MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜುಲೈ 5, 2010

ಸರಿಯಾಗಿ ಯೋಚಿಸಿ ಕೆಲಸ ಮಾಡಿದರೆ ಎಲ್ಲದಕ್ಕೂ ಸಮಯಾವಕಾಶ ಮಾಡಿಕೊಳ್ಳ ಬಹುದು. ಯೋಚಿಸಿ ನೋಡಿ- ಮಾಡಿ ಗೆಲ್ಲಿ

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ವಂದನೆಗಳು.
ವ್ಯಕ್ತಿತ್ವ ವಿಕಾಸನ ತರಗತಿಯಲ್ಲಿ ಸಮಯ ನಿರ್ವಹಣೆಯ (ಟೈಮ್ ಮ್ಯಾನೇಜ್ಮೆಂಟ್) ಬಗ್ಗೆ ಉಪನ್ಯಾಸ ನಡೆಸುತ್ತಿದ್ದೆ. ಒಂದುಸಣ್ಣ ಪ್ರಯೋಗದ ನಂತರ ಉಪನ್ಯಾಸ ಎಂದು ಹೇಳಿ ವಿದ್ಯಾರ್ಥಿಗಳನ್ನು ನಾನು ನಿಂತಿರುವ ಮೇಜಿನ ಸುತ್ತ ನಿಲ್ಲುವಂತೆಹೇಳಿದೆ.ಮೇಜಿನ ಮೇಲೆ ಒಂದು ಅಗಲ ಬಾಯಿಯ ದೊಡ್ಡ ಗಾಜಿನ ಪಾತ್ರೆಯನ್ನು ಇಟ್ಟಿದ್ದೆ. ಮೇಜಿನ ಡ್ರಾಯರ್ ನಿಂದ ಒಂದು ಚೀಲಹೊರತೆಗೆದೆ. ಅದರಿಂದ ಮಧ್ಯಮ ಗಾತ್ರದ ಜೆಲ್ಲಿ ಕಲ್ಲುಗಳನ್ನು ತೆಗೆದೆ,ಪಾತ್ರೆಯಲ್ಲಿ ಜೆಲ್ಲಿಕಲ್ಲುಗಳನ್ನು ಎಚ್ಚರಿಕೆಯಿಂದ ಜೋಡಿಸಿದೆ. ಪಾತ್ರೆಯ ಬಾಯಿಯವರೆಗೂ ಜೆಲ್ಲಿಕಲ್ಲುಗಳನ್ನು ಜೋಡಿಸಿದೆ. ' ಈಗ ಪಾತ್ರೆಯಲ್ಲಿ ಖಾಲಿಜಾಗವಿದೆಯೇ ಎಂದು ವಿದ್ಯಾರ್ಥಿಗಳನ್ನುಕೇಳಿದೆ '. ವಿದ್ಯಾರ್ಥಿಗಳೆಲ್ಲ ಪಾತ್ರೆ ಜೆಲ್ಲಿ ಕಲ್ಲುಗಳಿಂದ ತುಂಬಿ ಹೋಗಿದೆ ., ಖಾಲಿಯಿಲ್ಲ ! ಎಂದರು.

ನಂತರ ನಾನು ನಗುತ್ತ ಮೇಜಿನ ಡ್ರಾಯರ್ ನಿಂದ ಮತ್ತೊಂದು ಚೀಲ ತೆಗೆದೆ. ಅದರಲ್ಲಿ ಮರಳಿತ್ತು. ಜೆಲ್ಲಿ ತುಂಬಿದ ಪಾತ್ರೆಗೆನಿಧಾನವಾಗಿ ಮರಳು ತುಂಬಿಸಿದೆ. 'ಜೆಲ್ಲಿ ಕಲ್ಲುಗಳ ಮಧ್ಯೆಯಿದ್ದ ಖಾಲಿ ಜಾಗದಲ್ಲೆಲ್ಲಾ ಮರಳು ತುಂಬಿಕೊಂಡಿತು.' ಈಗ ಪಾತ್ರೆಯಲ್ಲಿಇನ್ನೇನಾದರು ತುಂಬಲು ಸಾಧ್ಯವೇ ಎಂದು ವಿದ್ಯಾರ್ಥಿಗಳನ್ನು ಕೇಳಿದೆ. ವಿದ್ಯಾರ್ಥಿಗಳೆಲ್ಲ ' ಪಾತ್ರೆ ಈಗ ಜೆಲ್ಲಿ ಮತ್ತು ಮರಳಿನಿಂದತುಂಬಿ ಹೋಗಿದೆ. ಇನ್ನೇನು ತುಂಬಲು ಸ್ಥಳವಿಲ್ಲ ಎಂದರು. ನಂತರ ನಾನು ನಸು ನಗುತ್ತಾ ಡ್ರಾಯರ್ ನಿಂದ ಒಂದು ಶೀಶೆ ನೀರನ್ನುತೆಗೆದು, ಪಾತ್ರೆಗೆ ನಿಧಾನವಾಗಿ ನೀರು ಸುರಿಯುತ್ತ ಹೋದೆ. ಜೆಲ್ಲಿ ಮತ್ತು ಮರಳಿನ ಮಧ್ಯೆ ನೀರು ನಿಧಾನವಾಗಿ ತುಂಬಿಕೊಂಡಿತು. ' ಈಗ ಪಾತ್ರೆಗೆ ಇನ್ನು ಏನಾದರೂ ಹಾಕಬಹುದೇ ? 'ಎಂದು ಕೇಳಿದೆ. ವಿದ್ಯಾರ್ಥಿಗಳೆಲ್ಲ ' ಈಗ ಪಾತ್ರೆಯಲ್ಲಿ ಸ್ವಲ್ಪವೂ ಜಾಗಖಾಲಿಯಿಲ್ಲ . ' ಎಂದರು. ನಾನು ನಗುತ್ತಾ ಡ್ರಾಯರ್ ನಿಂದ ಸಕ್ಕರೆಯ ಪಾತ್ರೆಯನ್ನು ತೆಗೆದು . ಜೆಲ್ಲಿ, ಮರಳು ಮತ್ತು ನೀರಿನಿಂದತುಂಬಿದ್ದ ಪಾತ್ರೆಗೆ ಸಕ್ಕರೆಯನ್ನು ಚಿಮುಕಿಸುತ್ತ ಹೋದೆ. ಮೂರು ನಾಲ್ಕು ಚಮಚೆಯಷ್ಟು ಸಕ್ಕರೆ ಪಾತ್ರೆಯಲ್ಲಿದ್ದ ನೀರಿನಲ್ಲಿಕರಗಿತು. ನಂತರ ' ಈಗ ಪಾತ್ರೆಗೆ ಮತ್ತಿನ್ನೇನಾದರೂ ತುಂಬಬಹುದೇ ? ಎಂದು ಕೇಳಿದೆ. ವಿದ್ಯಾರ್ಥಿಗಳೆಲ್ಲ ಒಕ್ಕೊರಲಿನಿಂದ ' ಈಗ ಪಾತ್ರೆಗೆ ಏನನ್ನು ತುಂಬಲು ಸಾಧ್ಯವಿಲ್ಲ 'ಎಂದರು. ನಾನು ನಗುತ್ತಾ ಅಲ್ಲಿಯೇ ಇದ್ದ ಹೂವಿನ ಕುಂಡದಿಂದ ಕೆಲವು ಗುಲಾಬಿಹೂಗಳನ್ನು ಕಿತ್ತು ಪಾತ್ರೆಯ ಮೇಲ್ಬಾಗಕ್ಕೆ ಸಿಕ್ಕಿಸಿದೆ. ಜೆಲ್ಲಿ ಕಲ್ಲುಗಳು , ಮರಳು ಮತ್ತು ಸಕ್ಕರೆ ನೀರು ತುಂಬಿದ ಗಾಜಿನ ಪಾತ್ರೆಅದರ ಮೇಲೆ ಸಿಕ್ಕಿಸಿದ ಗುಲಾಬಿ ಹೂಗಳಿಂದ ನೋಡಲು ಸುಂದರವಾಗಿ ಕಾಣುತ್ತಿತ್ತು.

ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಲ್ಲರಿಗೂ ಅರ್ಥವಾಗುವ ರೀತಿ ರೀತಿ ಹೇಳಿದೆ. " ಪ್ರಯೋಗದಲ್ಲಿನ ದೊಡ್ಡಜೆಲ್ಲಿಕಲ್ಲುಗಳು ವೃತ್ತಿ ಸಂಬಂಧವಾಗಿ ಮಾಡಲೇಬೇಕಾದ ಕೆಲಸಗಳನ್ನು ಸೂಚಿಸುತ್ತವೆ. ಅವನ್ನು ಮಾಡಲು ಸಮಯವನ್ನುಹೊಂದಿಸಿಕೊಳ್ಳಲೇಬೇಕು. ಮರಳು ನಮ್ಮ ಕೌಟುಂಬಿಕ ಕಾರ್ಯಗಳನ್ನು ಸೂಚಿಸುತ್ತದೆ. ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿದರೆ ಜೆಲ್ಲಿಕಲ್ಲುಗಳ ಮಧ್ಯೆ ಮರಳು ತುಂಬಬಹುದು . ನೀರು ನಮ್ಮ ಸ್ವಂತದ ಕಾರ್ಯಗಳನ್ನು ಸೂಚಿಸುತ್ತದೆ. ಸಕ್ಕರೆಯು ಕಲೆ, ಸಂಸ್ಕೃತಿ ,ಸಮಾಜಕ್ಕೆ ಸಂಬಧಪಟ್ಟ ಕೆಲಸಗಳನ್ನು ಸೂಚಿಸುತ್ತದೆ. ಕೊನೆಯಲ್ಲಿ ಸಿಕ್ಕಿಸಿದ್ದ ಗುಲಾಬಿ ಬೌದ್ಧಿಕ ಅಥವಾ ಆತ್ಮೋಉನ್ನತಿಯ ಕಾರ್ಯಗಳನ್ನು ಸೂಚಿಸುತ್ತದೆ. ಸರಿಯಾಗಿ ಯೋಚಿಸಿ ಕೆಲಸ ಮಾಡಿದರೆ , ಎಲ್ಲದಕ್ಕೂ ಸಮಯಾವಕಾಶಮಾಡಿಕೊಳ್ಳ ಬಹುದೆಂಬುದನ್ನು ಪ್ರಯೋಗ ನಮಗೆ ತಿಳಿಸುತ್ತದೆ."ಎಂದು ಹೇಳಿ ಮತ್ತೆ ನಮ್ಮ ವಿಷಯಕ್ಕೆ ಬಂದೆ.

ನೀವು ನಿಮ್ಮ ಸಮಯವನ್ನು ಸರಿಯಾಗಿ ನಿರ್ವಹಿಸಲು ಕಲಿಯಿರಿ

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ.

ವಂದನೆಗಳು
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486

,
ಎಚ್ಚರಿಕೆ !
ಬದುಕು ಬದಲಾಗಬೇಕಾದರೆ
"ಹೊಂದಾಣಿಕೆ " ಎಂಬುದು ಮುಖ್ಯ !
ಹೊಂದಾಣಿಕೆ ಇಲ್ಲದ ಬದುಕು
"ಬಂದೂಕ್ " ಆಗಿ ಬಿಡುತ್ತದೆ. ಜೋಕೆ !

-ಎ. ಟಿ .ನಾಗರಾಜ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ