ಈ ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗ್ಗಿನ ವಂದನೆಗಳು.
ಸ್ಕಾಟ್ ಲೆಂಡ್ ನಲ್ಲಿ ಕೈಮಗ್ಗದ ಕೂಲಿಕಾರರಾಗಿದ್ದವರ ಮಗ, ಪಾದರಕ್ಷೆಗಳನ್ನು ಹೊಲಿಯುತ್ತಿದ್ದ ಚಮ್ಮಾರರಾಗಿದ್ದವರಮೊಮ್ಮಗ ಮುಂದೆ ಜೀವನದಲ್ಲಿ ಹತ್ತೊಂಬತ್ತನೆಯ ಶತಮಾನದ ಜಗತ್ತಿನ ಅತ್ಯಂತ ಶ್ರೀಮಂತರಾದರು. ಅವರು ಅತೀ ದೊಡ್ಡಮೊತ್ತಗಳನಿತ್ತ ದಾನಿಯಾದರು. ಅವರೇ ನಮಗೆಲ್ಲ ಸ್ಪೂರ್ತಿ ನೀಡಿದ ನೀಡುತ್ತಿರುವ ಅದರಲ್ಲೂ ನನ್ನ ಮೇಲೆ ತುಂಬಾ ಪರಿಣಾಮಬೀರಿದ ಮಹಾನ್ ವ್ಯಕ್ತಿ ಆಂಡ್ರೋ ಕಾರ್ನಿಗಿ . ಅದರಲ್ಲೂ ಅವರ ಬಗ್ಗೆ ಲೇಖಕ ನೆಪೋಲಿಯನ್ ಹಿಲ್ ರು "ದಿ ಲಾ ಆಪ್ಹ್ ಸಕ್ಸ್ಸಸ್ ಮತ್ತು "ಥಿಂಕ್ ಅಂಡ್ ಗ್ರೋ ರಿಚ್ "ಎಂಬ ಎರಡು ಪುಸ್ತಕಗಳಲ್ಲಿ ಆಂಡ್ರೋ ಕಾರ್ನಿಗಿ ಕಡುಬಡತನದಿಂದ ಪಾರಾಗಿ ಯಶಸ್ವಿ ವ್ಯಕ್ತಿಹೇಗೆ ಆದರು ಎಂಬ ಬಗ್ಗೆ ವಿವರಿಸಿದ್ದಾರೆ. ಮೇಲಿನ ಎರಡು ಪುಸ್ತಕಗಳು ಈಗಾಗಲೇ ಕನ್ನಡಕ್ಕೆ ಭಾಷಾಂತರಗೊಂಡಿವೆ. ಸಾಧ್ಯವಾದರೆ ಓದಿ ನೋಡಿ. ನಿಮ್ಮ ಜೀವನವನ್ನು ಅವರು ಹೇಳಿದ ಸೂತ್ರಗಳನ್ನು ಅನುಸರಿಸಿ ಶ್ರೀಮಂತಿಕೆಯತ್ತ ತೆಗೆದುಕೊಂಡುಹೋಗಿರಿ.
ಆಂಡ್ರೋ ಕಾರ್ನಿಗಿ ಯವರು ತಮ್ಮ ಹದಿಮೂರನೆಯ ವಯಸ್ಸಿನಲ್ಲಿ ಬರಿಗೈಲಿ ಅಮೆರಿಕಕ್ಕೆ ಬಂದರು .ಟೆಲಿಗ್ರಾಪ್ಹ್ ಕಂಪನಿಯೊಂದರಲ್ಲಿ ವಾರಕ್ಕೆ ಎರಡೂವರೆ ಡಾಲರ್ ಸಂಬಳಕ್ಕೆ ಸೇರಿಕೊಂಡರು. ಶಾಲಾ ಕಾಲೇಜುಗಳಲ್ಲಿ ಸಾಂಪ್ರದಾಯಿಕವಿದ್ಯಾಭ್ಯಾಸ ಪಡೆಯಲಾಗದ ಅವರು ಹಣಗಳಿಕೆಯ ಬದುಕುವ ವಿದ್ಯೆಯನ್ನು ಉದ್ಯೋಗ ಮಾಡುತ್ತಲೇ ಕಲಿತವರು. ಎರಡನೇನೌಕರಿ ರೈಲ್ವೆ ಕಂಪನಿಯಲ್ಲಿ ವಾರಕ್ಕೆ ನಾಲ್ಕು ಡಾಲರ್ ವೇತನ. ಆ ಕಡಿಮೆ ಸಂಬಳದಲ್ಲೂ ಆರು ನೂರು ಡಾಲರ್ ಗಳಷ್ಟುಬಂಡವಾಳವಾಗಿ ಹೂಡಿದಾಗ ಅವರಿಗಿನ್ನೂ ಹದಿನೇಳು ವರ್ಷ ವಯಸ್ಸು. ಅದರಿಂದ ಬಂದ ಲಾಭವನ್ನೆಲ್ಲ ರೈಲು, ತೈಲಉತ್ಪಾದನಾ ಕಂಪನಿಗಳಲ್ಲಿ ತೊಡಗಿಸುತ್ತ ಹೋದರು. ಅಪಾರ ಲಾಭವನ್ನುಗಳಿಸಿದರು . ಅದರಿಂದ ಸ್ಟೀಲ್ ಉತ್ಪಾದನೆ ಕಾರ್ಖಾನೆಸ್ಥಾಪಿಸಿ , ಅದನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸಿ ಅತ್ಯಂತ ಆಧುನಿಕ ಶ್ರೀಮಂತಿಕೆಯ ತುತ್ತ ತುದಿಯನ್ನೆರಿದರು. ಜಗತ್ತಿನ ಅತಿಶ್ರೀಮನ್ತರಲ್ಲೋಬ್ಬರಾದರು !
ಜೀವನದಲ್ಲಿ ಅತ್ಯಪೂರ್ವ ಯಸಸ್ಸುಗಳಿಸಿ ಉದ್ಯಮದ, ಶ್ರೀಮಂತಿಕೆಯ ತುಟ್ಟತುದಿ ಯಲ್ಲಿದ್ದಾಗ ,ವ್ಯವಹಾರದಿಂದ ಸ್ವಯಂನಿವೃತ್ತಿ ಪಡೆದರು. ತಮ್ಮೆಲ್ಲ ಸಂಪತ್ತನ್ನೂ ದಾನ ಧರ್ಮ ಮಾಡಲಷ್ಟೇ ಬಳಸುತ್ತಾ ತಮ್ಮ ಉಳಿದ ಆಯುಷ್ಯವನ್ನು ಸಾರ್ಥಕವಾಗಿಬಳಸಿದರು. ಅವರ ದೇಣಿಗೆಯ ಬಹುಭಾಗ ಶಾಲಾಕಾಲೇಜು,ವಿಶ್ವವಿದ್ಯಾನಿಲಯಗಳ ಸ್ಥಾಪನೆಗಾಗಿ ಬಳಕೆಯಾಗುತ್ತಿತ್ತು.. ವಿಶ್ವವಿಖ್ಯಾತ ಮೆಲ್ಲನ್ ವಿಶ್ವವಿದ್ಯಾನಿಲಯ ಅವರ ಸಹಾಯದಿಂದ ಸ್ಥಾಪಿತವಾದ ಸಂಸ್ಥೆ.
ಕಾರ್ನಿಗಿ ಹೇಳುತ್ತಿದ್ದ ಯಶಸ್ಸಿನ ಅಮೂಲ್ಯ ಸೂತ್ರ ತುಂಬಾ ಕುತೂಹಲಕಾರಿಯಾಗಿದೆ.
ಮನುಷ್ಯರಲ್ಲಿ ಮೂರು ಬಗೆ . ಮೊದಲನೆಯವರು ತಾವು ಮಾಡಬೇಕಾದ ಕೆಲಸಕ್ಕಿಂತ ಕಡಿಮೆ ಕೆಲಸ ಮಾಡುತ್ತಾರೆ. ಅವರುಸಾಮಾನ್ಯಾವಾಗಿ ಆಲಸಿಗಳು,ನಿರುತ್ಸಾಹಿಗಳು,ಉದಾಸೀನ ಮನೋಭಾವದವರು. ಮೇಲುಸ್ತುವಾರಿ ಮಾಡುವವರಿದ್ದಾರೆ ಕೆಲಸಮಾಡುತ್ತಾರೆ, ಇಲ್ಲದಿದ್ದರೆ ಸುಮ್ಮನೆ ಕಾಲ ಕಳೆಯುತ್ತಾರೆ, ಇಂತಹವರು ಜೀವನದಲ್ಲಿ ಮೇಲೇರುವುದಿಲ್ಲ. ಹೇಗೋ ಬದುಕುಸವೆಸುತ್ತಾರೆ.
ಎರಡನೆಯವರು ನಿಗದಿತ ಕೆಲಸವನ್ನಷ್ಟೇ ಮಾಡುತ್ತಾರೆ, ಅವರ ಕೆಲಸಕ್ಕಿಂತ ಹೆಚ್ಚಾಗಿ ಗಡಿಯಾರವನ್ನು ಗಮನಿಸುತ್ತಾರೆ, ತಮ್ಮ ಸಮಯದ ನಂತರ ಒಂದು ನಿಮಿಷವೂ ಅಲ್ಲಿರುವುದಿಲ್ಲಾ . ಕೆಲಸ ಬಾಕಿವುಳಿದಿದ್ದರೂ ನಾಳೆ ಮಾಡಿದರಾಯಿತೆಂದುಹೊರಟುಹೋಗುತ್ತಾರೆ, ಇಂತಹವರು ಜೀವನದಲ್ಲಿ ಹೆಚ್ಚೇನೂ ಗಳಿಸುವುದಿಲ್ಲ.
ಮೂರನೆಯವರು ತಮ್ಮ ನಿಗದಿತ ಕೆಲಸಕ್ಕಿಂತ ಹೆಚ್ಚು ಕೆಲಸ ಮಾಡುತ್ತಲೇ , ತಾವು ಪದೆಯವು ವೇತನಕ್ಕಿಂತ ಹೆಚ್ಚುದುಡಿಯುತ್ತಾರೆ . ಗಡಿಯಾರದ ಕಡೆ ಕಡಿಮೆ ಗಮನ ಕೊಡುತ್ತಾರೆ. ಕೆಲಸದಲ್ಲಿ ಹೊಸ ವಿಧಾನಗಳನ್ನು ಹುಡುಕುತ್ತಾರೆ . ಉತ್ಪಾದನೆಯನ್ನು ಹೆಚ್ಚಿಸುತ್ತಾರೆ. ತಾವು ಉತ್ಸಾಹಿಗಳಾಗಳಾಗಿರುತ್ತಾರಲ್ಲದೆ , ಉಳಿದವರಲ್ಲೂ ಉತ್ಸಾಹ ತುಂಬುತ್ತಾರೆ. ಇಂತಹವರು ತಮ್ಮ ಉದ್ಯೋಗ ದಲ್ಲಿ ಮೇಲೇರುತ್ತ ಹೋಗುತ್ತಾರೆ. ಉದ್ಯಮಶೀಲತೆಯನ್ನು ಬೆಳಸಿಕೊಳ್ಳುತ್ತಾರೆ. ಯಶಸ್ವಿಗಳೂ , ಸಿರಿವಂತರೂ ಆಗುತ್ತಾರೆ,
ಈಗ ನೀವೂ ಹಾಗೂ ನಾವುಗಳು ಯಾವ ಬಗೆಯ ಮನುಷ್ಯರಾಗಬೇಕೆನ್ನುವುದನ್ನು ನಾವು ನೀವುಗಳೇತೀರ್ಮಾನಿಸಿಕೊಳ್ಳಬಹುದು.
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ,ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
೯೧-9632172486
"
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ