MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜುಲೈ 5, 2010

ಕೆರೋಲ್ ಗಾರ್ಡ್ ಎಂಬ ಐವತ್ತೆರಡು ವರ್ಷ ವಯಸ್ಸಿನ ಮಹಿಳೆ ಕೇವಲ ಒಂದು ನಾಯಿ ಮರಿ ಯಿಂದ ಜೆಲ್ದಾ ವಿಸ್ ಡಮ್ ಎಂಬ ಕಂಪನಿ ಕಟ್ಟಿದ ನೈಜ ಕಥೆ !

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.

ಕೆರೋಲ್ ಗಾರ್ಡ್ನರ್ ಎಂಬ ಐವತ್ತೆರಡು ವರ್ಷ ವಯಸ್ಸಿನ ಮಹಿಳೆ ತನ್ನ ಜೀವನದ ಸಂಕಷ್ಟಕರ ಸನ್ನಿವೇಶದಲ್ಲಿದ್ದರು. ಆಕೆಯ ವಿವಾಹವು ವಿಚ್ಚೇದನ ವಾಗುವುದರಲ್ಲಿತ್ತು. ತುಂಬಾ ಸಾಲವಾಗಿತ್ತು. . ಕಾಯಂ ಉದ್ಯೋಗವಾಗಲೀ, ಆದಾಯವಾಗಲೀ ಇರಲಿಲ್ಲ. ದುಬ್ರರ ಪರಿಸ್ಥಿತಿಯಿಂದ ಖಿನ್ನತೆಗೊಳಗಾಗಿದ್ದ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಆಕೆ ಒಂದು ನಾಯಿಮರಿಯನ್ನು ಕೊಂಡುತಂದರು. ಅದಕ್ಕೆ 'ಜೆಲ್ದಾ' ಎಂದು ಹೆಸರಿಟ್ಟರು. ಅದರೊಂದಿಗೆ ಆಡುತ್ತಾ ತನ್ನ ನೋವನ್ನು ಮರೆಯಲೆತ್ನಿಸಿದರು. ಆದರೆ ಹಣಕಾಸಿನ ಒತ್ತಡ ಆಕೆಯನ್ನು ಕಿತ್ತು ತಿನ್ನುತ್ತಿತ್ತು. ಈಕೆಯ ಪರಿಸ್ಥಿತಿಯ ಅರಿವಿದ್ದ ಗೆಳತಿಯೊಬ್ಬರು 'ಕ್ರಿಸ್ಮಸ್ ಶುಭಾಶಯಪತ್ರಗಳ ವಿನ್ಯಾಸ ಸ್ಪರ್ಧೆ ಯೊಂದಿದೆ. ಗೆದ್ದವರ ನಾಯಿಗೆ ಒಂದು ವರ್ಷ ಕಾಲ ಉಚಿತ ಆಹಾರ ಬಹುಮಾನ . ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡಿರುವ ನೀನು ಶುಭಾಶಯಪತ್ರ ವಿನ್ಯಾಸಗೊಳಿಸಿ ಕಳುಹಿಸು. ಬಹುಮಾನ ಗೆಲ್ಲಬಹುದು'.ಎಂದು ಸೂಚಿಸಿದರು. ಕೆರೋಲ್ ಗೆ ತಕ್ಷಣ ಒಂದು ಆಲೋಚನೆ ಹೊಳೆಯಿತು. ತನ್ನ ಹಳೆಯ ಬಟ್ಟೆಗಳನ್ನು ಕತ್ತರಿಸಿ ಉಡುಪು ತಯಾರಿಸಿ ನಾಯಿಗೆ ತೊಡಿಸಿದರು. ವಿಚಿತ್ರ ಟೋಪಿ ಮತ್ತು ಅಗಲ ಕನ್ನಡಕ ನಾಯಿಗೆ ಹಾಕಿದರು. ತನ್ನದೇ ಕ್ಯಾಮರಾದಲ್ಲಿ ನಾಯಿಯ ಫೋಟೋ ತೆಗೆದರು. ತಮಾಷೆಯ ಒಂದು ಸಾಲಿನ ಶುಭಾಶಯ ಸಂದೇಶವನ್ನು ಬರೆದರು. ಆ ಫೋಟೋವನ್ನೂ,ಸಂದೇಶವನ್ನೂ ಸ್ಪರ್ಧೆಗೆ ಕಳುಹಿಸಿದರು. ಆಶ್ಚರ್ಯವೆಂದರೆ ಆಕೆಯ ಶುಭಾಶಯ ಪತ್ರಕ್ಕೆ ಮೊದಲನೆಯ ಬಹುಮಾನವೇ ಬಂದಿತು. ಮುಂದಿನ ಒಂದು ವರ್ಷ ಕಾಲ ನಾಯಿಗೆ ಉಚಿತ ಆಹಾರ ದೊರೆಯುವಂತಾಯಿತು. ಈ ಯಸಸ್ಸಿನಿಂದ ಉತ್ತೇಜಿತರಾದ ಆಕೆ ನಾಯಿಯನ್ನು ಬೇರೆಬೇರೆ ರೀತಿಯಲ್ಲಿ ಅಲಂಕರಿಸಿ , ಬೇರೆಬೇರೆ ಸ್ಥಳಗಳಲ್ಲಿ ಅದನ್ನು ನಿಲ್ಲಿಸಿ, ಕೂರಿಸಿ, ಕುಣಿಸಿ ನೂರಾರು ಚಿತ್ರಗಳನ್ನು ತೆಗೆದರು. ಅದಕ್ಕೆ ಹೊಂದುವ ತಮಾಷೆ ಸಂದೇಶಗಳನ್ನು ಬರೆದರು. ಪರಿಚಯವಿದ್ದ ಮುದ್ರಣಾಲಯದಲ್ಲಿ ಶುಭಾಶಯ ಪತ್ರಗಳನ್ನು ಮುದ್ರಿಸಿ ತಾವೇ ಮಾರಾಟ ಮಾಡಹತ್ತಿದರು. ಹೊಸ ಮಾದರಿಯ ಶುಭಾಶಯಪತ್ರಗಳು ಜನಪ್ರಿಯವಾದವು. ವ್ಯಾಪಾರ ಬೆಳೆಯಿತು. ಆಕೆಯ ಬಡತನ ಕಳೆಯಿತು. ಒಂದೆರಡು ವರ್ಷಗಳಲ್ಲಿ 'ಹಾಲ್ ಮಾರ್ಕ್ ' ನಂತಹ ಹೆಸರಾಂತ ಶುಭಾಶಯಪತ್ರಗಳ ಕಂಪನಿ ಆಕೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಆಕೆ ' ಜೆಲ್ದಾ ವಿಸ್ ಡಮ್ ' ಎಂಬ ಕಂಪನಿಯನ್ನೇ ಪ್ರಾರಂಭಿಸಿದರು. ಹಲವಾರು ಕಲಾವಿದರನ್ನು ಬರಹಗಾರರನ್ನು ನೇಮಿಸಿಕೊಂಡರು. ಉದ್ಯಮವನ್ನು ದೊಡ್ಡದಾಗಿ ಬೆಳೆಸಿದರು. ಈಗ ಆಕೆ ಮತ್ತು ಆಕೆಯ ಮುದ್ದಿನ ನಾಯಿ ಜೆಲ್ದಾ ವಿಶ್ವ ವಿಖ್ಯಾತವಾಗಿವೆ.

ಧೈರ್ಯ, ಬುದ್ದಿವಂತಿಕೆ, ಆತ್ಮವಿಶ್ವಾಸ , ಹಾಸ್ಯ ಪ್ರಜ್ಞೆ ಮತ್ತು ಅಂದವಿಲ್ಲದ ನಾಯಿಮರಿ ಈ ಐದರಿಂದ ಕೆರೋಲ್ ಬದುಕಿನಲ್ಲಿ ಮೇಲೇರಿದ್ದು ಎಲ್ಲರಿಗೂ ಮಾದರಿಯಲ್ಲವೇ ?.

ಉಚಿತ ಕುರಾನ್ ಬೇಕೆ.?
(ಕನ್ನಡ, ಇಂಗ್ಲೀಷ್,ತೆಲಗು,ತಮಿಳ್,ಮಲೆಯಾಳಂ ಭಾಷೆಗಳಲ್ಲಿ.}
ಈ ಕೆಳಗಿನ ವಿಳಾಸಕ್ಕೆ ಪತ್ರ ಬರೆಯಿರಿ ಅಥವಾ ಫೋನ್ ಮಾಡಿ
ಸಲಾಂ ಸೆಂಟರ್
ನಂಬರ್ ೬೫/೧,ಮೊದಲನೇ ಮುಖ್ಯ ರಸ್ತೆ,
ಎಸ್,ಆರ್.ಕೆ ಗಾರ್ಡನ್
ಜಯನಗರ ಈಸ್ಟ್ ,
ಬೆಂಗಳೂರು -೫೬೦ ೦೪೧
ದೂರವಾಣಿ ೯೯೪೫೧ ೮೮೪೮೮
೦೮೦-೨೬೬೫೫೭೮೬
೦೮೦ -೨೬೬೩೯೦೦೭
ಇ -ಮೇಲ್ ವಿಳಾಸ ; ಪೀಶ್ (ಪಿ ,ಇ ,ಎ ,ಸಿ ,ಇ)@ಸಲಾಂ ಸೆಂಟರ್ . ಕಂ
(ಶಾಲಾ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ )

ಪ್ರೀತಿ ಹಾಗೂ ವಿಶ್ವಾಸ ಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ.

ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-೯೬೩೨೧೭೨೪೮೬

















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ