MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಜುಲೈ 14, 2010

ಸಿಟಿ ಫೈನಾನ್ಸ್ ಸಾಲದ ಬಗ್ಗೆ ನನ್ನ ಸ್ವಂತ ಅನುಭವ

ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.
ನನಗೆ ಒಮ್ಮೊಮ್ಮೆ ತೀರ ನನ್ನ ವೈಯಕ್ತಿಕ ಅನುಭವಗಳನ್ನು ನಿಮ್ಮೊಂದಿಗೆ ಹಂಚಿ ಕೊಳ್ಳಬೇಕೋ ಬೇಡವೋ ಎಂಬ ಒಂದು ಪ್ರಶ್ನೆ ಮೂಡುತ್ತದೆ. ಹಂಚಿಕೊಳ್ಳದಿದ್ದರೆ ನಿಮಗೆ ತುಂಬಾ ನಷ್ಟ ಮಾಡಿದಂತಾಗುತ್ತದೆ. ಹಾಗಾಗಿ ನಿಮ್ಮೊಂದಿಗೆ ಸಿಟಿ ಫೈನಾನ್ಸ್ ಸಾಲದ ಬಗ್ಗೆ ನನ್ನ ಒಂದು ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.ಸರಿ ಸುಮಾರು ಜೂನ್ ೨೦೦೭ , ನನಗೆ ಹಣದ ಅವಶ್ಯಕತೆ ಇತ್ತು. ಅದೂ ಒಂದೆರಡು ದಿನಗಳಲ್ಲಿ ನನಗೆ ಅವಶ್ಯಕವಾಗಿ ಬೇಕಾಗಿರುವುದು ಸುಮಾರು ಮೂವತ್ತು ಸಾವಿರ ರೂಪಾಯಿಗಳು. ಹಲವರನ್ನು ಕೇಳಿ ನೋಡಿದೆ. ಸಿಗಲಿಲ್ಲ. ಕೆಲವು ಆತ್ಮೀಯರು ಸಿಟಿ ಫೈನಾನ್ಸ್ ನಲ್ಲಿ ಪ್ರಯತ್ನ ಪಡು ಆಗುತ್ತದೆ ಅಂದರು. ನಾನು ಅಲ್ಲಿ ಹೋಗಿ ಕೇಳಿದೆ. ಅವರು ಸಾಲ ಕೊಡಲು ಒಪ್ಪಿದರು.
ನನಗೆ ಬೇಕಾದ ಹಣ ಮೂವತ್ತು ಸಾವಿರ ರೂಪಾಯಿಗಳು
ಸಿಟಿ ಪೈನಾನ್ಸಿಅಲ್ ನಿಂದ ನನಗೆ ಬಂದ ಚೆಕ್ ಇಪ್ಪತೈದು ಸಾವಿರದ ಒಂದು ನೂರ ಒಂಬತ್ತು ರೂಪಾಯಿಗಳು (ನಾಲ್ಕು ಸಾವಿರದ ಎಂಟು ನೂರ ಮೂವತ್ತ ಒಂದು ರೂಪಾಯಿ ಗಳನ್ನೂ ಇನ್ಸೂರೆನ್ಸ್ ,ಪ್ರೊಸೆಸಿಂಗ್ ಫೀ ಮುಂತಾದ ಖರ್ಚುಗಳೆಂದು ಮುರಿದುಕೊಳ್ಳುತ್ತಾರೆ)
ಅಕೌಂಟ್ ನ ಹೆಸರು ಕನ್ಸುಮಾರ್ ಲೋನ್
ಬಡ್ಡಿಯ ರೀತಿ ಪ್ಲಾಟ್
ಅಮೌಂಟ್ ಪೈನಾನ್ಸ್ದ ಮೂವತ್ತು ಸಾವಿರ ರೂಪಾಯಿಗಳು
ಕಂತುಗಳು ಮೂವತ್ತಾರು
ಬುಕ್ಕಿಂಗ್ ಡೇಟ್ ೨೫-ಜೂನ್ ೨೦೦೭
ಬಡ್ಡಿಯ ದರ ೨೮.೦೩

ಪ್ರತಿ ತಿಂಗಳಿಗೆ ಒಂದು ಸಾವಿರದ ಐದು ನೂರ ಮೂವತ್ತ ನಾಲ್ಕು ರೂಪಾಯಿಗಳಂತೆ ಗುಣಿಸು (*)
ಮೂವತ್ತಾರು ತಿಂಗಳಿಗೆ = ಐವತೈದುಸಾವಿರದ ಎರಡು ನೂರ ಇಪ್ಪತ್ತಾನಾಲ್ಕು ರೂಪಾಯಿಗಳನ್ನು ಮರು ಪಾವತಿ ಮಾಡಿದೆ. ಸುಮಾರು ಮೂವತ್ತು ಸಾವಿರದ ಐವತ್ತೈದು ರೂಪಾಯಿಗಳನ್ನು ಸಂಸ್ಥೆಗೆ ಹೆಚ್ಚು ಪಾವತಿ ಮಾಡಿದೆ.
ಪ್ರತಿ ತಿಂಗಳ ಐದನೇ ತಾರೀಖಿನ ಒಳಗೆ ಕಂತನ್ನು ಕಟ್ಟಬೇಕು. ಇಲ್ಲದಿದ್ದರೆ ಅದಕ್ಕೂ ಚೆಕ್ ಬೋನ್ಸ್ ಫೀ . ಅಂದರೆ ನನ್ನ ಚೆಕ್ ಬೋನ್ಸ್ ಎರಡು ಮೂರು ಬಾರಿ ಯಾಗಿರಬಹುದು. ಕಾರಣ ಮಾರ್ಚ್ -ಎಪ್ರಿಲ್ ತಿಂಗಳುಗಳಲ್ಲಿ ಕಂಪನಿಗಳ ಲೆಕ್ಖಚಾರ ,ಕೆಲವೊಮ್ಮೆ ಸರಕಾರೀ ರಜಾದಿನ , ಹೀಗಾಗಿ ಸುಮಾರು ಒಂದು ಸಾವಿರದ ಆರು ನೂರ ಇಪ್ಪತೈದು ರೂಪಾಯಿಗಳಿಂದ ಒಂದು ಸಾವಿರದ ಏಳು ನೂರು ರೂಪಾಯಿಗಳ ವರೆಗೆ ಹೆಚ್ಚು ಹಣ ಕಟ್ಟಿದ್ದೇನೆ.

ಆಗ ನನಗೆ ಅನ್ನಿಸಿದ್ದು ಏನೆಂದರೆ "ಚಿಕ್ಕ ಮಕ್ಕಳು ಸ್ವಲ್ಪ ಸ್ವಲ್ಪ ಊಟ ಮಾಡುತ್ತಾರೆ. ದೊಡ್ದವರಿಗಿಂತ ಎರಡರಷ್ಟು ತಿಂದಿರುತ್ತಾರೆ, " ಅದು ಈ ಅಮೆರಿಕ ದಿಂದ ಬಂದ ಸಿಟಿ ಪೈನಾನ್ಸ್ ನ ಲೆಕ್ಕ ಚಾರ.

ನಾನು ಯಾರಿಗೂ ಸಿಟಿ ಪೈನಾನ್ಸ್ ನಲ್ಲಿ ಸಾಲ ತೆಗೆದುಕೊಳ್ಳಬೇಡಿ ಎಂದು ಹೇಳುವುದಿಲ್ಲ. ಅದು ನನ್ನ ಕರ್ತವ್ಯ ಅಲ್ಲ. ಆದರೆ ನನ್ನ ರೀತಿ ಸಾಲ ತೀರಿಸಲು ಹೋಗಬೇಡಿ. ಇದು ಪ್ರಜಾಪ್ರಭುತ್ವ ಅಲ್ಲವೇ . ಉಳಿದಿದ್ದು ನಿಮಗೆ ಬಿಟ್ಟಿದ್ದು.
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ

.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬

..........................................................................................................
ಜಸ್ಟ್ ಡಯಲ್ ವರ್ಸಸ್ ಬಿ ಎಸ್ ಎನ್ ಎಲ್
ನೀವು ನಿಮಗೆ ಬೇಕಾದ ಯಾವುದೇ ಸರಕಾರೀ ಅಥವಾ ಖಾಸಗಿ ಕಂಪನಿಗಳ, ಕಛೇರಿಗಳ ದೂರವಾಣಿ ,ವಿವರ ಪಡೆಯಲು ನಿಮ್ಮ ಸರಕಾರೀ ದೂರವಾಣಿ ಸಹಾಯ ಕೇಂದ್ರ (ದೂರವಾಣಿ ಸಂಖ್ಯೆ ೧೯೭) ಕ್ಕೆ ಕರೆ ಮಾಡಿ .

ಅದೇ ವೇಳೆಯಲ್ಲಿ ಒಂದು ಖಾಸಗಿ ಕಂಪನಿ ದೂರವಾಣಿ ಮಾಹಿತಿ ಕೇಂದ್ರ ಜಸ್ಟ್ ಡಯಲ್ (ದೂರವಾಣಿ ಸಂಖ್ಯೆ ೦೮೦ -೨೩೩೩೩೩೩೩) ಗೂ ಕರೆ ಮಾಡಿ , ಆದರೆ ನಿಮ್ಮ ಮೊಬೈಲ್ ಗೆ ಬೇಗ ಯಾವುದರಿಂದ ಮಾಹಿತಿ ಸಿಕ್ಕಿರುತ್ತದೆ ಗಮನಿಸಿ) ನನ್ನ ಒಂದು ಅನಿಸಿಕೆ ಯಲ್ಲಿ ಹೇಳುವುದಾದರೆ ನೀವು ಜಸ್ಟ್ ಡಯಲ್ ನಂಬರ್ ಗೆ ಕರೆ ಮಾಡಿ ನಿಮ್ಮ ಮೊಬೈಲ್ ನ ಬ್ಯಾಲೆನ್ಸ್ ಚೆಕ್ ಮಾಡುವುದರೊಳಗೆ ನಿಮ್ಮ ಮೊಬೈಲ್ ನಲ್ಲಿ ಜಸ್ಟ್ ಡಯಲ್ ಸರ್ವೀಸ್ ನಿಂದ ಮೆಸೇಜ್ ಬಂದಿರುತ್ತದೆ.)
ಜಸ್ಟ್ ಡಯಲ್ ನಿಂದ ಹೇಗೆ ಮಾಹಿತಿ ಪಡೆಯಬಹುದು. ಮೊದಲು ನಿಮ್ಮ ಮೊಬೈಲ್ ನಂಬರಿನಿಂದ ೦೮೦-೨೩೩೩೩೩೩೩ ಕ್ಕೆ ಕರೆಮಾಡಿ. ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ ಸಂಖ್ಯೆ ಯನ್ನು ನೊಂದಾಯಿಸಿ , ಇದು ಖಾಸಗೀ ಕಂಪನಿ ಯಾದರೂ ಎಲ್ಲವು ಉಚಿತ. ಸ್ಥಳೀಯ ಹಾಗೂ ಅಂತರ್ ರಾಷ್ಟ್ರೀಯ ಮಾಹಿತಿಗಳು ಇಲ್ಲಿ ಸಿಗುತ್ತವೆ. ನಿಮಗೆ ಯಾವ ಕಂಪನಿ ,ಕಚೇರಿ ವಿಳಾಸ ಬೇಕೋ ಆ ಕಚೇರಿ ಹೆಸರು ಹೇಳಿದರಾಯಿತು. ಇಲ್ಲವೇ ನಿಮಗೆ ಸೇವೆ ಬೇಕಾದರೆ ಸೇವೆ ಕೇಳಿದರಾಯಿತು. ಉದಾಹರಣೆಗೆ ನಿಮಗೆ ಉಡುಪಿಯಲ್ಲಿ ಒಂದು ದಿನ ಉಳಿಯಲು ಒಂದು ಹೋಟೆಲ್ ಅಥವಾ ಲಾಡ್ಜ್ ಹೆಸರು ಬೇಕು. ಜಸ್ಟ್ ಡಯಲ್ ಗೆ ಕಾಲ್ ಮಾಡಿ , ನನಗೆ ಉಡುಪಿ ಯಲ್ಲಿ ಯಾವುದಾದರು ಒಳ್ಳೆ ಉಳಿಯಲು ಅನುಕೂಲವಾದ ಹೋಟೆಲ್ ವಿಳಾಸ ಕೊಡಿ ಅಂದರೆ ಅವರು ನಿಮ್ಮ ಮೊಬೈಲ್ ಗೆ ಹಲವಾರು ಹೋಟೆಲ್ ಗಳ ಹೆಸರು , ದೂರವಾಣಿ ಸಂಖ್ಯೆ ,ವಿಳಾಸ ಕೊಡುತ್ತಾರೆ. ಒಮ್ಮೊಮ್ಮೆ ನೇರವಾಗಿ ನಿಮ್ಮ ಕರೆಯನ್ನು ಸಂಬಂದ ಪಟ್ಟ ಹೋಟೆಲ್ ಗೆ ಅಥವಾ ಸೇವಾ ಕೇಂದ್ರಕ್ಕೆ (ಸ್ವಾಗತಕಾರ )ವರ್ಗಾಯಿಸುತ್ತಾರೆ.
ಒಮ್ಮೊಮ್ಮೆ ನೀವು ಮೆಸೇಜ್ ಓದುವಸ್ಟರಲ್ಲಿ ನಿಮಗೆ ಬೇರೆ ಬೇರೆ ಸೇವಕೆಂದ್ರಗಳಿಂದ ಕರೆಗಳ ಸುರಿಮಳೆಯೇ ಮೇಲಿನಿಂದ ಮೇಲೆ ಬರತೊಡಗುತ್ತದೆ.
ಇನ್ನಾದರೂ ಈ ಸೇವೆ ಉಪಯೋಗಿಸಿಕೊಳ್ಳುತ್ತಿರಲ್ಲ.














ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ