MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜುಲೈ 9, 2010

ಆಕಾಶದಿಂದ ಬೀಳುವ ಮಳೆಯ ನೀರು ಜೋಗದ ಜಲಪಾತಕ್ಕಿಂತ ಎತ್ತರದಿಂದ ಬೀಳುವುದಿಲ್ಲವೇ ?

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

ಒಮ್ಮೆ ಸರೋಜಿನಿ ನಾಯ್ಡು ಗಾಂಧೀಜಿಯನ್ನು ಕೀಟಲೆ ಮಾಡಲು "ನಿಮ್ಮ ದೃಷ್ಟಿಯಲ್ಲಿ ವಿಶ್ವಸುಂದರಿ ಯಾರು ?" ಎಂದುಪ್ರಶ್ನಿಸಿದರಂತೆ. ಗಾಂಧಿಜೀ ತಕ್ಷಣ "ನನ್ನ ಪತ್ನಿ ಕಸ್ತೂರ್ ಬಾ ವಿಶ್ವಸುಂದರಿಯಲ್ಲವೇ ? ಎಂದರಂತೆ.

ಸರೋಜಿನಿ ಕಸ್ತೂರ್ ಬಾ ರನ್ನು ಕಂಡು "ಅಮ್ಮಾ ! ನಾನು ಗಾಂಧಿಜೀಯವರನ್ನು ವಿಶ್ವಸುಂದರಿ ಯಾರೆಂದು ಕೇಳಿದರೆ, ಅವರು ನನ್ನ ಪತ್ನಿ ಕಸ್ತೂರ್ ಬಾಯಿಯೇ ವಿಶ್ವಸುಂದರಿ ಎನ್ನುತ್ತಾರೆ . ನೀವೇನನ್ನುತ್ತೀರಿ ?. ಎಂದು ಕೇಳಿದರು. ಇದನ್ನು ಕೇಳಿ ಅಜ್ಜಿಕಸ್ತೂರ್ ಬಾ ನಾಚಿಕೊಳ್ಳುತ್ತಾ "ನನ್ನ ಪತಿ ಯಾವಾಗಲೂ ಸತ್ಯವನ್ನೇ ಹೇಳುತ್ತಾರೆ!. ಎಂದು ಸುಳ್ಳು ಹೇಳುವವರಲ್ಲ. ಅವರಮಾತು ನಿಜವಿರಬಹುದು !" ಎಂದು ಅಲ್ಲಿದ್ದವರನ್ನೆಲ್ಲ ನಗಿಸಿದರು.

ಮಹಾತ್ಮಜೀ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದರಂತೆ, ಬಿಡುವಿಲ್ಲದಷ್ಟು ಕಾರ್ಯಕ್ರಮಗಳು, ಕಾಕಾ ಕಾಲೇಲ್ಕರ್ ಅವರಿಗೆಒಂಬೈನೂರಡಿ ಎತ್ತರದಿಂದ ನೀರು ಧುಮುಕುವ ಜೋಗದ ಜಲಪಾತದ ಅದ್ಬುತವನ್ನು ನೋಡಿ ಬರಬಹುದೆಂದು ಸೂಚಿಸಿದರು. ಗಾಂಧಿಜೀ "ಅದ್ಯಾವ ಅದ್ಬುತ ! ನಾನು ಅದಕ್ಕಿಂತಲೂ ಎತ್ತರದಿಂದ ನೀರು ಧುಮುಕುವುದನ್ನು ನೋಡಿದ್ದೇನೆ . ಎಂದರು. ಕಾಕಾಆಶ್ಚರ್ಯದಿಂದ "ಜೋಗದ ಜಲಪಾತಕ್ಕಿಂತಲೂ ಎತ್ತರದಿಂದ ನೀರು ಎಲ್ಲಿ ಧುಮುಕುತ್ತದೆ.? ಎಂದು ಕೇಳಿದಾಗ , ಮಹಾತ್ಮರುಆಕಾಶದಿಂದ ಬೀಳುವ ಮಳೆಯ ನೀರು ಜೋಗದ ಜಲಪಾತಕ್ಕಿಂತ ಎತ್ತರದಿಂದ ಬೀಳುವುದಿಲ್ಲವೇ ? "ಎಂದು ಹೇಳಿದರಂತೆ ಮುಗ್ದನಾಗಿ.

ಗಾಂಧಿಜಿ ದಕ್ಷಿಣ ಆಪ್ರ್ಹಿಕಾದಲ್ಲಿದ್ದ ಕಾಲದಲ್ಲಿ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು . ಸರಕಾರ ಮೆರವಣಿಗೆಯನ್ನುನಿಷೇಧಿಸಿತ್ತು. ರಾಷ್ಟ್ರಾಧ್ಯಕ್ಷರಾಗಿದ್ದ ಜನರಲ್ ಸ್ಮಟ್ಸ್ ಅಲ್ಲಿಗೆ ಬಂದು ಮೆರವಣಿಗೆಯನ್ನು ನಿಲ್ಲಿಸುವಂತೆ ಆಜ್ಞಾಪಿಸಿದರು. ಗಾಂಧಿಜೀ ನಿರಾಕರಿಸಿದರು. ಸಿಟ್ಟಿಗೆದ್ದ ಸ್ಮಟ್ಸ್ ಗಾಂಧಿಜೀ ಎದೆಗೆ ಬೂಟ್ಕಾಲಲ್ಲಿ ಒದ್ದರು. ಗಾಂಧಿಜೀ ಕೆಳಕ್ಕೆ ಬಿದ್ದರು. ಗಾಂಧಿಜೀಯವರನ್ನುಬಂಧಿಸಿ ಮೂರು ತಿಂಗಳ ಸೆರಮನೆ ವಾಸಕ್ಕೆ ದೂಡಲಾಯಿತು.
ಸೆರಮನೆ ಶಿಕ್ಷೆ ಮುಗಿಸಿದ ಗಾಂಧೀ ನೇರವಾಗಿ ಸ್ಮಟ್ಸ್ ರವರ ಕಚೇರಿಗೆ ಬಂದು, ಒಂದು ಜತೆ ಪಾದರಕ್ಷೆಗಳನ್ನು ತೆಗೆದು ಸ್ಮಟ್ಸ್ರವರಿಗೆ ಕೊಟ್ಟು ನನ್ನ ಸೆರೆಮನೆ ವಾಸದಲ್ಲಿ ಪಾದರಕ್ಷೆ ಹೊಲಿಯುವುದನ್ನು ಕಲಿತ್ತಿದ್ದೇನೆ. ಒಂದು ಜತೆ ನನಗೆ ಮತ್ತೊಂದು ತಮಗೆ ! ಪ್ರೀತಿಯಿಂದ ಅರ್ಪಿಸುತ್ತಿದ್ದೇನೆ . ದಯವಿಟ್ಟು. ಸ್ವೀಕರಿಸಿ , ಎಂದು ನಗುನಗುತ್ತಲೇ ಹೇಳಿದರು. ಸ್ಮಟ್ಸ್ ಎದೆಗೆ ಒದ್ದವರ ಕಾಲುಗಳಿಗೆಪಾದರಕ್ಷೆಗಳನ್ನು ಪ್ರೀತಿಯಿಂದ ಕೊಟ್ಟು ಹೋಗುತ್ತಿರುವ ಗಾಂಧೀಜಿಯನ್ನು ಬಾಯಿಮುಚ್ಚದೆ ನೋಡುತ್ತಾ ನಿಂತರು.

ಇದಾದ ನಂತರ ಗಾಂಧಿಜೀ ಭಾರತಕ್ಕೆ ಮರಳಿದರು. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದರು. ಭಾರತಸ್ವತಂತ್ರವಾಯಿತು. ಗಾಂಧಿಜೀಯವರ ಎಪ್ಪತ್ತನೆಯ ಹುಟ್ಟುಹಬ್ಬಕ್ಕೆ ಸ್ಮಟ್ಸ್ ರಿಂದ ಉಡುಗೊರೆ ಬಂದಿತಂತೆ . ಅದರಲ್ಲಿಗಾಂಧಿಜೀ ಹೊಲಿದು ಕೊಟ್ಟಿದ್ದ ಪಾದರಕ್ಷೆ ಮತ್ತು ಜತೆಗೊಂದು ಪತ್ರವಿತ್ತಂತೆ . ಅದರಲ್ಲಿ " ಮಹಾತ್ಮರೇ . ತಾವು ಹಿಂದೆ ಕೊಟ್ಟಿದ್ದಪಾದರಕ್ಷೆಗಳನ್ನು ನಾನು ಇಂದಿನವರೆಗೂ ನನ್ನ ಪೂಜಾ ಕೋಣೆಯಲ್ಲೇ ಇಟ್ಟಿದ್ದೆ. ಪಾದರಕ್ಷೆಗಳ ಮಹತ್ವ ನನಗೆ ಮಾತ್ರ ಗೊತ್ತು. ಈಗ ನನಗೆ ವಯಸ್ಸಾಗಿದೆ. ಇವುಗಳನ್ನು ನಿಮಗೇ ಪುನರರ್ಪಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ . ಎಂದು ಬರೆದಿತ್ತಂತೆ.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ

.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬

.....................................................................................................................................................................
ಪ್ರತಿಯೊಂದು ಕಲ್ಲಿಗೂ ಅದು ಎಂತಹ ವಿನಾಶವನ್ನೆಸಗಬೇಕು. ಮತ್ತು ಯಾವ ಕಲ್ಲು ಯಾವ ಅಪರಾಧಿಯ ಮೇಲೆ ಬೀಳಬೇಕು. ಎಂದು ಅಲ್ಲಾಹನು ಗೊತ್ತು ಪಡಿಸಿದ್ದನು.
-ಪವಿತ್ರ ಕುರ್ಆನ್










"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ