಅಳುತ್ತ ನಡೆದು ಬಂದಿತು. ಮಗುವನ್ನು ಸಮಾಧಾನಮಾಡುವ ಶಕ್ತಿಯೂ ಅವರಿಗಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಮಹಿಳೆಯರ ಗುಂಪೊಂದು ಬಂತು. ಅದರಲ್ಲಿ ಒಬ್ಬಾಕೆ ಮಗುವನ್ನುಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಮಗುವಿನ ಅಳು ನಿಲ್ಲಲಿಲ್ಲ. ಮತ್ತೊಬಾಕೆ 'ಮಗು ಹಸಿದಿರಬೇಕು. ತಿಂಡಿ ಕೊಟ್ಟು ನೋಡೋಣ ' ಎಂದರು . ಮಹಿಳೆಯರು ಮಗುವನ್ನು ಎತ್ತಿಕೊಂಡು ಅಲ್ಲಿದ್ದ ಹೋಟೆಲ್ ಗೆ ಹೋದರು.

ಇವರು ಇಲ್ಲೇ ಕುಳಿತಿದ್ದಾಗ ತಮಟೆಯ ಶಬ್ದ ಕೇಳಿಸಿತು. ತಮಟೆ ಬಾರಿಸುವವನ ಜತೆಯಲ್ಲಿ ಗೃಹಸ್ಥರೊಬ್ಬರಿದ್ದರು . ತಮಟೆಯವನು ' ಇವರ ಮಗು ಕಳೆದುಹೋಗಿದೆ. ಹುಡುಕಿಕೊಟ್ಟವರಿಗೆ ನೂರು ರೂಪಾಯಿ ಬಹುಮಾನ' ಎಂದು ಘೋಷಿಸುತ್ತಿದ್ದ. ಗೆಳೆಯರು ಗೃಹಸ್ಥರನ್ನು ವಿಷಯವೇನೆಂದು ಕೇಳಿದರು. ಅವರು ತಮ್ಮ ಮಗು ಬೆಳಗಿನಿಂದ ಕಾಣೆಯಾಗಿದೆ. ಡಂಗೂರಸಾರುತ್ತಿದ್ದೇವೆ . ಎಂದು ಮಗುವಿನ ಫೋಟೋವನ್ನು ತೋರಿಸಿದರು. ಫೋಟೋ ಮಹಿಳೆಯರ ಗುಂಪು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಮಗುವಿನದ್ದೆ ಆಗಿತ್ತು. ತಕ್ಷಣ ಇವರು ಗೃಹಸ್ಥರನ್ನು ' ಮಗು ತೋರಿಸಿದರೆ ನಮಗೆ ಇಪ್ಪತ್ತು ರೂಪಾಯಿ ಕೊಡುತ್ತೀರಾ ?' ಎಂದು ಕೇಳಿದರು. ಅವರು ' ನೂರು ರೂಪಾಯಿ ಬಹುಮಾನ ಘೋಷಿಸುತ್ತಿರುವುದು ನಿಮಗೆ ಕೇಳಲಿಲ್ಲವೇ ? ಬೇಗಮಗು ತೋರಿಸಿ ' ಎಂದರು. ಇವರು ಗೃಹಸ್ಥರೊಂದಿಗೆ ಹೋಟೆಲ್ ಗೆ ಹೋದಾಗ , ಅಲ್ಲಿ ಮಹಿಳೆಯರ ಗುಂಪಿನಲ್ಲಿ ಮಗು ಆಡುತ್ತಾಕುಳಿತಿತ್ತು. ಮಗುವನ್ನು ಕಂಡ ಗೃಹಸ್ಥರ ಸಂತೋಷಕ್ಕೆ ಮೇರೆಯೇ ಇರಲಿಲ್ಲ. ಓಡಿಹೋಗಿ ಮಗುವನ್ನೆತ್ತಿಕೊಂಡರು. ಮಗು ಕೂಡಅಪ್ಪಾ ! ಎಂದು ಸಂತೋಷದಿಂದ ಕೂಗಹತ್ತಿತು. ಗೃಹಸ್ಥರು ಮಹಿಳೆಯರಿಗೆ ಧನ್ಯವಾದ ಹೇಳಿದರು. ಯುವಕರಿಗೆ ಇಪ್ಪತ್ತುರೂಪಾಯಿಗಳನ್ನು ಕೊಟ್ಟರು. ಮಗುವನ್ನು ಕರೆದುಕೊಂಡು ಹೋದರು . ನಂತರ ಕೆಲವೇ ನಿಮಿಷಗಳಲ್ಲಿ ಯುವಕರಿಬ್ಬರೂ ಗತ್ತಿನಿಂದಅದೇ ಹೋಟೆಲ್ ನಲ್ಲಿ ಹೊಟ್ಟೆ ತುಂಬಾ ಉಂಡರು . ಹೊರಬಂದ ನಂತರ ಒಬ್ಬಾತ ' ನಾವೀಗ ಕದಿಯಲಿಲ್ಲ. ಭಿಕ್ಷೆ ಬೇಡಲಿಲ್ಲ. ಸಾಲವನ್ನು ಮಾಡಲಿಲ್ಲ . ಆದರೆ ನಾವಿದ್ದ ಕಡೆಗೆ ದೇವರು ಇಪ್ಪತ್ತು ರೂಪಾಯಿಯನ್ನು ಕಳುಹಿಸಿಕೊಟ್ಟ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಿಲ್ಲ . 'ಎಂದ . ಮತ್ತೊಬ್ಬಾತ ಮೌನವಾಗಿದ್ದ.

ಮತ್ತೊಂದು ವಿಚಿತ್ರವೇನೆಂದರೆ 'ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ' ಎನ್ನುವ ಮಾತು ನಿಜವಾಗಿಸಿಕೊಂಡ ಇಬ್ಬರಲ್ಲಿ ವಿಜಯಕರ್ನಾಟಕದ "ಕ್ಷಣ ಹೋತು, ಅಣೆ ಮುತ್ತು " ಅಂಕಣವನ್ನು ಬರೆಯುವ ಎಸ್, ಷಡಕ್ಷರಿ ಒಬ್ಬರಾಗಿದ್ದರು.

ಶುಭದಿನದ ಶುಭ ವಂದನೆಗಳೊಂದಿಗೆ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧-9632172486


























ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ