MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜುಲೈ 16, 2010

ಇಬ್ಬರು ಮಹಾನುಭಾವರ ಜೀವನದ ಘಟನೆಗಳು

ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

" ಪಂಡಿತ ವಿಷ್ಣು ದಿಗಂಬರ ಪಲುಸೇಕರ್" ಎಂಬ ಮಹಾನ್ ವಿದ್ವಾಂಸರು "ರಘುಪತಿ ರಾಘವ ರಾಜಾರಾಂ " ಮತ್ತು "ಸಾರೇ ಜಹಾಂಸೆ ಅಚ್ಚಾ " ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದವರು. ಮಹಾತ್ಮಗಾಂಧಿಯವರೊಂದಿಗೆ ಸತ್ಯಾಗ್ರಹಗಳಲ್ಲಿ ಭಾಗವಹಿಸಿದವರು . ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳಿಸಿದವರು. ಅಂದಿನಕಾಲದಲ್ಲಿ ರಾಜ-ಮಹಾರಾಜರು ಅಥವಾ ಶ್ರೀಮಂತರು ಮಾತ್ರ ಕೇಳುತ್ತಿದ್ದ ಸಂಗೀತವನ್ನು ಜನಸಾಮಾನ್ಯರೂ ಕೇಳುವಂತಾಗಬೇಕೆಂದು "ನಾಲ್ಕಾಣೆ "ತಿಕೀತ್ ಇಟ್ಟು ಸಂಗೀತ ಕಛೇರಿಗಳನ್ನು ಏರ್ಪಡಿಸುತ್ತಿದ್ದರು. ಬಂದ ಹಣದಿಂದ ಸಂಗೀತ ವಿದ್ಯಾಲಯ ನಡೆಸುತ್ತಿದ್ದರು . ಒಮ್ಮೆ ಒಂದು ಸಣ್ಣ ಊರಿನಲ್ಲಿ ಕಛೇರಿ ಏರ್ಪಾಡಾಗಿತ್ತು . ಸಂಗೀತ ಕೇಳಲು ಟಿಕೆಟ್ ಪಡೆದು ಬಂದಿದ್ದವರು ಕೇವಲ ಒಬ್ಬರು. ಆದರೂ ವಿಷ್ಣು ದಿಗಂಬರರು ಮೂರು ಗಂಟೆಗಳ ಕಾಲ ಆತನ ಮುಂದೆ ಹಾಡಿದರು. ಕೊನೆಯಲ್ಲಿ ಆತ ಪಂಡಿತರ ಬಳಿ ಬಂದು "ನಾಲ್ಕಾಣೆಗಾಗಿ ಇಷ್ಟೊಂದು ಹಾಡಿದ್ದಕ್ಕೆ ಧನ್ಯವಾದ ಅರ್ಪಿಸಿದ . "ನಾನು ನಾಲ್ಕಾಣೆಗಾಗಿ ಹಾಡಲಿಲ್ಲ, ನನ್ನ ಭಗವಂತನಿಗಾಗಿ ಹಾಡಿದೆ. ನನ್ನ ಆನಂದಕ್ಕಾಗಿ ಹಾಡಿದೆ . ನೀವು ಕೇಳಿಸಿಕೊಂಡಿರಿ ,ನಿಮಗೆ ಧನ್ಯವಾದಗಳು ಎಂದರು.

ಮತ್ತೊಬ್ಬ ಮಾಹಾನುಭಾವರು ಮನೆ ಮಾತಾಗಿರುವ ಕನ್ನಡ ನಾಟಕ ರಂಗದ ರೂವಾರಿ , ಅನೇಕ ವಿಕ್ರಮಗಳನ್ನು ಸ್ಥಾಪಿಸಿರುವ ,ಇವರ ನಾಟಕಗಳು ಸಾವಿರಾರು ಪ್ರದರ್ಶನಗಳನ್ನು ಕಂಡಿರುವ , ಮಾಸ್ಟರ್ ಹಿರಣ್ಣಯ್ಯ . ಇವರ ಮಾತುಗಳನ್ನು ಕೇಳುವುದೇ ಒಂದು ಆನಂದದಾಯಕ ಅನುಭವ. ವೇದಿಕೆಯ ಮೇಲಿರಲಿ ಅಥವಾ ಗೆಳೆಯರ ಮಧ್ಯದಲ್ಲಿರಲಿ ,ಅವರ ಮಾತುಗಳಲ್ಲಿ ನಗೆ ಬಾಂಬುಗಳು ಸಿಡಿಯುತ್ತಲೇ ಇರುತ್ತವೆ. ಬಹಳಷ್ಟು ಬಾರಿ ಅವರ ತಿಳಿನಗೆಯ ಹಿಂದೆ ಆಳವಾದ ವೇದಾನ್ತವೂ ,ಅಣಕವೂ ಅಡಗಿರುತ್ತದೆ.

೧೯೫೯ ರಲ್ಲಿ ಹೊಸದುರ್ಗದಲ್ಲಿ ಅವರ ನಾಟಕದ ಕ್ಯಾಂಪ್ ಪ್ರಾರಂಭ ವಾಯಿತಂತೆ. ದೊಡ್ಡ ಸಭಾಂಗಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಕುಳಿತು ನಾಟಕ ನೋಡುವ ವ್ಯವಸ್ಥೆಯಿತ್ತು . ನಾಟಕ ತಂಡದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಕಲಾವಿದರಿದ್ದರು. ಅಂದು ಸಂತೆಯ ದಿನವಾದ್ದರಿಂದ ಭಾರಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು ಏನು ಕಾರಣವೋ ಗೊತ್ತಿಲ್ಲ. ಟಿಕೇಟು ಖರೀದಿಸಿ ನಾಟಕ ನೋಡಲು ಬಂದವರು ಕೇವಲ ಆರು ಜನ. ಕಲಾವಿದರಿಗೆಲ್ಲ ನಿರಾಶೆಯಾಯಿತು. ಬಂದ ಆರೂ ಜನರಿಗೆ ಹಣ ಹಿಂತಿರುಗಿಸಿ ಪ್ರದರ್ಶನವನ್ನು ರದ್ದು ಮಾಡೋಣವೆಂಬ ಸಲಹೆಯನ್ನು ಮಾಸ್ಟರ್ ಹಿರಣ್ಣಯ್ಯ ನವರು ಒಪ್ಪಲಿಲ್ಲ . ಎಲ್ಲ ಕಲಾವಿದರನ್ನು ಕರೆದು " ನಾಟಕವನ್ನು ಸಂಪೂರ್ಣವಾಗಿ ಆಡೋಣ. ಯಾರೂ ಸಂಭಾಷಣೆಗಳನ್ನು , ಸನ್ನಿವೇಷಗಳನ್ನು ಕಡಿತಗೊಳಿಸಬಾರದು. ನಾಟಕ ನೋಡಲು ಬಂದಿರುವವರು ನಮ್ಮ ಅನ್ನದಾತರು. ಅವರು ಮೆಚ್ಚಿ ಅಹುದಹುದು ಎನ್ನುವಂತೆ ನಾಟಕ ಅಭಿನಯಿಸೋಣ " ಎಂದು ಹೇಳಿದರು. ಕಲಾವಿದರೆಲ್ಲ ಮಾಸ್ಟರ್ ಹಿರಣ್ಣಯ್ಯ ರವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿದರು. ನಾಟಕ ಎಂದಿಗಿಂತ ಹದಿನೈದು ನಿಮಿಸ ಹೆಚ್ಚಾಗಿಯೇ ನಡೆಯಿತು. ಹಿರಣ್ಣಯ್ಯ ರವರೆ ಹೇಳುವಂತೆ ಅಂದು ತುಂಬು ಮನಸ್ಸಿನಿಂದ ಕಲಾವಿದರು ಪಟ್ಟ ಆನಂದ ಪ್ರೇಕ್ಷಕರು ಪಟ್ಟ ಆನಂದಕ್ಕಿಂತ ಹೆಚ್ಚಾಗಿತ್ತು.

ಎರಡು ಜನರ ಅನುಭವದ ಘಟನೆ ಗಳ ಜತೆ ಗೆ ನನ್ನ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಅಂದು ನಾವು ಯಾವುದೋ ಒಂದು ವ್ಯಕ್ತಿ ವಿಕಾಸನ ತರಬೇತಿ ಯಾ ಜತೆಗೆ ನೇರ ಮಾರುಕಟ್ಟೆ ಬಗ್ಗೆ ಕಾರ್ಯಕ್ರಮ ಏರ್ಪಡಿಸಿದ್ದೆವು. ಕಾರ್ಯಕ್ರಮಕ್ಕಾಗಿ ಸಾವಿರಾರು ಬಿತ್ತಿ ಪತ್ರಗಳನ್ನು ಹಂಚಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಗೆ ಹೋಗುವ ಮಾರ್ಗದಲ್ಲಿ ಹೊಸರೋಡ್ ಎಂಬ ಊರಿದೆ . ಅಲ್ಲಿ ಒಂದು ಸ್ಕೂಲ್ ನಲ್ಲಿ . ಸುಮಾರು ನೂರು ಜನಕ್ಕೆ ಕೂರುವ ವ್ಯವಸ್ಥೆ ಮಾಡಿದ್ದೆವು. ಕಾರ್ಯಕ್ರಮಕ್ಕೆ ಬಂದವರು ಕೇವಲ ಎಂಟು ಜನ. ನನ್ನ ಜತೆಗಿದ್ದವರು ಹದಿನೈದು ಜನ ಸಹಾಯಕರು. ಅವರು ಬಂದವರನ್ನು ವಾಪಾಸು ಕಳುಹಿಸಿ ಮನೆಗೆ ಹೋಗೋಣ ಎಂದರು. ಆದರೆ ನಾನು ಅವರ ಮಾತುಗಳನ್ನು ಕೇಳಲಿಲ್ಲ . ಕಾರ್ಯಕ್ರಮ ಪ್ರಾರಂಭಿಸಿಯೇ ಬಿಟ್ಟೆ. ಅವರವರ ಭಾಗಗಳನ್ನು ಅವರವರು ಬಂದು ಮಾತನಾಡಲೇ ಬೇಕೆಂದು ಮನವೊಲಿಸಿದೆ. ಅವರು ಸಹಕರಿಸಿದರು. ಅವತ್ತಿನ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು. ಕಾರ್ಯಕ್ರಮ ನೋಡಲು ಬಂದವರು ರೀತಿ ಕಾರ್ಯ ಕ್ರಮ ಎಂದು ನಮಗೆ ಮೊದಲೇ ಗೊತ್ತಿದ್ದರೆ ನಮ್ಮ ಮನೆಯವರು ಹಾಗು ಸ್ನೇಹಿತರನ್ನು ಕರೆದುಕೊಂಡು ಬರುತ್ತಿದ್ದೆವು ಎಂದರು. ಅಂದು ನಾವು ಅವರ ತಲೆಯಲ್ಲಿರುವ , ಕಾಡುತ್ತಿರುವ ಚಿಂತೆಗಳನ್ನು ಹೇಗೆ ತೆಗೆದು ಹಾಕಬಹುದು , ಹೇಗೆ ಶ್ರೀಮಂತ ರಾಗಬಹುದು ಎಂಬ ಬಗ್ಗೆ ಚೆನ್ನಾಗಿಯೇ ತಿಳಿಯುವಂತೆ ಹೇಳಿದೆವು. ನಮ್ಮ ಮಾತುಗಳು ಎಷ್ಟು ಪ್ರಭಾವ ಬೀರಿತ್ತೆಂದರೆ ಶಾಲೆಯ ಪ್ರಿನ್ಚಿಪಾಲ್ ನಿಮ್ಮ ಯಾವುದೇ ಕಾರ್ಯ ಕ್ರಮಕ್ಕೆ ನಾವು ತುಂಬು ಹೃದಯದಿಂದ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು. ನನ್ನ ಜತೆಗಿದ್ದ ನನ್ನ ಸ್ನೇಹಿತರು ಬಹಳ ಸಂತೋಷ ಪಟ್ಟರು.

ಅಂದು ಎಲ್ಲಾದರು ಹಾಗೆಯೇ ನಿರಾಶೆಯಿಂದ ಬಂದಿದ್ದರೆ ಇಂದು ನಿಮ್ಮ ಮುಂದೆ ಇಷ್ಟೊಂದು ಸಲಿಗೆಯಿಂದ, ಪ್ರೀತಿಯಿಂದ, ಆತ್ಮಿಯತೆಯಿಂದ ಅನುಭವವನ್ನು ಹಂಚಿಕೊಳ್ಳಲು ಆಗುತ್ತಿರಲಿಲ್ಲವೇನೋ ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ

.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ