MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಜುಲೈ 6, 2010

ಅರ್ಧ ಡಾಲರ್ ನಲ್ಲಿಯೂ ಕಟ್ಟಡ ಕಟ್ಟಬಹುದು !

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆ.


ಕೆಲದಿನಗಳ ಹಿಂದೆ ಒಂದೂರಿನ ಶಾಲಾ ಸಮಿತಿಯವರು ಕಟ್ಟಡ ನಿರ್ಮಾಣಕ್ಕಾಗಿ ಗಣ್ಯರೊಬ್ಬರ ಸಹಾಯ ಕೇಳಿದರು. ಅವರುತಕ್ಷಣ ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟರು, ಹೆಚ್ಚಿನ ಸಹಾಯ ನಿರೀಕ್ಷಿಸಿದ್ದ ಸಮಿತಿಯವರ ಮುಖ ಕಳೆಗುಂದಿತು. ಗಣ್ಯರುಇದನ್ನು ಗಮನಿಸಿದರು. "ನಾನು ಎಲ್ಲೋ ಓದಿದ್ದ ಘಟನೆ ನಿಮಗೆ ಹೇಳುತ್ತೇನೆ. ಕೇಳಿ "ಎಂದರು .

ಕಳೆದ ಶತಮಾನದಲ್ಲಿ ಡಾಕ್ಟರ್ ಕಾನ್ವೆಲ್ ಎಂಬ ಧರ್ಮಪ್ರಚಾರಕರಿದ್ದರು. ಅವರು "ಏಕರ್ಸ್ ಆಪ್ ಡೈಮಂಡ್ " ಎಂಬಜನಪ್ರಿಯ ಪುಸ್ತಕದ ಲೇಖಕರು. ಒಮ್ಮೆ ಅವರು ಚರ್ಚಿನ ಭಾನುವಾರದ ಶಾಲೆಯ ಮುಂದೆ ಒಬ್ಬ ಹರಕು ಬಟ್ಟೆಯ ಬಾಲಕಿ ಅಳುತ್ತನಿಂತಿದ್ದನ್ನು ಗಮನಿಸಿದರು. ವಿಚಾರಿಸಿದಾಗ ಬಾಲಕಿ "ನನಗೂ ಭಾನುವಾರದ ಶಾಲೆಗೆ ಹೋಗಲು ಇಷ್ಟ , ಆದರೆ ಸಭಾಂಗಣ ತುಂಬಿರುವುದರಿಂದ ನನ್ನನ್ನು ಒಳಗೆ ಬಿಡುತ್ತಿಲ್ಲ" ಎಂದಳು. ಕಾನ್ವೆಲ್ ರು ಆಕೆಯನ್ನು ಸಮಾಧಾನಪಡಿಸಿ ಒಳಗೆ ಹೋಗಲು ಅನುವುಮಾಡಿಕೊಟ್ಟರು. ಬಾಲಕಿಗೆ ತುಂಬಾ ಸಂತೋಷವಾಯಿತು.

ದುರದೃಷ್ಟವಶಾತ್ ಇದಾದ ಎರಡು ವರ್ಷಗಳ ನಂತರ ಬಾಲಕಿ ಅನಾರೋಗ್ಯದಿಂದ ಅಸುನೀಗಿದಳು. ಅವಳಅಂತ್ಯಕ್ರಿಯೆಯನ್ನು ಕಾನ್ವೆಲ್ಲರೆ ನೆರವೆರಿಸಬೇಕಾಯಿತು. ಎಲ್ಲ ಮುಗಿದ ನಂತರ ಬಾಲಕಿಯ ತಾಯಿ ಒಂದು ಮುದುಡಿದ್ದ ಪುಟ್ಟಹಣದ ಚೀಲವನ್ನು ಮತ್ತು ಕಾಗದವನ್ನು ಅವರ ಕೈಗಿತ್ತರು. ಬಾಲಕಿಯ ಅನಿರೀಕ್ಷಿತ ಸಾವಿನಿಂದ ಸ್ವಲ್ಪ ದು:ಖಿತರಾಗಿದ್ದ ಕಾನ್ವೆಲ್ ನಡುಗುವ ಕೈಯಿಂದಲೇ ಅವನ್ನು ತೆಗೆದುಕೊಂಡರು. ಚೀಲದಲ್ಲಿ ಐವತ್ತೇಳು ಸೆಂಟ್ ಗಳ ನಾಣ್ಯಗಳಿದ್ದವು. ಕಾಗದದಲ್ಲಿ "ಹೆಚ್ಚುಮಕ್ಕಳು ಕುಳಿತುಕೊಳ್ಳಬಹುದಾದ ಸಭಾಂಗಣಕ್ಕಾಗಿ ಕಳೆದೆರಡು ವರ್ಷಗಳಿಂದ ಕೂಡಿಟ್ಟ ಹಣದ ನನ್ನ ಪುಟ್ಟ ಕಾಣಿಕೆಯನ್ನುಸ್ವೀಕರಿಸಿ " ಎಂದಿತ್ತು. ಬಾಲಕಿಯ ಶ್ರದ್ದೆಯನ್ನು ಕಂಡು ಕಾನ್ವೆಲ್ ಕಣ್ಣೀರು ಸುರಿಸಿದರು.

ಕಾನ್ವೆಲ್ ಮುಂದಿನ ಪ್ರಾರ್ಥನಾ ಸಭೆಯಲ್ಲಿ ಬಾಲಕಿಯ ದೇಣಿಗೆಯನ್ನು ವಿವರಿಸಿದರು. ದೊಡ್ಡ ಸಭಾಂಗಣ ಕಟ್ಟಲು ಇದನ್ನುಉಪಯೋಗಿಸಲಾಗುವುದು ಎಂದು ಘೋಷಿಸಿದರು.. ಇದರಿಂದ ಉತ್ತೇಜಿತರಾದ ಸಭಿಕರು ಅಲ್ಲಿಯೇ ಮತ್ತಷ್ಟು ಸಹಾಯದವಾಗ್ದಾನ ಮಾಡಿದರು. ಸ್ಥಳೀಯ ದಿನಪತ್ರಿಕೆಯೊಂದು ಇದರ ಬಗ್ಗೆ ಲೇಖನ ಪ್ರಕಟಿಸಿತು. ಲೇಖನವನ್ನು ಓದಿದ ಒಬ್ಬ ಶ್ರೀಮಂತ ತನ್ನ ಜಮೀನನ್ನು ಮಾರಲು ಮುಂದಾದ. ಜೆಮೀನಿನ ಬೆಲೆ ಕೊಡುವಷ್ಟು ಹಣ ನಮ್ಮಲಿಲ್ಲವೆಂದು ತಿಳಿಸಿದಾಗ, ಆತ " ನಾನುಜಮೀನಿಗೆ ನಿರೀಕ್ಷಿಸುವ ಬೆಲೆ ಕೇವಲ ಐವತ್ತೇಳು ಸೆಂಟ್ ಗಳು ಎಂದ. ಅಷ್ಟನ್ನೇ ಪಡೆದು ಜಮೀನು ಬರೆದು ಕೊಟ್ಟ. ಇದಾದನಂತರ ಸಹಾಯದ ಸುರಿಮಳೆಯೇ ಆಯಿತು. ಕಟ್ಟಡ ನಿರ್ಮಾಣವಾಯಿತು.

ಅಮೇರಿಕಾದ ಫಿಲಿದೆಲ್ಪಿಯಾ ದಲ್ಲಿ ಕಟ್ಟಡವಿದೆ. ಸುಮಾರು ೩೩೦೦ ಜನ ಒಮ್ಮೆಲೇ ಕುಳಿತು ಕೊಳ್ಳಬಹುದಾದಷ್ಟುದೊಡ್ಡದಾಗಿದೆ. ಈಗ ಭಾನುವಾರದ ಶಾಲೆ ಟೆಂಪಲ್ ಯುನಿವರ್ಸಿಟಿ ಎಂಬ ಹೆಸರಿನಿಂದ ದೊಡ್ಡ ವಿಶ್ವವಿದ್ಯಾನಿಲಯವಾಗಿಬೆಳೆದಿದೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ ಸಭಾಂಗಣದಲ್ಲಿ ಸ್ಥಳವಿಲ್ಲವೆಂದು ಯಾವ ಮಕ್ಕಳನ್ನುಹಿಂತಿರುಗಿ ಕಳುಹಿಸುವ ಅವಶ್ಯಕತೆ ಇಲ್ಲವಾಗಿದೆ. ವಿಶ್ವವಿದ್ಯಾನಿಲಯದ ಪ್ರಮುಖ ಕಟ್ಟಡದ ಕೋಣೆಯೊಂದರಲ್ಲಿ ಐವತ್ತೇಳುಸೈಂಟ್ ಗಳನ್ನು ದಾನ ಮಾಡಿ ಇದಕ್ಕೆಲ್ಲ ಕಾರಣಳಾದ ಪುಟ್ಟ ಬಾಲಕಿಯ ಭಾವಚಿತ್ರವಿದೆ."

ಘಟನೆಯನ್ನು ಹೇಳಿದ ಗಣ್ಯರು ಈಗ ನಾನು ಹತ್ತು ಸಾವಿರ ರೂಪಾಯಿಗಳ ಮೊದಲನೆಯ ಕಂತು ಕೊಟ್ಟಿದ್ದೇನೆ. ಇದೆರೀತಿಯ ಕಂತುಗಳನ್ನು ಕಟ್ಟಡ ನಿರ್ಮಾಣದ ಪ್ರಗತಿಯನ್ನು ತೋರಿಸಿ ನೀವು ಪಡೆಯಬಹುದು ಎಂದಾಗ ಕಳೆಗುಂದಿದ್ದಸಮಿತಿಯವರ ಮುಖ ಮತ್ತೆ ಬೆಳಗತೊಡಗಿತು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧+೯೬೩೨೧೭೨೪೮೬

ದೇವರು ಸಮೀಪವಿದ್ದಾನೆ, ಅರ್ಥಾತ್ ಅವನು ನಿಮ್ಮಿಂದ ದೂರವಿದ್ದಾನೆ . ಎಂಬ ನಿಮ್ಮ ಭಾವನೆ ತಪ್ಪಾಗಿದೆ. ಹಾಗೆಯೇ ನೇರವಾಗಿ ಅವನನ್ನು ಕರೆದು ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ವನ್ನು ಪಡೆಯಲಾರಿರಿ ಎಂಬ ನಿಮ್ಮ ಭಾವನೆಯೂ ಸರಿಯಲ್ಲ. ನಿಮ್ಮಲ್ಲಿಪ್ರತಿಯೊಬ್ಬನು ತನ್ನ ಬಳಿಯೇ ದೇವನನ್ನು ಪಡೆಯಬಹುದು. ಅವನೊಡನೆ ಮೊರೆಯಿದಬಹುದು. ತನ್ನ ಬೇಡಿಕೆಗಳನ್ನು ನೇರವಾಗಿಅವನ ಮುಂದಿಡಬಹುದು . ಪ್ರತಿಯೋರ್ವ ದಾಸನ ಪ್ರಾರ್ಥನೆಗೂ ಅವನು ಸ್ವತ;ಉತ್ತರವೀಯುತ್ತಾನೆ. ವಿಶ್ವ ಒಡೆಯನ ಸನ್ನಿದಿ ಪ್ರತಿಯೊಬ್ಬನ ಪಾಲಿಗೂ ತೆರೆದಿರುವಾಗ ಮತ್ತು ಅದು ಪ್ರತಿಯೊಬ್ಬನಿಗೂ ಹತ್ತಿರದಲ್ಲಿರುವಾಗ ನೀವೇಕೆ ಅಜ್ಞಾನದಲ್ಲಿಬಿದ್ದುಕೊಂಡಿರುವಿರಿ. ಮತ್ತು ಮಧ್ಯವರ್ಥಿಗಳನ್ನು ಶಿಪ್ಹಾರನುದಾರರನ್ನು ಹುಡುಕುತ್ತಾ ಯಾಕೆ ತಿರುಗುತ್ತಿರುವಿರಿ !
-ಪವಿತ್ರ ಕುರ್ ಆನ್















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ