MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜುಲೈ 12, 2010

ಅವರು ಹೊಸಬರು . ಭಾಷೆ ಗೊತ್ತಿಲ್ಲದವರು . ನಮ್ಮ ದೇಶಕ್ಕೆ ಬಂದಿರುವ ಅತಿಥಿ . ! ಎಲ್ಲರು ಅವರನ್ನು ಗದರಿಸಿದರೆ , ಅವರು ತಮ್ಮ ದೇಶಕ್ಕೆ ಹಿಂತಿರುಗಿದ ನಂತರ ಇಂಗ್ಲೆಂಡ್ ನ ಜನ ಸೌಜನ್ಯ

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು.

ಇಂಗ್ಲೆಂಡ್ ಸಿಟಿ ಬಸ್ಸುಗಳಲ್ಲಿ ಡ್ರೈವರ್ ನೆ ಕಂಡಕ್ಟರ್ ಕೆಲಸ ಮಾಡುತ್ತಾನೆ. ಪ್ರಯಾಣಿಕರು ಬಸ್ ಹತ್ತಿ ತಾವುಹೋಗಬೇಕಾದ ಸ್ಥಳದ ಹೆಸರು ಹೇಳಿ ಸರಿಯಾದ ಚಿಲ್ಲರೆ ಕೊಡುತ್ತಾರೆ. ಆತ ಪಕ್ಕದಲ್ಲಿಯೇ ಇರುವ ಪುಟ್ಟ ಯಂತ್ರದಿಂದ ಟಿಕೇಟನ್ನುಮುದ್ರಿಸಿ ಕೊಡುತ್ತಾನೆ. ಒಮ್ಮೆ ಬಸ್ಸ್ ನಿಲ್ದಾಣದಲ್ಲಿ ಬಹಳ ಜನ ಕಾಯುತ್ತಿದ್ದರು . ಬಸ್ಸ್ ಬಂದಿತು. ಪ್ರಯಾಣಿಕರು ಸಾಲಿನಲ್ಲಿ ಬಸ್ಸ್ಹತ್ತಿ ಚಾಲಕನಿಗೆ ಸೂಕ್ತ ಚಿಲ್ಲರೆ ಕೊಟ್ಟು ಟಿಕೇಟ್ ಪಡೆದು ಸರಸರನೆ ಬಸ್ಸೊಳಗೆ ಹೋಗುತ್ತಿದ್ದರು. ಸಾಲಿನಲ್ಲಿದ್ದ ಒಬ್ಬ ವಯಸ್ಸಾದಸರ್ದಾಜೀ ಬಸ್ಸ್ ಹತ್ತಿದರು. ಅವರಿಗೆ ಟಿಕೇಟ್ ಪಡೆಯುವ ಪದ್ಧತಿ ಗೊತ್ತಿರಲಿಲ್ಲ.

ಇಂಗ್ಲಿಷ್ ಅವರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಅವರು ತಮ್ಮ ಜೇಬಿನಿಂದ ಐದು ಪೌಂಡ್ ಹಣದ ನೋಟನ್ನು ತೆಗೆದು ಚಾಲಕನಿಗೆಕೊಟ್ಟು ಅವರು ಹೋಗಬೇಕಾದ ಸ್ಥಳದ ಹೆಸರನ್ನು ಹೇಳಿದರು. ಚಾಲಕ ದಯವಿಟ್ಟು ಸರಿಯಾದ ಚಿಲ್ಲರೆ ಕೊಡಿ ಎಂದು ಕೇಳಿದ. ಅವನ ಮಾತು ಸರ್ದಾಜೀಗೆ ಅರ್ಥವಾಗಲಿಲ್ಲ. ಅವರು ತಾವು ಹೋಗಬೇಕಾದ ಸ್ಥಳದ ಹೆಸರನ್ನು ಮತ್ತೊಮ್ಮೆ ಹೇಳಿ ನೋಟನ್ನುಮುಂದೆ ಚಾಚಿದರು. ಸ್ವಲ್ಪ ತಾಳ್ಮೆ ಕಳೆದುಕೊಂಡ ಚಾಲಕ ದಯವಿಟ್ಟು ಸರಿಯಾದ ಚಿಲ್ಲರೆ ಕೊಡಿ ಎಂದು ಗಟ್ಟಿ ದನಿಯಲ್ಲಿ ಹೇಳಿದ. ಸರ್ದಾಜೀ ಹರಕು ಇಂಗ್ಲಿಷ್ ನಲ್ಲಿ ಏನೋ ಹೇಳಲು ಯತ್ನಿಸಿದರು. ಸರ್ದಾಜೀ ಯಾ ಹಿಂದೆ ಸಾಲಿನಲ್ಲಿ ನಿಂತಿದ್ದ ಪ್ರಯಾಣಿಕರುಬೇಗ ಬೇಗ ಮುಂದಕ್ಕೆ ಹೋಗಿ ಎಂದು ಕಿರುಚಿದರು. ಒಂದಿಬ್ಬರು ಸರ್ದಾಜೀ ಯವರನ್ನು ಪಕ್ಕಕ್ಕೆ ತಳ್ಳಿ ತಮ್ಮ ಟಿಕೇಟ್ ಪಡೆದುಬಸ್ಸಿನಲ್ಲಿ ಹೋಗಿ ಕುಳಿತರು. ಉಳಿದವರು ಸರ್ದಾಜೀ ಯಾ ಮೇಲೆ , ಚಾಲಕನ ಮೇಲೆ ರೇಗಿದರು. ಚಾಲಕನು ಸಹನೆಕಳೆದುಕೊಂಡು ಸರ್ದಾಜೀ ಯನ್ನು ಗದರಿಸಿದ. ಇದ್ಯಾವುದೋ ಅರ್ಥವಾಗದ ಸರ್ದಾಜೀ ಗಾಬರಿಗೊಂಡ. ಟಿಕೇಟ್ ಟಿಕೇಟ್ ಎಂದುಬೇಡಿದರು ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ನಾಲ್ಕು ಜನ ಭಾರತೀಯರು ಇದ್ದರು. ಅವರುಗಳು ಇಂಥವರು ಏಕೆ ಬರುತ್ತಾರೆ. ಇವರಿಂದಎಲ್ಲರಿಗೂ ತೊಂದರೆ. ಭಾರತಿಯರಾದ ನಮಗೆ ಅವಮಾನ. ನಾವೆಲ್ಲಾ ತಲೆ ತಗ್ಗಿಸುವಂತಾಗಿದೆ. ಎಂದೆಲ್ಲ್ಲಮಾತನಾಡಿಕೊಳ್ಳುತ್ತಿದ್ದರು.

ಬಸ್ಸಿನಲ್ಲಿದ್ದ ಒಬ್ಬ ಹತ್ತು ವರ್ಷದ ಇಂಗ್ಲಿಷ ಬಾಲಕಿ ಗಲಾಟೆಯನ್ನು ಗಮನಿಸಿದಳು. ತನ್ನ ಸ್ಥಳದಿಂದ ಎದ್ದು ಬಂದುಮುಗುಳ್ನಗೆಯೊಂದಿಗೆ ಮೆಲುದನಿಯಲ್ಲಿ ಸರ್ದಾಜೀಯನ್ನು ಮಾತನಾಡಿಸಿದಳು. ಸರ್ದಾಜೀಯ ಬಳಿ ಐದು ಪೌಂಡ್ ನೋಟು ಮಾತ್ರ ಇದೆ , ಸರಿಯಾದ ಚಿಲ್ಲರೆ ಇಲ್ಲವೆಂದೂ , ಆತನ ಟಿಕೇಟ್ ಬೆಲೆ ಕೇವಲ ಮೂವತ್ತು ಪೆನ್ನಿ ಎಂದು ಆಕೆಗೆ ತಿಳಿಯಿತು. ಆಕೆತನ್ನ ಪುಟ್ಟ ಪರ್ಷಿನಿಂದ ಮೂವತ್ತು ಪೆನ್ನಿ ನಾಣ್ಯ ತೆಗೆದು ಚಾಲಕನಿಗೆ ಕೊಟ್ಟು ಸರ್ದಾಜೀ ಹೋಗಬೇಕಾದ ಸ್ಥಳಕ್ಕೆ ಟಿಕೇಟ್ ತೆಗೆದುಕೊಟ್ಟಳು. ಆತನನ್ನು ಕರೆದುಕೊಂಡು ಬಸ್ಸಿನೊಳಗೆ ಕರೆದುಕೊಂಡು ಹೋಗಿ ಕೂರಿಸಿದಳು. ಆತ ಇಳಿಯಬೇಕಾದ ಸ್ಥಳ ಬಂದಾಗಇಳಿಯಲು ಸಹಾಯಮಾಡಿದಳು.

ಆಗ ಚಾಲಕ ಬಾಲಕಿಯನ್ನು" ಅವರು ನಿಮ್ಮ ಪರಿಚಯದವರೇ ? ಏಕೆ ಸಹಾಯ ಮಾಡಿದಿರಿ ?". ಎಂದು ಕೇಳಿದಾಗ ಆಕೆಅವರು ಹೊಸಬರು . ಭಾಷೆ ಗೊತ್ತಿಲ್ಲದವರು . ನಮ್ಮ ದೇಶಕ್ಕೆ ಬಂದಿರುವ ಅತಿಥಿ . ! ಎಲ್ಲರು ಅವರನ್ನು ಗದರಿಸಿದರೆ , ಅವರುತಮ್ಮ ದೇಶಕ್ಕೆ ಹಿಂತಿರುಗಿದ ನಂತರ ಇಂಗ್ಲೆಂಡ್ ಜನ ಸೌಜನ್ಯ ಇಲ್ಲದವರೆಂದು ಹೇಳಿಕೊಳ್ಳುವುದಿಲ್ಲವೇ? ಅದಕ್ಕೆ ಸಹಾಯಮಾಡಿದೆ.ಎಂದು ತಲೆಯೆತ್ತಿ ಹೇಳಿದಾಗ ಬಸ್ಸಿನಲ್ಲಿದ್ದ ನಾಲ್ವರು ಭಾರತೀಯರು ತಲೆ ತಗ್ಗಿಸಿದರು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486













ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ